Home Posts tagged #mangaluru (Page 48)

ಬೀಬಿಲಚ್ಚಿಲ್ ದುರ್ಗಾ ಪರಮೇಶ್ವರಿ ದೇವಸ್ಥಾನ-ದುರ್ಗಾಪರಾಮೇಶ್ವರ ಮಂಡಳಿ ಶಿವಪುರ ಕುಂಪಲ ಭಜನಾ ಸಂಕೀರ್ತನೆ 

ಮಂಗಳೂರಿನ ಬೀಬಿಲಚ್ಚಿಲ್ ದುರ್ಗಾ ಪರಮೇಶ್ವರಿ ದೇವಸ್ಥಾನ ಅದ್ಯಪಾಡಿಯಲ್ಲಿ ನಡೆಯಲಿರುವ ಬ್ರಹ್ಮಲಕಶೋತ್ಸವ ಹಾಗೂ ಅಷ್ಟಪವಿತ್ರ ನಾಗಬ್ರಹ್ಮಮಂಡಲೋತ್ಸವ ಪ್ರಯುಕ್ತ ಬಿಬಿಲಚ್ಚಿಲ್ ನಲ್ಲಿ ನಡೆಯುತ್ತಿರುವ 108 ದಿನಗಳ ಸಂಧ್ಯಾ ಭಜನಾ ಸಂಕೀರ್ತನೆಯು ಜರಗುತ್ತಿದ್ದೂ ನಿನ್ನೆ ಶ್ರೀ ದುರ್ಗಾಪರಾಮೇಶ್ವರ ಮಂಡಳಿ ಶಿವಪುರ ಕುಂಪಲ. ಇವರಿಂದ ಭಜನಾ ಸೇವೆ ನಡೆಯಿತು.

ಮಂಗಳೂರು : ಕಾಂತಾರ ಸಿನಿಮಾ ವೀಕ್ಷಿಸಿದ ಮಾಜಿ ಸಚಿವ ರಮಾನಾಥ್ ರೈ

ದೈವದ ಮಹತ್ವ ಸಾರಿದ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ರಿಷಬ್ ಶೆಟ್ಟಿ ನಟನೆಯ `ಕಾಂತಾರ’ ಚಿತ್ರವನ್ನು ನಗರದ ಮಾಜಿ ಸಚಿವ ಇಂದು ಬೇಟಿ ನೀಡಿ ಸಿನಿಮಾವನ್ನು ವೀಕ್ಷಣೆ ಮಾಡಿದರು. ಇತ್ತೀಚೆಗೆ ಬಿಡುಗಡೆಗೊಂಡ ಕಾಂತಾರ ಸಿನಿಮಾ ಬಹಳ ಜನರ ಕುತೂಹಲ ಹಾಗೂ ಮನಸ್ಸನ್ನು ಗೆದ್ದಿದೆ, ದಕ್ಷಿಣ ಕನ್ನಡ ಜಿಲ್ಲೆಯ ದೈವಾರಾಧನೆಯ ಮೂಲದ ದಂತ ಕಥೆಯಗಿದ್ದು ಈ ಸಿನಿಮಾಕ್ಕೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಕಾಂತಾರ ಸಿನಿಮಾ ತಂಡದ ಜೊತೆ ಮಂಗಳೂರಿನ ಭಾರತ್ ಮಾಲ್

ಮಂಗಳೂರು :ದೀಪಾವಳಿಯಲ್ಲಿ ಅಗ್ನಿಗೆ ವಿಶೇಷ ಸ್ಥಾನವಿದೆ-ಮಂಗಳೂರು ವಿಭಾಗ ಕಾರ್ಯವಾಹ ವಾದಿರಾಜ್ ಅಭಿಪ್ರಾಯ

ದೀಪವು ಮನೆ ಮತ್ತು ಬದುಕನ್ನು ಬೆಳಗುತ್ತದೆ. ದೀಪಾವಳಿಯಲ್ಲಿ ಅಗ್ನಿಗೆ ವಿಶೇಷ ಸ್ಥಾನವಿದ್ದು, ಪಂಚಭೂತಗಳಲ್ಲಿ ಒಂದಾಗಿರುವ ಅಗ್ನಿಯೂ ಕೆಟ್ಟದನ್ನು ಭಸ್ಮಗೊಳಿಸಿ, ಸುಂದರ ಜೀವನ ರೂಪಿಸಲು ಸಹಕಾರಿ ಎಂದು ಮಂಗಳೂರು ವಿಭಾಗ ಕಾರ್ಯವಾಹ ವಾದಿರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು ಅವರು ಭಾನುವಾರ ಸಂಜೆ ರಾಷ್ಟಿ್ಯ ಸ್ವಯಂ ಸೇವಕ ಸಂಘದ ವತಿಯಿಂದ ಕಂದಾವರ ಪ್ರಿಯಾಂಕ ನಗರದ ಸೇವಾ ಬಸ್ತಿಯ ನಾಗರಿಕರಿಗೆ ದೀಪಾವಳಿ ಹಿಂದಿನ ದಿನದ ನೀರು ತುಂಬಿಸುವ ಕಾರ್ಯಕ್ರಮಕ್ಕೆ ದೇವಸ್ಥಾನದ

