ಮುಸ್ಲಿಂ ಯುವತಿ ವರಿಸಿದ ಬಜರಂಗದಳ ದ ಯುವಕ

ಡಿಸೆಂಬರ್ 1ರಿಂದ ನಾಪತ್ತೆಯಾಗಿದ್ದ ಸುರತ್ಕಲ್‍ನ 19ರ ಆಯಿಶಾ ಮತ್ತು 31ರ ಬಜರಂಗ ದಳದ ಪ್ರಶಾಂತ್ ಭಂಡಾರಿ ಮದುವೆ ಆಗಿರುವುದು ಶರಣ್ ಪಂಪ್‍ವೆಲ್ ಅವರ ಶುಭಾಶಯಪೋಸ್ಟ್ ನಿಂದ ಸ್ಪಷ್ಟಗೊಂಡಿದೆ.

ಆಯಿಷಾಳು ಅಕ್ಷತಾ ಆಗಿ ನಮ್ಮ ಪ್ರಶಾಂತರನ್ನು ಹಿಂದೂ ರೀತ್ಯಾ ಮದುವೆ ಆಗಿದ್ದಾರೆ. ಶುಭಾಶಯ ಹೇಳಿ ಈ ಮತಾಂತರ ಸಮರ್ಥಿಸಿದ್ದಾರೆ.

ಆಯಿಷಾ ಅಲಿಯಾಸ್ ಅಕ್ಷತಾಳ ಹೆತ್ತವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದವರು. ಆಯಿಷಾ ತಂದೆ ಸುರತ್ಕಲ್‍ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆಯಿಷಾ ನಾಪತ್ತೆ ಬಗೆಗೆ ಹೆತ್ತವರು ಸುರತ್ಕಲ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪ್ರಶಾಂತ್ ಭಂಡಾರಿ ರೌಡಿ ಶೀಟರ್ ಎಂದು ಕೆಲವು ಕಡೆ ವರದಿಯಾಗಿದೆ.

Related Posts

Leave a Reply

Your email address will not be published.