Home Posts tagged #mangalore (Page 316)

ಹತ್ತು ದಿವಸಗಳ ಒಳಗಾಗಿ ಮಂಗಳೂರು ವಿವಿ ಫಲಿತಾಂಶ ಬಿಡುಗಡೆ : ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಪ್ರಶ್ನೆಗೆ ಸದನದಲ್ಲಿ ಭರವಸೆ

ಮಂಗಳೂರು ವಿಶ್ವವಿದ್ಯಾನಿಲಯದ ಫಲಿತಾಂಶ ವಿಳಂಬದ ಬಗ್ಗೆ ಸದನದಲ್ಲಿ ಸರಕಾರವನ್ನು ಪ್ರಶ್ನಿಸಿದ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಫಲಿತಾಂಶ ವಿಳಂಬದಿಂದಾಗಿ ವಿದ್ಯಾರ್ಥಿಗಳಿಗೆ ತನ್ನ ಹಿಂದಿನ ವರ್ಷದ ಫಲಿತಾಂಶ ತಿಳಿಯದೆ ಮುಂದಿನ ವರ್ಷಕ್ಕಾಗಿ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಗೊಂದಲ,ಅದೇ ರೀತಿ ಹಾಸ್ಟೆಲ್ ಗಳಲ್ಲಿ ಗೊಂದಲ ಮುಂತಾದ ವಿಚಾರಗಳ ಬಗ್ಗೆ ಸದನದಲ್ಲಿ

ಡಿ. 24, : ಕ್ರಿಯೇಟಿವ್’ ಪದವಿಪೂರ್ವ ಕಾಲೇಜಿನಲ್ಲಿ‘ಕ್ರಿಯೇಟಿವ್ ಆವಿರ್ಭವ್ 2022’

ಉಡುಪಿ ಜಿಲ್ಲೆಯ ಕಾರ್ಕಳದ ಹಿರ್ಗಾನದಲ್ಲಿರುವ ‘ಕ್ರಿಯೇಟಿವ್’ ಪದವಿಪೂರ್ವ ಕಾಲೇಜಿನಲ್ಲಿ ಡಿಸೆಂಬರ್ 24, 2022 ರ ಶನಿವಾರದಂದು ‘ಕ್ರಿಯೇಟಿವ್ ಆವಿರ್ಭವ್ 2022’ ಕಾಲೇಜು ವಾರ್ಷಿಕೋತ್ಸವ ‘ಸಪ್ತಗಿರಿ ಕ್ಯಾಂಪಸ್’ನಲ್ಲಿ ನಡೆಯಲಿದೆ. ಈ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಲು ಕರ್ನಾಟಕ ಸರ್ಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ. ಸುನಿಲ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಇವರೊಂದಿಗೆ ಇನ್ನಿತರೆ ಗಣ್ಯಾತಿ ಗಣ್ಯರು ಕೂಡ

ಮಂಜೇಶ್ವರದ ಜೋಡುಕಲ್ಲಿನಲ್ಲಿ ಅಕ್ರಮ ಮರಳು ದಂಧೆ : 3 ಟಿಪ್ಪರ್ ಲಾರಿಗಳ ವಶ

ಮಂಜೇಶ್ವರ: ಜೋಡುಕಲ್ಲಿನ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಮಂಜೇಶ್ವರ ಪೊಲೀಸರು ನಡೆಸಿದ ದಾಳಿಯಲ್ಲಿ 3 ಟಿಪ್ಪರ್ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅನಧಿಕೃತ ಮರಳಿನ ದಿಬ್ಬವನ್ನು ಕೆಡವಲಾಯಿತು. ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಂಜೇಶ್ವರ ಎಸ್ಸೈ ಅನ್ಸಾರ್ ರವರ ನೇತೃತ್ವದಲ್ಲಿ ದಾಳಿ ನಡೆದಿದೆ. ಮರಳು ಸಾಗಾಟಕ್ಕೆ ಬಂದಿದ್ದ ಮೂರು ಟಿಪ್ಪರ್ ಲಾರಿಗಳನ್ನು ವಶಕ್ಕೆ ತೆಗೆಯಲಾಗಿದೆ. ಮೂವರು ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅನಧಿಕೃತ

ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ : ಆರೋಪಿಗಳ ಬಂಧನ

ಕಾರ್ಕಳ: ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಲ್ಯಾ ಗ್ರಾಮದ ಉಷಾ ಜಗದೀಶ್ ಅಂಚನ್ ಅವರ ಮನೆ ಕಳ್ಳತನದ ಆರೋಪಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಬಂಟ್ವಾಳ ಅರಂಬೋಡಿ ನಿವಾಸಿ ಪ್ರಸಾದ್ @ಪಚ್ಚು (34) ಮತ್ತು ಆತನಗೆ ಸಹಕರಿಸಿದ ಕಲ್ಯಾ ನಿವಾಸಿ ಶಿಬಾ (39) ಎಂದು ಗುರುತಿಸಲಾಗಿದೆ. ಡಿಸೆಂಬರ್ 3 ರಂದು ರಾತ್ರಿ 08-30 ರಿಂದ 10:00 ಗಂಟೆಯ ಮದ್ಯೆ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಲ್ಯಾ ಗ್ರಾಮದ ಉಷಾ ಜಗದೀಶ್ ಅಂಚನ್ ಎಂಬವರ ಮನೆಯ ಬಾಗಿಲನ್ನು ಯಾರೋ

ಮೂಡುಬಿದರೆಯ ಮುಖ್ಯ ರಸ್ತೆಯಲ್ಲಿ ಅಳವಡಿಸಲಾದ ದಾರಿದೀಪ : ಶಾಸಕ ಉಮಾನಾಥ ಎ ಕೋಟ್ಯಾನ್ ಅವರಿಂದ ಲೋಕಾರ್ಪಣೆ

ಮೂಡುಬಿದಿರೆ: ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಮಂಜೂರಾದ ರೂ.33.50 ಲಕ್ಷ ಅನುದಾನದಲ್ಲಿ ಮೂಡುಬಿದಿರೆಯ ಮುಖ್ಯ ರಸ್ತೆಯಲ್ಲಿ ಅಳವಡಿಸಲಾದ ದಾರಿದೀಪಗಳನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಲೋಕಾರ್ಪಣೆಗೊಳಿಸಿದರು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ,ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ದಿವ್ಯಾ ಜಗದೀಶ್, ಸ್ವಾತಿ ಪ್ರಭು, ಸೌಮ್ಯ ಶೆಟ್ಟಿ, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ

ಮಂಗಳೂರಿನ ಪೂಮಾ ಮಳಿಗೆ ಶುಭಾರಂಭ

ಮಂಗಳೂರಿನ ಬಂಟ್ಸ್‍ಹಾಸ್ಟೆಲ್‍ನಲ್ಲಿರುವ ಮೆರೈನ್ ಪ್ಯಾರಡೈಸ್ ಪ್ಲಾಜಾದಲ್ಲಿ ಪೂಮಾ ಮಳಿಗೆ ಶುಭಾರಂಭಗೊಂಡಿತು. ಒಂದೇ ಸೂರಿನಡಿಯಲ್ಲಿ ಪೂಮಾ ಕಂಪೆನಿಯ ವಸ್ತ್ರಗಳು ಮತ್ತು ಶೂಷ್, ಆಕ್ಸೆಸಸರೀಸ್‍ಗಳು ಲಭ್ಯವಿದೆ. ನೂತನ ಮಳಿಗೆಯನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹ್ಯಾಂಗ್ಯೋ ಐಸ್‍ಕ್ರೀಮ್ ಪ್ರೈವೆಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರದೀಪ್

ಡಿ.11ರ ಮನೆ ಕಳ್ಳತನ ಪ್ರಕರಣದ ಆರೋಪಿಯ ಬಂಧನ

ಉಡುಪಿ ತಾಲೂಕು ಶಿವಳ್ಳಿಯಲ್ಲಿ ಡಿ.11ರಂದು ನಡೆದಿದ್ದ ಮನೆ ಕಳ್ಳತನ ಪ್ರಕರಣದ ಆರೋಪಿಯನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಆಶ್ರಯ ಬಡಾವಣೆ ನಿವಾಸಿ ಸಾಧಿಕ್ ಉಲ್ಲಾ (35) ಬಂಧಿತ ಆರೋಪಿ. ಉಡುಪಿ‌ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಈತನನ್ನು‌ ಬಂಧಿಸಿದ್ದು ಶಿಕಾರಿಪುರದ ತನ್ನ ಮನೆಯಲ್ಲಿಟ್ಟಿದ್ದ ಕಳವು‌ಮಾಡಿಕೊಂಡು ಹೋದ 4 ಲಕ್ಷ 35 ಸಾವಿರ ಮೌಲ್ಯದ ವಜ್ರದ ಉಂಗುರ, ಚಿನ್ನಾಭರಣ, ಬೆಳ್ಳಿ ಗಟ್ಟಿ, ಬೆಳ್ಳಿ ಆಭರಣ

