ಮಂಗಳೂರು: ಗೂಗಲ್ ನಕ್ಷೆಯಲ್ಲಿ ಮಂಗಳಾದೇವಿ ದೇವಾಲಯದ ಹೆಸರು ತಿರುಚು.
ಮಂಗಳೂರು ಬೋಳಾರದ ಮಂಗಳಾದೇವಿ ದೇವಸ್ಥಾನದ ಹೆಸರನ್ನು ಗೂಗಲ್ ಭೂಪಟದಲ್ಲಿ ಯಾರೋ ಕಿಡಿಗೇಡಿಗಳು ಪೀರ್ ದರ್ಗಾ ಕಾಂಪೌಂಡ್ ಎಂದು ತಿದ್ದಿರುವುದಾಗಿ ತಿಳಿದು ಬಂದಿದೆ.
ಇದನ್ನು ಸರಿಪಡಿಸುವಂತೆ ದೇವಾಲಯದ ಆಡಳಿತ ಮಂಡಳಿಯವರು ದೂರು ದಾಖಲಿಸಿದ್ದಾರೆ. ಇದು ಕುಕೃತ್ಯ ಎಂದೂ ಖಂಡಿಸಿದ್ದಾರೆ.