ಮಂಗಳೂರು : ಶೈಕ್ಷಣಿಕ ಮತ್ತು ಸಂಶೋಧನಾ ಕುರಿತ ಕಾರ್ಯಕ್ರಮಗಳ ಬಗ್ಗೆ ಒಪ್ಪಂದ

ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋಥೆರಫಿ ವಿಭಾಗ ಮತ್ತು ಥೀಮ್ ಫಿಸಿಯೋಥೆರಫಿ ಯುನಿವರ್ಸಿಟಿ ನೆದರ್‌ಲ್ಯಾಂಡ್ಸ್ ಮತ್ತು ಸ್ವಿಟ್ಜರ್‌ಲ್ಯಾಂಡ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಎರಡೂ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಮತ್ತು ಸಂಶೋಧನಾ ವಿನಿಮಯ ಕಾರ್ಯಕ್ರಮಗಳಲ್ಲಿ ಸಹಕರಿಸಲು ಒಪ್ಪಿಕೊಂಡಿವೆ. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ರೆವರೆಂಡ್ ಫಾದರ್ ರಿಚರ್ಡ್ ಅಲೊಶಿಯಸ್ ಕೊಯಿಲೊ ಅವರು, ಥೀಮ್ ವಿವಿಯ ನಿರ್ದೇಶಕರಾದ ಥೀಮ್‌ವಂಡರ್

ಮಂಗಳೂರು : ಕಾಂತಾರ ಸಿನಿಮಾ ವೀಕ್ಷಿಸಿದ ಧರ್ಮಸ್ಥಳದ ಖಾವಂದರು

ದೈವದ ಮಹತ್ವ ಸಾರಿದ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ ರಿಷಬ್ ಶೆಟ್ಟಿ ನಟನೆಯ `ಕಾಂತಾರ’ ಚಿತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭೆ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕುಟುಂಬಸ್ಥರೊಂದಿಗೆ ಶನಿವಾರ ರಾತ್ರಿ ವೀಕ್ಷಿಸಿದರು.ಮಂಗಳೂರಿನ ಭಾರತ್ ಮಾಲ್ ಬಿಗ್ ಸಿನಿಮಾಸ್‌ನಲ್ಲಿ ರಾತ್ರಿ ಕಾಂತಾರ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು. ಪತ್ನಿ ಮತ್ತು ಕುಟುಂಬ ಸದಸ್ಯರು ಅವರೊಂದಿಗೆ ಚಿತ್ರ ಮಂದಿರಕ್ಕೆ ಆಗಮಿಸಿದ್ದರು. ಚಿತ್ರ

ಮಂಗಳೂರು : ಯಶಸ್ವಿಯಾಗಿ ನಡೆದ ಮಿಲಾಗ್ರಿಸ್ ಪಿ.ಯು. ಕಾಲೇಜು ಎನ್.ಎಸ್.ಎಸ್. ಶಿಬಿರ

ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಶಿಬಿರವು ನಗರದ ಕಾಸ್ಸಿಯಾ ಸಂತ ರೀಟಾ ವಿದ್ಯಾ ಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆಯಿತು. ಶಿಬಿರವನ್ನು ಮಹಾನಗರ ಪಾಲಿಕೆ ಸದಸ್ಯೆ ಭಾನುಮತಿ ಅವರು ಉದ್ಘಾಟಿಸಿ ಮಾತನಾಡಿ, ಎನ್.ಎಸ್.ಎಸ್. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ , ಶಿಸ್ತು, ಸಮಯ ಪ್ರಜ್ನೆ , ಸಾಮರಸ್ಯದ ಗುಣಗಳನ್ನು ಬೆಳೆಸಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ ಎಂದು ಹೇಳಿದರು.ಸಂತ ರೀಟಾ ವಿದ್ಯಾಸಂಸ್ಥೆಯ

