Home Posts tagged #mangalore (Page 393)

ಅಮೃತ ಪ್ರಕಾಶ ಪತ್ರಿಕೆಯ 9ನೇ ವಾರ್ಷಿಕೋತ್ಸವ : ವಿಶೇಷ ಸಂಚಿಕೆ ಬಿಡುಗಡೆ

ಡಾ.ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆಯ 9ನೇ ವಾರ್ಷಿಕೋತ್ಸವ ಅಮೃತ ಪ್ರಕಾಶ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಅಮೃತ ಪ್ರಕಾಶ ವಿಶೇಷ ಸಂಚಿಕೆಯನ್ನ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಎಂ.ಪಿ.ಶ್ರೀನಾಥ ಅವರು ಬಿಡುಗಡೆಗೊಳಿಸಿದ್ರು. ಈ ವೇಳೆ ಮಾತನಾಡಿದ ಅವರು,

ಕಂಕನಾಡಿ ನಗರ ಠಾಣೆ : ಇಬ್ಬರು ರೌಡಿಗಳ ಮೇಲೆ ಗೂಂಡಾ ಕಾಯ್ದೆ

ಕಂಕನಾಡಿ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಇಬ್ಬರು ರೌಡಿಗಳ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ.ಪಡೀಲ್ ಜಲ್ಲಿಗುಡ್ಡೆ ನಿವಾಸಿ ಪ್ರೀತಂ ಪೂಜಾರಿ (26) ಮತ್ತು ಪಡೀಲ್ ಅಳಪೆ ನಿವಾಸಿ ಧೀರಜ್ (27) ವಿರುದ್ಧ ಗೂಂಡಾ ಕಾಯ್ದೆ ಹೇರಲಾಗಿದೆ. ಪ್ರೀತಂ ಪೂಜಾರಿ ವಿರುದ್ಧ ಕಂಕನಾಡಿ ನಗರ, ಗ್ರಾಮಾಂತರ, ಕದ್ರಿ, ಬಂದರು ಠಾಣೆಗಳಲ್ಲಿ ಕೊಲೆ ಯತ್ನ, ಕೊಲೆ ಬೆದರಿಕೆ, ಹಲ್ಲೆ, ದರೋಡೆ, ಗಾಂಜಾ ಸೇವನೆ ಸೇರಿ 12

ಉಳ್ಳಾಲ : ಕರಾವಳಿಯ ಅತೀ ಎತ್ತರದ ಧ್ವಜ ಸ್ತಂಭ

ಉಳ್ಳಾಲ ನಗರಕ್ಕೆ ಪ್ರವೇಶಿಸುವ ಹೆಬ್ಬಾಗಿಲಾಗಿರುವ ಓವರ್ ಬ್ರಿಡ್ಜ್ ಬಳಿ ನಿರ್ಮಾಣಗೊಳ್ಳಲಿರುವ 110 ಅಡಿ ಎತ್ತರದ ಧ್ವಜಸ್ತಂಭ ಏರಿಸುವ ಕಾರ್ಯ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆ ನಡೆಯಲಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಉಳ್ಳಾಲ ಓವರ್ ಬ್ರಿಡ್ಜ್ ಬಳಿ ಮಂಗಳವಾರ ಕಾಮಗಾರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಳ್ಳಾಲದ ಜನತೆಯ ಗೌರವದ ಸಂಕೇತವಾಗಿ ಈ ಧ್ವಜ ಸ್ತಂಭ ನಿರ್ಮಾಣವಾಗಿದೆ. ಅದರ ಮೇಲೆ ತ್ರಿವರ್ಣ ಧ್ವಜ ಹಾರಾಡಲಿದ್ದು

ಯುವಕರ ಮಧ್ಯೆ ಹೊಡೆದಾಟ ಸುಳ್ಯ ತಾಲೂಕಿನ ಕಳೆಂಜ ಎಂಬಲ್ಲಿ ಘಟನೆ

ಸುಳ್ಯ: ಮಂಗಳವಾರ ತಡ ರಾತ್ರಿ ತಂಡವೊಂದು ಯುವಕನ ಮೇಲೆ ಸೋಡಾ ಬಾಟಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳ್ಳಾರೆಯ ಕಳಂಜ ಎಂಬಲ್ಲಿ ಕಳೆದ ರಾತ್ರಿ ಈ ಹಲ್ಲೆ ನಡೆದಿದ್ದು ಮಸೂದ್ (19) ಎಂಬವರು ಗಂಭೀರವಾಗಿ ಗಾಯಗೊಂಡವರು . ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ ಮಸೂದ್ ಮೂಲತ: ಕಳಂಜದ ನಿವಾಸಿ ಅಲ್ಲ ಎನ್ನುವ

ಮಕ್ಕಳಲ್ಲಿ ಪರಿಸರ ಪ್ರಜ್ಞೆ ಅತೀ ಅಗತ್ಯ :ಡಾ|| ಚೂಂತಾರು

ಶಾಲೆಯಲ್ಲಿ ಪಾಠ ಮಾಡುವುದರ ಜೊತೆಗೆ ಶಿಕ್ಷಕರು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಆರೋಗ್ಯ, ಕಾಳಜಿ, ಸಾಮಾಜಿಕ ಹೊಣೆಗಾರಿಕಿ ಮತ್ತು ಸಾಮಾನ್ಯ ಪ್ರಜ್ಞೆಗಳ ಬಗ್ಗೆಯೂ ಜಾಗೃತಿ ಮೂಡಿಸಬೇಕು. ಬರೀ ಪಾಠ ಹೇಳಿಕೊಡುವುದರಿಂದ ಮಕ್ಕಳ ಜ್ಞಾನ ವೃದ್ಧಿಯಾಗಬಹುದೇ ಹೊರತು ಅವರು ಪ್ರಜ್ಞಾವಂತ ನಾಗರಿಕರಾಗಲು ಸಾಧ್ಯವಿಲ್ಲ. ಮಕ್ಕಳ ಪರಿಪೂರ್ಣ ವ್ಯಕ್ತಿತ್ವದ ನಿರ್ಮಾಣವಾಗಲು ಪಠ್ಯದ ಜೊತೆಗೆ ಸಾಮಾಜಿಕ ಕಾಳಜಿ, ಸಾಮಾಜಿಕ ಬದ್ಧತೆ, ದೇಶಪ್ರೇಮ ಪರಿಸರ ಕಾಳಜಿ ಬೆಳೆಸುತ್ತದೆ. ಈಗಿನ

ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‍ನ ಅರೋಹಣ -2022 ಕ್ರೀಡಾಕೂಟ

ಮಂಗಳೂರಿನ ಆಶೋಕನಗರದ ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‍ನ ಅರೋಹಣ – 2022 ಕ್ರೀಡಾ ಕೂಟವನ್ನು ನಗರದ ಮಂಗಳಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಗರದ ಎಸ್.ಸಿ.ಎಸ್. ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್‍ನ ಅರೋಹಣ – 2022 ಕ್ರೀಡಾ ಕೂಟಕ್ಕೆ ಚಾಲನೆ ಸಿಕ್ಕಿತ್ತು. ಇನ್ನು ಕ್ರೀಡಾಕೂಟಕ್ಕೆ ಎಸ್.ಸಿ.ಎಸ್.ಗ್ರೂಫ್ ಆಫ್ ಇನ್ಸ್‍ಟ್ಯೂಷನ್‍ನ ಆಡಳಿತಾಧಿಕಾರಿ

ಉತ್ತಮ ಸಂಸ್ಕಾರವೇ ಬದುಕಿನ ಶ್ರೀಮಂತಿಕೆ: ಗಣೇಶ್ ಅಮೀನ್ ಸಂಕಮಾರ್

ಉತ್ತಮ ಸಂಸ್ಕಾರವೇ ಬದುಕಿನ ಶ್ರೀಮಂತಿಕೆ ಗುರುಪೂರ್ಣಿಮೆಯ ಮೂಲತತ್ವ ಬೌದ್ಧಿಕ ವಿಕಾಸ ಎಂದು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಕೇಂದ್ರ ಮಂಗಳೂರು ಯೂನಿವರ್ಸಿಟಿಯ ನಿರ್ದೇಶಕ ತುಳು ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ನುಡಿದರು.ಮಂಗಳೂರಿನ ಕೊಟ್ಟಾರದ ಭರತಾಂಜಲಿ ರಿಜಿಸ್ಟರ್ ಇದ್ರ ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರ ಕಾಟಿಪಳ್ಳ ಇವರ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಗುರು ಪೂರ್ಣಿಮಾ ಉತ್ಸವ

