Home Posts tagged #mangaluru (Page 12)

ಮಂಜೇಶ್ವರ: ಸ್ನೇಹಾಲಯದಲ್ಲಿ ನಿವಾಸಿಗಳು ಮತ್ತು ಸಿಬ್ಬಂದಿಗಳಿಂದ ಹಬ್ಬದ ಸಂಭ್ರಮ

ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಪ್ರಮುಖ ಸಂಸ್ಥೆಯಾದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ಡಿಸೆಂಬರ್ 21 ರಂದು ತನ್ನ ನಿವಾಸಿಗಳಿಗೆ ಕ್ರಿಸ್‌ಮಸ್ ಆಚರಣೆಯನ್ನು ಏರ್ಪಡಿಸಿತ್ತು. ನಿವಾಸಿಗಳು ಮತ್ತು ಸಿಬ್ಬಂದಿ ವರ್ಣರಂಜಿತ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಸಿಬ್ಬಂದಿ ಮತ್ತು ನಿವಾಸಿಗಳು ಪ್ರದರ್ಶಿಸಿದ

ಪುತ್ತೂರು: ಸರ್ಕಾರಿ ಆಸ್ಪತ್ರೆಯಲ್ಲಿ ಶಾರ್ಟ್‌ಸಕ್ಯೂಟ್ ಅವಘಡ

ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಐಸಿಯುವಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡ ಘಟನೆ ಡಿ.22ರ ತಡ ರಾತ್ರಿ ನಡೆದಿದ್ದು ಅದೃಷ್ಟವಶಾತ್ ಹೆಚ್ಚಿನ ಅನಾಹುತವೊಂದು ತಪ್ಪಿದೆ. ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ದಟ್ಟ ಹೊಗೆ ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಭದ್ರತಾ ಸಿಬ್ಬಂದಿಗಳು ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರಿಂದ ರೋಗಿಗಳು ಅಪಾಯದಿಂದ

ಮೂಲ್ಕಿ: ನಗರೋತ್ಥಾನ ಯೋಜನೆಯಡಿ ಕಚೇರಿ ಕಟ್ಟಡ ಶಂಕುಸ್ಥಾಪನೆ

ಮುಲ್ಕಿ ನಗರೋತ್ಧಾನ ಯೋಜನೆಯಡಿ ಸುಮಾರು 50 ಲಕ್ಷ ವೆಚ್ಚದ ವಿಶೇಷ ಅನುದಾನದಲ್ಲಿ ಮುಲ್ಕಿ ನಗರ ಪಂಚಾಯತ್ ನೂತನ  ಕಛೇರಿ ಕಟ್ಟಡದ ಶಂಕುಸ್ದಾಪನೆ ಕಾರ್ಯಕ್ರಮವನ್ನು ರಾಜ್ಯ ಆರೋಗ್ಯ. ಸಚಿವ ಹಾಗೂ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಿದರು. ಈ ಸಂದರ್ಭ ಮಾತನಾಡಿ, ಸರಕಾರವು ರಾಜ್ಯದಲ್ಲಿ ಶಿಸ್ತು ಬದ್ದ ಹಾಗೂ ಪಾರದರ್ಶಕ ಆಡಳಿತದೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಅನೇಕ ಯೋಜನೆಗಳನ್ನು ತಯಾರಿಸಿದ್ದು ಅಭಿವೃದ್ಧಿ ನಿರಂತರವಾಗಿ ನಡೆಯಲಿದೆ ಎಂದರು. ಈ ಸಂದರ್ಭ

ಬಜ್ಪೆ: ಮಾದಕ ವಸ್ತು ಮಾರಾಟ, ಮೂವರ ಬಂಧನ

ಬೈಕ್‌ನಲ್ಲಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಮೂವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್‌ನ ಹೊಸಬೆಟ್ಟು ಈಶ್ವರನಗರ ನಿವಾಸಿ ಅಣ್ಣಪ್ಪಸ್ವಾಮಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ  ಬಡಜೇ  ನಿವಾಸಿ ಮೊಹಮ್ಮದ್ ಜುನೈದ್  ಹಾಗೂ ಹೊಸಬೆಟ್ಟು ವಿನ ಪಡ್ಡಾಯಿ ನಿವಾಸಿ ಎಂ.ಕೆ ಆಕಾಶ ಬಂಧಿತರು. ಬಜಪೆ ಪೊಲೀಸ್ ಠಾಣೆಯ ಪಿಎಸ್ ಐ ಗುರಪ್ಪ ಕಾಂತಿ ರವರು ಸಿಬ್ಬಂದಿಯವರ ಜೊತೆ ಬಜಪೆಯ ಶಾಂತಿಗುಡ್ಡೆ ಚೆಕ್ ಪಾಯಿಂಟ್ ಬಳಿ ಬಜಪೆಯಿಂದ ಕಳವಾರು