ಮೊಗವೀರ ಗಾಟ್ ಟ್ಯಾಲೆಂಟ್ ಟೈಟಲ್ ಸಾಂಗ್ ಬಿಡುಗಡೆ

ಸಿನಿ ಗ್ಯಾಲಕ್ಸಿ ಅರ್ಪಿಸುವ ಮೋಗವೀರ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಅದ್ಧೂರಿಯಾಗಿ ನಡೆಯಲಿದ್ದು, ಈ ಕಾರ್ಯಕ್ರಮದ ಧ್ವನಿ ಸುರುಳಿ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ನಡೆಯಿತು.ಉಡುಪಿ ಮತ್ತು ದ.ಕ.ಜಿಲ್ಲಾ ಮೀನು ಮಾರಾಟಗಾರರ ಪೆಡರೆಸನ್ ಮಂಗಳೂರು ಇದರ ಜಿಲ್ಲಾ ಅಧ್ಯಕ್ಷರಾದ ಯಶಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ರವರನ್ನು ಸನ್ಮಾನಿಸಲಾಯಿತು. ರಿಯಾಲಿಟಿ ಶೋನ ಧ್ವನಿ ಸುರುಳಿ, ಪೆÇೀಸ್ಟರ್

ಕುದ್ರೋಳಿಯಲ್ಲಿ ವಿಶೇಷ ಗುರುಪೂಜೆ

ಮಂಗಳೂರು: ನಾರಾಯಣಗುರುಗಳ ಅನುಯಾಯಿಗಳು ಮಾಡಿದ ಶಾಂತಿಯುತ ಹೋರಾಟಕ್ಕೆ ಮಣಿದ ಸರ್ಕಾರ ಪಠ್ಯ ಪುನರ್ ಸೇರ್ಪಡೆ ಮಾಡಲು ಆದೇಶಿಸಿದ ಹಿನ್ನೆಲೆ ಹಾಗು ಸಮಾಜದ ಪ್ರಮುಖ ಬೇಡಿಕೆಗಳಾದ ಬ್ರಹ್ಮಶ್ರೀ ನಾರಾಯಣಗುರು ನಿಗಮ (ಬಿಲ್ಲವ ನಿಗಮ) ಸ್ಥಾಪನೆ ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರು ಇಡಬೇಕು, ಸಮಾಜದ ಏಳಿಗೆಗಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಭಾನುವಾರ ವಿಶೇಷ ಗುರುಪೂಜೆ ಸಲ್ಲಿಸಲಾಯಿತು. ಜಾನಪದ ವಿದ್ವಾಂಸ ಬನ್ನಂಜೆ

ತಂದೂರ್ ರೆಸ್ಟೋರೆಂಟ್‍ ನ ಮಾಲಕರಾದ ಜಿ. ಆನಂದ್ ರಾಯ ಶೆಣೈ ನಿಧನ

ಮಂಗಳೂರಿನ ಪ್ರಸಿದ್ಧ ತಂದೂರ್ ರೆಸ್ಟೋರೆಂಟ್‍ನ ಮಾಲಕರಾದ ಜಿ. ಆನಂದ್ ರಾಯ ಶೆಣೈ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ಪ್ರಾಯವಾಗಿತ್ತು. ಮಂಗಳೂರಿನ ಗುರುಪುರದವರಾದ ಇವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನಮನ್ನಣೆ ಗಳಿಸಿದ್ದರು. ಇವರು ಪತ್ನಿ ಸುಜಾತ ಆನಂದ ರಾಯಿ, ಪುತ್ರ ವರದರಾಜ್ ಶೆಣೈ, ಪುತ್ರಿ ಶಾರದಾ ದಿಲೀಪ್ ಆಚಾರ್ಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಬಸ್ : ಹೆಜಮಾಡಿಯ ರಾ.ಹೆ 66ರಲ್ಲಿ ಘಟನೆ

ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಮರಿಗೆ ಬಿದ್ದ ಘಟನೆ ಸಂಭವಿಸಿದೆ.ಖಾಸಗಿ ವೇಗದೂತ ಬಸ್ ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಸಾವು ನೋವು ಸಂಭವಿಸಿಲ್ಲ.ಹೆಜಮಾಡಿ ಟೋಲ್ ಸುರಕ್ಷತಾ ಅಧಿಕಾರಿ ಶೈಲೇಶ್ ಶೆಟ್ಟಿ, ಟೋಲ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