ಮೊಗವೀರ ಗಾಟ್ ಟ್ಯಾಲೆಂಟ್ ಟೈಟಲ್ ಸಾಂಗ್ ಬಿಡುಗಡೆ

ಸಿನಿ ಗ್ಯಾಲಕ್ಸಿ ಅರ್ಪಿಸುವ ಮೋಗವೀರ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋ ಅದ್ಧೂರಿಯಾಗಿ ನಡೆಯಲಿದ್ದು, ಈ ಕಾರ್ಯಕ್ರಮದ ಧ್ವನಿ ಸುರುಳಿ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ನಡೆಯಿತು.ಉಡುಪಿ ಮತ್ತು ದ.ಕ.ಜಿಲ್ಲಾ ಮೀನು ಮಾರಾಟಗಾರರ ಪೆಡರೆಸನ್ ಮಂಗಳೂರು ಇದರ ಜಿಲ್ಲಾ ಅಧ್ಯಕ್ಷರಾದ ಯಶಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ರವರನ್ನು ಸನ್ಮಾನಿಸಲಾಯಿತು.

ರಿಯಾಲಿಟಿ ಶೋನ ಧ್ವನಿ ಸುರುಳಿ, ಪೆÇೀಸ್ಟರ್ ಬಿಡುಗಡೆ ಜೊತೆಗೆ ಮಹಾಗುರುಗಳಾಗಿ ವಿಜಿ ಪಾಲ್ ನಿರ್ಣಾಯಕರಾಗಿ ಕಲಾವತಿ ದಯಾನಂದ್, ಸುಮಿತ್ ಅಮೀನ್, ರಂಜನ್ ಬೋಳೂರು. ನಾಯಕರ ಸಂಜೀತ್ ಸಾಲ್ಯಾನ್ , ಪರೇಶ್ ಸಾಲ್ಯಾನ್, ಶಿಫಾಲಿ ಕರ್ಕೇರ. ಮತ್ತು ನಿರೂಪಕರಾಗಿ ನಾಗರಾಜ್ ಸಂಜನಾ ಮತ್ತು ಶ್ವೇತಾ ಸುವರ್ಣ ರವರನ್ನು ಅಧಿಕೃತ ಘೋಷಣೆಯನ್ನು ಅತಿಥಿಗಳು ಮಾಡಿದರು.ಪ್ರೀತೇಶ್ ಸಾಲ್ಯಾನ್ ರಚಿಸಿ, ಹಾಡಿರುವ ಮತ್ತು ಡಿಜೆ ನಿಷಿಲ್ ಸಂಗೀತ ನಿರ್ದೇಶನದ ಜೊತೆಗೆ ಬಿನೇಶ್ ಅಮೀನ್ ಡಿಒಪಿ ಇರುವ ಹಾಡಿಗೆ ಅಪಾರ ಪ್ರಶಂಸೆ ದೊರೆಯಿತು.
ಇದೆ ಸಂದರ್ಭದಲ್ಲಿ ಸಿನಿ ಗ್ಯಾಲಕ್ಸಿ ವಿತರಣೆ ಮಾಡುತ್ತಿರುವ ಅರವಿಂದ ಬೋಳಾರ್,ನವೀನ್ ಪಡೀಲ್, ಬೋಜರಾಜ್ ವಾಮಂಜೂರು ಅಭಿನಯದ love cocktail ಚಿತ್ರದ trailer ಬಿಡುಗಡೆ ಕಾರ್ಯಕ್ರಮವು ನಡೆಯಿತು. ಜಗದೀಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶಶಿಧರ್ ಕೋಡಿಕಲ್, ಚೇತನ್ ಬೆಂಗ್ರೆ, ಲಲಿತ್ ಕುಳಾಯಿ, ಡಾ. ಯಾದವ್ ಕರ್ಕೇರ, ಸತೀಶ್ ಸಾಲ್ಯಾನ್ ಉಪಸ್ಥಿತರಿದ್ದರು.