ಮಂಗಳೂರು:  ಡಿ.23ರಂದು ಕಣಚೂರು ಸಂಸ್ಥೆಯ ವತಿಯಿಂದ ಕಿಮ್ಸ್ ಪಿ.ಜಿ. ಮೆಡಿಕ್ವಿಜ್-2023

ಮಂಗಳೂರಿನ ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಾಸ್ತ್ರ ಶಿಕ್ಷಣ ವಿದ್ಯಾರ್ಥಿಗಳಿಗಾಗಿ ೩ನೇ ವಾರ್ಷಿಕ ರಾಜ್ಯ ಮಟ್ಟದ ಅಂತರ ವೈದ್ಯಕೀಯ ಕಾಲೇಜು ರಸಪ್ರಶ್ನೆ ಕಿಮ್ಸ್ ಪಿ.ಜಿ. ಮೆಡಿಕ್ವಿಜ್-2023 ಸ್ಪರ್ಧಾಕೂಟವು ಡಿ.23ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದಾರೆ. ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ವೈದ್ಯಕೀಯ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲರು ತಮ್ಮ ಕಾಲೇಜಿನ ವೈದ್ಯಕೀಯ

ಮಂಗಳೂರು: ಗೂಗಲ್ ನಕ್ಷೆಯಲ್ಲಿ ಮಂಗಳಾದೇವಿ ದೇವಾಲಯದ ಹೆಸರು ತಿರುಚು.

ಮಂಗಳೂರು ಬೋಳಾರದ ಮಂಗಳಾದೇವಿ ದೇವಸ್ಥಾನದ ಹೆಸರನ್ನು ಗೂಗಲ್ ಭೂಪಟದಲ್ಲಿ ಯಾರೋ ಕಿಡಿಗೇಡಿಗಳು ಪೀರ್ ದರ್ಗಾ ಕಾಂಪೌಂಡ್ ಎಂದು ತಿದ್ದಿರುವುದಾಗಿ ತಿಳಿದು ಬಂದಿದೆ. ಇದನ್ನು ಸರಿಪಡಿಸುವಂತೆ ದೇವಾಲಯದ ಆಡಳಿತ ಮಂಡಳಿಯವರು ದೂರು ದಾಖಲಿಸಿದ್ದಾರೆ. ಇದು ಕುಕೃತ್ಯ ಎಂದೂ ಖಂಡಿಸಿದ್ದಾರೆ.

ಮೂಡುಬಿದಿರೆ: ಹಿರಿಯ ಆಟೋ ಚಾಲಕ ಗುರುವಪ್ಪ ಪೂಜಾರಿ ನಿಧನ

ಮೂಡುಬಿದಿರೆ: ಕಳೆದ ಹಲವಾರು ವರ್ಷಗಳಿಂದ ಮೂಡುಬಿದಿರೆಯಲ್ಲಿ ಹಿರಿಯ ಅಟೋ ಚಾಲಕರಾಗಿ, ರಂಗಕಲಾವಿದರಾಗಿ ಗುರುತಿಸಿಕೊಂಡಿದ್ದ ಒಂಟಿಕಟ್ಟೆಯ ಗುರುವಪ್ಪ ಪೂಜಾರಿ ಗುರುವಪ್ಪ ಪೂಜಾರಿಒಂಟಿಕಟ್ಟೆಯ ಗುರುವಪ್ಪ ಪೂಜಾರಿ(68)ಅಲ್ಪ ಕಾಲದ ಅನಾರೋಗ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು.ಮೂಡುಬಿದಿರೆಯಲ್ಲಿ ಸುಮಾರು 45 ವರ್ಷಗಳಿಂದ ರಿಕ್ಷಾ ಚಾಲಕರಾಗಿ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಹಲವು ತುಳು ನಾಟಕಗಳಲ್ಲಿ ಅಭಿನಯಿಸಿದ್ದ ಅವರು ಸಾಂಸ್ಕೃತಿಕ, ಧಾರ್ಮಿಕ

