Home Posts tagged #hasana (Page 5)

ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮುಂದುವರಿಯಲಿದೆ: ಸಚಿವ ಕೆ ಗೋಪಾಲಯ್ಯ

ಹಾಸನ :ಮುಂದಿನ ಅವಧಿಯ 21 ತಿಂಗಳು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರದ ಮುಂದುವರಿಯಲಿದೆ ಇದರಲ್ಲಿ ಯಾವುದೇ ಗೊಂದಲ ಬೇಡ  ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ ಗೋಪಾಲಯ್ಯ ಸ್ಪಷ್ಟಪಡಿಸಿದರು. ನಗರದಲ್ಲಿ 75ನೇ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಸವರಾಜ ಬೊಮ್ಮಾಯಿ ಅವರು

ಬೇಲೂರಿನಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ಬೇಲೂರಿನ ಚೆನ್ನಕೇಶವ ದೇವಾಲಯ ಮುಂಭಾಗದಿಂದ 20 ಹೆಚ್ಚು ಟ್ಯಾಕ್ಟರ್ ಗಳ ಸಮೇತ ಪ್ರತಿಭಟನ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಕೇಂದ್ರ ಸರ್ಕಾರವು ಸಾಕಷ್ಟು ರೈತರು ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದು ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ರಾಜ್ಯ ಸರ್ಕಾರ ಕೂಡ ರೈತರ ಸಂಕಷ್ಟದಲ್ಲಿದ್ದರೂ ಸಾಲ ಮನ್ನಾ ಮಾಡದೆ ರೈತರನ್ನು

ಸಕಲೇಶಪುರದಲ್ಲಿ ಮಳೆ ಹಾನಿ ಪ್ರದೇಶಕ್ಕೆ ಸಚಿವ ಆರ್. ಅಶೋಕ್, ಗೋಪಾಲಯ್ಯ ಭೇಟಿ, ಪರಿಶೀಲನೆ

ಹಾಸನ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಹಾಸನ ಸಕಲೇಶಪುರದಲ್ಲಿ ಅಪಾರ ಹಾನಿ ಸಂಭವಿಸಿದ್ದು, ಇಂದು ಕಂದಾಯ ಸಚಿವ ಆರ್ ಆಶೋಕ್ ಮತ್ತು ಅಬಕಾರಿ ಸಚಿವರಾದ ಕೆ. ಗೋಪಾಲಯ್ಯ ಅವರು ಭೇಟಿ ನೀಡಿ ಅತಿವೃಷ್ಠಿ ಪ್ರದೇಶವನ್ನು ಪರಿಶೀಲಿಸಿದರು. ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್ 75 ರಲ್ಲಿ ಆಗಿರುವ ಭೂ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಆದಷ್ಟು ಶೀಘ್ರವಾಗಿ ರಸ್ತೆ ದುರಸ್ತಿ ಪಡಿಸುವಂತೆ ಸೂಚಿಸಿದರು. ಅತೀವೃಷ್ಠಿ

ಆಲೂರಿನಾದ್ಯಂತ ಭಾರೀ ಮಳೆ: ರೈತರ ಜಮೀನಿಗೆ ನುಗ್ಗಿದ ನೀರು

ಆಲೂರು: ಆಲೂರು ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ತಾಲೂಕು ಪಾಳ್ಯ ಹೋಬಳಿ ಮಡಬಲು ಗ್ರಾಮದ ಚಂದ್ರಶೇಖರ್ ಎಂಬುವವರ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಶುಂಠಿ ಬೆಳೆಗೆ ಶಂಕುತೀರ್ಥ ಹೊಳೆಯ ನೀರು ದಿಢೀರನೆ ನುಗ್ಗಿದ ಪರಿಣಾಮವಾಗಿ ಶುಂಠಿ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ. ಅಲ್ಲದೆ ಭತ್ತದ ನಾಟಿಗಾಗಿ ಸಿದ್ದಪಡಿಸಿದ್ದ ಸಸಿಗಳು ಕೂಡ ನೀರಿನಲ್ಲಿ ಕೊಚ್ಚಿ ಹೋಗಿರುವ ಪ್ರಸಂಗ ತಾಲೂಕಿನಲ್ಲಿ ನಡೆದಿದ್ದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ

ಬೈಲೂರಿನಲ್ಲಿ ಅಧಿಕಾರಿಗಳ ಮೌನಕ್ಕೆ ಬಲಿಯಾದ ರಂಗಮಂದಿರ

ಇದು ಇತಿಹಾಸ ಕಂಡಿರುವ ಪುರಾತನ ಮಂಟಪ, ಈ ಮಂಟಪ ಇರುವುದು ಯಾವುದು ಕುಗ್ರಾಮದಲ್ಲಿ ಅಲ್ಲ ಬದಲಾಗಿ ಇತಿಹಾಸ ಪ್ರಸಿದ್ಧ ಶಿಲ್ಪ ಕಲೆಗಳ ತವರೂರೆಂದೇ ಪ್ರಖ್ಯಾತ ಗೊಂಡಿರುವ ಊರಿನಲ್ಲಿ, ಅನೇಕ ಭಾರಿ ಈ ಮಂಟಪವನ್ನು ಅಭಿವೃದ್ಧಿ ಪಡಿಸಲು ಮನವಿ ಮಾಡಿದರು ಈ ಭಾಗದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ. ವಿಶ್ವ ವಿಖ್ಯಾತ ಬೇಲೂರು ಯಾರಿಗೆ ತಾನೆ ಗೊತ್ತಿಲ್ಲ ಹೇಳ್ರಿ,, ಈ ಪುಣ್ಯ ಕ್ಷೇತ್ರದ ದರ್ಶನಕ್ಕೆ

ಬೇಲೂರಿನಲ್ಲಿ ಅನಾಥ ಶವ ಅಂತ್ಯಸಂಸ್ಕಾರ

ಬೇಲೂರು ಪಟ್ಟಣ ಜೂನಿಯರ್ ಕಾಲೇಜು ಮೈದಾನದ ರಂಗ ಮಂಟಪದ ಜಗಲಿಯ ಮೇಲೆ ಮರಣ ಹೊಂದಿದ್ದ ಅನಾಥ ಶವವನ್ನು ಬೇಲೂರು ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಬೇಲೂರು ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ, ಹಿಂದೂ ಸಂಪ್ರದಾಯದಂತೆ ತಾಲೂಕು ಆಡಳಿತ ಸಹಕಾರದೊಂದಿಗೆ ಪುರಸಭೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜತೆ ಸೇರಿ ’ಗೌರವಯುತ’ ಶವಸಂಸ್ಕಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಡಾ. ರಮೇಶ್, ಸಂಪತ್ ಮಾಸ್ಟರ್, ಸಾಮಾಜಿಕ ಹೋರಾಟಗಾರ ಪತ್ರಕರ್ತ ನೂರ್ ಅಹಮದ್

ಎಚ್ ಆರ್ ಪಿ ಹಗರಣ : ಕಂದಾಯ ನಿರೀಕ್ಷಕ ಮಂಜುನಾಥ್ ಬಂಧನ

ಸಕಲೇಶಪುರ: ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿ ಮಂಜೂರು ಹಗರಣಕ್ಕೆ ಸಂಬಂಧಿಸಿದಂತೆ ಯಸಳೂರು ಕಂದಾಯ ನಿರೀಕ್ಷಕ ಮಂಜುನಾಥ್ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಇಡೀ ರಾಜ್ಯದ ಗಮನ ಸೆಳೆದಿರುವ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಎಚ್‌ಆರ್‌ಪಿ ಭೂ ಹಗಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾದವರ ಸಂಖ್ಯೆ ನಾಲ್ಕಕ್ಕೆ ಏರಿದೆ.   ಆಲೂರು ತಾಲ್ಲೂಕಿನ ಹೆಚ್‌ಆರ್‌ಪಿ  ಸಂತ್ರಸ್ತರಿಗೆ ಸಕಲೇಶಪುರ

ವಾಪಸ್ ಬಂದರೆ ಕ್ಷಮೆ ಇದೆ: ಬರಲಿಲ್ಲ ಅಂದ್ರೆ ನೋಟಿಸ್ ಕೊಡ್ತೀವಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ 

ಹಾಸನ: ಅಭಿವೃದ್ಧಿ ವಿಚಾರದಲ್ಲಿ ಹಾಗೂ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಇದರ ಜೊತೆಗೆ ಅರಸೀಕೆರೆಯ ಮಾಜಿ ನಗರಸಭಾ ಅಧ್ಯಕ್ಷ ಸಮೀವುಲ್ಲಾ ತೊಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ನೀಡಿ ಆಪರೇಷನ್ ಕಮಲಕ್ಕೆ ಸಿಲುಕಿ ಪಕ್ಷಾಂತರ ಮಾಡಿದ ಏಳು ಮಂದಿಗೆ ಈಗ ಜೆಡಿಎಸ್ ಪಕ್ಷ ವಿರೋಧಿ ಚಟುವಟಿಕೆಯ ಆಧಾರದ ಮೇಲೆ ನೋಟಿಸ್ ಜಾರಿ ಮಾಡಲು ಮುಂದಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದರು.   ಅವರು ಹಾಸನದಲ್ಲಿ ಸುದ್ದಿಗೋಷ್ಠಿ

ಬೇಲೂರಿನಲ್ಲಿ ವಲಯ ಅರಣ್ಯಾಧಿಕಾರಿಗಳಿಂದ ದಾಳಿ

ಬೇಲೂರು ವಲಯ ಅರಣ್ಯಾಧಿಕಾರಿ ಯಶ್ಮ ಮಾಚಮ್ಮ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಕಾಡುಪ್ರಾಣಿ ಬೇಟೆಯಾಡಲು ಬಳಸಿದ್ದ 3 ಬಂಧೂಕು, 3 ದ್ವಿಚಕ್ರ ವಾಹನ ಹಾಗೂ ಒಂದು ಆಲ್ಟೋ ಕಾರನ್ನು ವಶಪಡಿಸಿಕೊಂಡಿದ್ದಾರೆ. ಬೇಲೂರು ವಲಯ ಕಲ್ಲಳ್ಳಿ ಅರಣ್ಯ ಮೀಸಲು ಪ್ರದೇಶದಲ್ಲಿ ಕಾಡುಪ್ರಾಣಿ ಬೇಟೆಯಾಡಲು ಸಂಚುರೂಪಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಆರೋಪಿಗಳು ಪರಾರಿಯಾಗಿದ್ದರು. ಬೇಟೆಯಾಡಲು ಬಳಸಿದ್ದ ಬಂಧೂಕು ಹಾಗೂ ವಾಹನಗಳನ್ನು

ಹಾಸನದಲ್ಲಿ ಬೆಂಕಿ ತಗುಲಿ ಸುಟ್ಟು ಕರಕಲಾದ ಬೇಕರಿ : ಸಹಾಯ ಹಸ್ತ ಚಾಚಿದ ಜೈ ಕರ್ನಾಟಕ ಸಂಘ

ಒಂದೆಡೆ ಕೊರೊನಾ ಎಂಬ ಮಹಾಮಾರಿ ಮನುಷ್ಯನನು ಪಾತಳಕ್ಕೆ ತೊರೆಯುತ್ತಿದ್ದರೆ ಇನ್ನೊಂದು ಕಡೆ ಬೇಕರಿ ಕಾರ್ಮಿಕರ ಬದುಕು ಹೀನಾಯ ಸ್ಥಿತಿ ತಲುಪಿದೆ. ದಿನ ಬೆಳಗಾದರೆ ಬೇಕರಿ ಪದಾರ್ಥಗಳನ್ನು ಮಾರಿ ಬದುಕುವ ಬೇಕರಿ ಕಾರ್ಮಿಕರು ಇಂದು ಬೇಕರಿಗಳನ್ನು ಮುಚ್ಚಿರುವ ಕಾರಣ ಸಾಕಷ್ಟು ನಷ್ಟದಲ್ಲಿ ಸಿಲುಕಿದ್ದಾರೆ. ಹೀಗಿರುವಾಗ ಹಾಸನ ಅಯ್ಯಂಗಾರ್ ಬೇಕರಿ ಸುಟ್ಟು ಕರಕಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಬಂಟಕಲ್‍ನಲ್ಲಿ ವೆಂಕಟೇಶ್ ಎಂಬುವವರಿಗೆ ಸೇರಿದ ಹಾಸನ್ ಅಯ್ಯಂಗಾರ್ ಬೇಕರಿ