ಅದಮಾರಿನಲ್ಲಿ ಕೆಸರ್ಡ್ ಗೊಬ್ಬು ಪಂಥ

ಅದಮಾರು ಆದರ್ಶ ಸಂಘಗಳ ಒಕ್ಕೂಟ ರಾಷ್ಟ್ರೀಯ ಸೇವಾ ಯೋಜನೆ, ಪಿಪಿಸಿ ಅದಮಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಎರ್ಮಾಳು ಮೂಡಬೆಟ್ಟು ದಿವಂಗತ ಜಗನ್ನಾಥ ಶೆಟ್ಟಿ ಅವರ ಗದ್ದೆಯಲ್ಲಿ ಕೆಸರ್ಡ್ ಗೊಬ್ಬು ಪಂಥ ನೆರವೇರಿತು. ಕಾರ್ಯಕ್ರಮವನ್ನು ಉದ್ಯಮಿ ಉದಯ ಕೆ. ಶೆಟ್ಟಿ ಎರ್ಮಾಳು ಉದ್ಘಾಟಿಸಿದರು. ಈ ಸಂದರ್ಭ ಅವರ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ನಾವು ನಮ್ಮ ಮಕ್ಕಳಿಗೆ ಕೃಷಿಯ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಆದರ್ಶ ಯುವಕಮಂಡಲ ಮಾಡುತ್ತಿರುವ ಕೆಲಸ

ಪ್ರಣವಾನಂದ ಸ್ವಾಮೀಜಿಯವರನ್ನು ಭೇಟಿಯಾದ
ಸಚಿವ ಸುನೀಲ್

ಬೆಂಗಳೂರಿನ ಖಾಸಗಿ ಹೋಟೆಲಲ್ಲಿ ಪರಮಪೂಜ್ಯ ಡಾಕ್ಟರ್ ಪ್ರಣವಾನಂದ ಸ್ವಾಮೀಜಿಯವರನ್ನು ಕುಲಬಾಂಧವರು ಹಾಗೂ ರಾಜ್ಯದ ಇಂಧನ ಸಚಿವರು ಆಗಿರುವ ಶ್ರೀ ಸುನಿಲ್ ಕುಮಾರ್ ಅವರು ಭೇಟಿ ಮಾಡಿ ಕೇಂದ್ರ ಆರ್ಯ ಈಡಿಗ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುವ ಹೋರಾಟಗಳ ಬಗ್ಗೆ ಮತ್ತು ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಚರ್ಚಿಸಿದರು. ಕೂಡಲೇ ಒಂದು ವಾರದ ಒಳಗೆ ಕೇಂದ್ರ ಹೋರಾಟ ಸಮಿತಿಯನ್ನು ಕರೆಸಿ ಮತ್ತು ರಾಜ್ಯದ ಅಬಕಾರಿ ಸಚಿವರಾದ ಶ್ರೀ ಗೋಪಾಲಯ್ಯ ಅವರನ್ನು ಕೂಡ

ಬಿಲ್ಲವ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಕೂಡಲೇ ಅಂತಿಮ ಹಾಡಬೇಕು : ಪ್ರಣವಾನಂದ ಸ್ವಾಮೀಜಿ

ಬೆಂಗಳೂರಿನ ವಿಧಾನಸೌಧದಲ್ಲಿ ಕುಲಬಾಂಧವರು ಹಾಗೂ ರಾಜ್ಯದ ಹಿರಿಯ ಸಚಿವರಾಗಿರುವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ಜೊತೆ ಹಾಗೂ ರಾಜ್ಯದ ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ ಆರ್ಯ ಈಡಿಗ ಕೇಂದ್ರ ಹೋರಾಟ ಸಮಿತಿ ಹಾಗೂ ಬಿಲ್ಲವ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಕೂಡಲೇ ಅಂತಿಮ ಹಾಡಬೇಕು ಎಂದು ಶ್ರೀಗಳು ಚರ್ಚಿಸಿದರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಮುದಾಯದ ಸಚಿವರಾದ ಶ್ರೀ ಕೊಟ ಶ್ರೀನಿವಾಸ್