ವಿಟ್ಲ : ಹೊಂಡದಲ್ಲಿ ಮೃತದೇಹ ಹಾಗೂ ಮೊಬೈಲ್ ಪತ್ತೆ

ವಿಟ್ಲ: ಪುಣಚ ಗ್ರಾಮದ ನೆಲ್ಲಿಗುಡ್ಡೆ ಜರಿಮೂಲೆ ಸಮೀಪ ಹೊಂಡದಲ್ಲಿ ಮೃತದೇಹ ಹಾಗೂ ಮೊಬೈಲ್ ಪತ್ತೆಯಾದ ಘಟನೆ ನಡೆದಿದೆ. ಸೊಪ್ಪು ಸೌದೆ ತರಲು ಗುಡ್ಡಕ್ಕೆ ಹೋದ ಸ್ಥಳೀಯ ನಿವಾಸಿಗಳಿಗೆ ಮೊಬೈಲ್ ಪತ್ತೆಯಾಗಿದೆ. ಇದನ್ನು ಗಮನಿಸಿ ಅಕ್ಕಪಕ್ಕದ ನೋಡಿದಾಗ ಮೃತದೇಹ ಪತ್ತೆಯಾಗಿದ್ದು, ಭಯಗೊಂಡು ಓಡಿಹೋಗಿದ್ದಾರೆನ್ನಲಾಗಿದೆ. ಪಕ್ಕದಲ್ಲಿರುವ ಮರದಲ್ಲಿ ಬಳ್ಳಿಯೊಂದು ನೇತಾಡುತ್ತಿದ್ದು, ಮೃತದೇಹ ನೆಲದಲ್ಲಿ ಬಿದ್ದುಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ

ದೇರಳಕಟ್ಟೆ ಫ್ಲಾಟ್‍ನಲ್ಲಿ ತಪ್ಪಿದ ಭಾರೀ ಅಗ್ನಿ ಅವಘಢ

ಉಳ್ಳಾಲ: ದೇರಳಕಟ್ಟೆ ಎರಡು ಆಸ್ಪತ್ರೆಗಳ ನಡುವೆ ಇರುವ ಫ್ಲಾಟ್ ಒಂದರಲ್ಲಿ ಅಗ್ನಿ ಅವಘಢ ಸಂಭವಿಸಿದ್ದು, ಫ್ಲಾಟ್ ನ ಮೆನೇಜರ್ ಸಮಯಪ್ರಜ್ಞೆಯಿಂದ 100ಕ್ಕೂ ಅಧಿಕ ಮಂದಿಯಿರುವ 13 ಮಹಡಿಗಳ ಫ್ಲಾಟ್‍ನಲ್ಲಿ ಅಗ್ನಿ ದುರಂತ ತಪ್ಪಿದೆ. ದೇರಳಕಟ್ಟೆ ಕ್ಷೇಮ ಆಸ್ಪತ್ರೆ ಬಳಿಯಿರುವ ಫ್ಲಾಮ ನೆಸ್ಟ್ ಫ್ಲಾಟ್‍ನಲ್ಲಿ ಅಗ್ನಿ ಅವಘಢ ಸಂಭವಿಸಿರುವುದು.ಫ್ಲಾಟ್‍ನ 202ರ ರೂಮಿನಲ್ಲಿ ದಂತ ವೈದ್ಯಕೀಯ ಕಲಿಯುವ ಇಬ್ಬರು ವಿದ್ಯಾರ್ಥಿನಿಯರಿದ್ದು, ಡಿ.20 ರ

ಅಪ್ರಾಪ್ತ ಬಾಲಕಿಯ ಜೊತೆ ಅಸಭ್ಯ ವರ್ತನೆ ಪ್ರಕರಣ : ಮೂಲ್ಕಿ- ಕೆರೆಕಾಡು ಗ್ರಾಮಸ್ಥರಿಂದ ಪೊಲೀಸ್ ಠಾಣೆಗೆ ಮುತ್ತಿಗೆ

ಮೂಲ್ಕಿ- ಕಳೆದ ಕೆಳ ದಿನಗಳ ಹಿಂದೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆರೆಕಾಡು ಎಂಬಲ್ಲಿ ಆರೋಪಿ ಹಳೆಯಂಗಡಿ ಇಂದಿರಾ ನಗರದ ನಿವಾಸಿ ದಾವುದ್ ಹಕೀಮ್ ಎಂಬಾತ ಅಪ್ರಾಪ್ತ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಲ್ಕಿ ಪೆÇಲೀಸರು ಪ್ರಕರಣದ ತನಿಖೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕೆರೆಕಾಡು ಗ್ರಾಮಸ್ಥರು ಮುಲ್ಕಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಮುಲ್ಕಿ