ಮಂಗಳೂರು: ಐಷಾರಾಮಿ ಸೆವೆನ್ ಸೀಸ್ ನ್ಯಾವಿಗೇಟರ್ ಪ್ರವಾಸಿ ಹಡಗು

ನವಮಂಗಳೂರು ಬಂದರಿಗೆ ಐಷಾರಾಮಿ ಸೆವೆನ್ ಸೀಸ್ ನ್ಯಾವಿಗೇಟರ್ ಪ್ರವಾಸಿ ಹಡಗು ಆಗಮಿಸುವುದರೊಂದಿಗೆ ಈ ಬಾರಿಯ ಕ್ರೋಸ್ ಸೀಸನ್ ಅರಂಭಗೊಂಡಿತು. ನಾರ್ವೆಯ ಒಡೆತನದ, ಬಹಾಮಾಸ್ ಧ್ವಜ ಹೊಂದಿದ್ದು 500 ಪ್ರಯಾಣಿಕರು ಮತ್ತು 350 ಸಿಬಂದಿಯನ್ನು ಹೊಂದಿದೆ. 173 ಮೀಟರ್ ಉದ್ದವಿರುವ ಈ ಹಡಗು ಆಗಿದ್ದು, 28,803 ಟನ್ ಭಾರ, ಮತ್ತು 7.5 ಮೀಟರ್ ಆಳವಿದೆ. ಹಡಗಿನಿಂದ ಇಳಿದ ಕ್ರೂಸ್ ಪ್ರಯಾಣಿಕರಿಗೆ ಚೆಂಡೆ ಮತ್ತು ಯಕ್ಷಗಾನ, ಭರತನಾಟ್ಯ ಪ್ರದರ್ಶನದೊಂದಿಗೆ ಸಾಂಪ್ರದಾಯಿಕ ಸ್ವಾಗತ

ಮುಸ್ಲಿಂ ಯುವತಿ ವರಿಸಿದ ಬಜರಂಗದಳ ದ ಯುವಕ

ಡಿಸೆಂಬರ್ 1ರಿಂದ ನಾಪತ್ತೆಯಾಗಿದ್ದ ಸುರತ್ಕಲ್‍ನ 19ರ ಆಯಿಶಾ ಮತ್ತು 31ರ ಬಜರಂಗ ದಳದ ಪ್ರಶಾಂತ್ ಭಂಡಾರಿ ಮದುವೆ ಆಗಿರುವುದು ಶರಣ್ ಪಂಪ್‍ವೆಲ್ ಅವರ ಶುಭಾಶಯಪೋಸ್ಟ್ ನಿಂದ ಸ್ಪಷ್ಟಗೊಂಡಿದೆ. ಆಯಿಷಾಳು ಅಕ್ಷತಾ ಆಗಿ ನಮ್ಮ ಪ್ರಶಾಂತರನ್ನು ಹಿಂದೂ ರೀತ್ಯಾ ಮದುವೆ ಆಗಿದ್ದಾರೆ. ಶುಭಾಶಯ ಹೇಳಿ ಈ ಮತಾಂತರ ಸಮರ್ಥಿಸಿದ್ದಾರೆ. ಆಯಿಷಾ ಅಲಿಯಾಸ್ ಅಕ್ಷತಾಳ ಹೆತ್ತವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದವರು. ಆಯಿಷಾ ತಂದೆ ಸುರತ್ಕಲ್‍ನಲ್ಲಿ

ಉತ್ತರ ಕನ್ನಡ: ಶಿರಸಿಯಲ್ಲಿ ಭೀಕರ ರಸ್ತೆ ಅಪಘಾತ ; ಮಂಗಳೂರಿನ ಕಂದಾವರ ಮೂಲದ ನಾಲ್ವರ ದುರ್ಮರಣ

ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಬಂಡಲ ಗ್ರಾಮದಲ್ಲಿ ಶುಕ್ರವಾರ ಕಾರು ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ಹುಬ್ಬಳ್ಳಿಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಕುಮಟಾದಿಂದ ಶಿರಸಿಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು