ಮೂಡುಬಿದಿರೆ : ಇಲ್ಲಿನ ಪುರಸಭಾ ವ್ಯಾಪ್ತಿಯ ಸ್ವರಾಜ್ಯ ಮೈದಾನದಲ್ಲಿ ಕಾಯ೯ಚರಿಸುತ್ತಿದ್ದ ದಿನವಹಿ ತಾತ್ಕಾಲಿಕ ತರಕಾರಿ ಮಾರುಕಟ್ಟೆಯ ವರಿ ವಸೂಲಿನ ಗುತ್ತಿಗೆಯನ್ನು ಪುರಸಭೆಯು ಸೋಮವಾರ ಸಂಜೆ ರದ್ದುಪಡಿಸಿದೆ.ಕಳೆದ ಡಿಸೆಂಬರ್ 20 ರಂದು ನಡೆದಿದ್ದ ದಿನವಹಿ ತಾತ್ಕಾಲಿಕ ತರಕಾರಿ ಮಾರುಕಟ್ಟೆಯ ಬಹಿರಂಗ ಏಲಂ ಪ್ರಕ್ರಿಯೆಯಲ್ಲಿ ನಿಡ್ಡೋಡಿಯ ಸುಂದರ ಪೂಜಾರಿ ಅವರು ಅತೀ
ಮೂಡುಬಿದಿರೆ: ಕಳೆದ ಕೆಲ ವರ್ಷಗಳಿಂದ ಮೂಡುಬಿದಿರೆ ನೂತನ ಮಾರುಕಟ್ಟೆ ಕಟ್ಟಡ ವಿವಾದವು ಹೈಕೋರ್ಟ್ ನಲ್ಲಿದ್ದು ಇದರ ವಿಚಾರಣೆಯನ್ನು ಮತ್ತೆ ಆ.8 ಕ್ಕೆ ಮುಂದೂಡಿದೆ.ಸಂರಕ್ಷಿತ ಸ್ಮಾರಕ ಪ್ರದೇಶದ ವ್ಯಾಪ್ತಿಯಲ್ಲಿ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡುವ ಮೂಡುಬಿದಿರೆ ಪುರಸಭೆಯ ಕ್ರಮವನ್ನು ಪ್ರಶ್ನಿಸಿ ಜೈಸನ್ ಮಾರ್ಷಲ್ ಸುವಾರಿಸ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಮಾರುಕಟ್ಟೆ ಕಟ್ಟಡ ನಿರ್ಮಾಣ ಅನುಮತಿಯನ್ನು ತಿರಸ್ಕರಿಸಿದ
ಸುರತ್ಕಲ್: ಸುರತ್ಕಲ್ ನಗರದಲ್ಲಿ ಬಹುಕೋಟಿ ವೆಚ್ಚದ ಮಾರುಕಟ್ಟೆ ನಿರ್ಮಾಣ ಕಾಮಗಾರಿಯು ಕೊರೋನಾ ಬಳಿಕ ಮಾರುಕಟ್ಟೆಯಲ್ಲಿ ಸರಕುದರ ಏರಿಕೆ ಹಾಗೂ ಜಿಎಸ್‌ಟಿಯನ್ಬು ಟೆಂಡರ್ ನಲ್ಲಿ ತೋರಿಸದ ಹಿನ್ನಲೆಯಲ್ಲಿ ಕಾಮಗಾರಿ ಹಿನ್ನಡೆ ಕಂಡಿದ್ದು ಸತತ ಪ್ರಯತ್ನದ ಬಳಿಕಇದೀಗ 64 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಡಾ. ಭರತ್ ಶೆಟ್ಟಿ ವೈ ತಿಳಿಸಿದ್ದಾರೆ. ಕಳೆದ ಬಾರಿ ಅಂದಾಜು 16 ಕೋಟಿಯ ಕಾಮಗಾರಿ ನಡೆದಿತ್ತು. ಬಳಿಕ ಗುತ್ತಿಗೆದಾರರು ಎಸ್ ಆರ್ ದರ ಹಾಗೂ ಜಿ ಎಸ್
ಮೂಡುಬಿದಿರೆ: ರಾಸಾಯನಿಕ ಬಳಸಿದ ಹಣ್ಣುಗಳನ್ನು ವಾಹನಗಳಲ್ಲಿ ತಂದು ಮಾರಾಟ ಮಾಡುತ್ತಿದ್ದುದ್ದನ್ನು ಸಾರ್ವಜನಿಕರ ದೂರಿನ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳ ತಂಡವು ಶುಕ್ರವಾರ ಮೂಡುಬಿದಿರೆಯಲ್ಲಿ ತಪಾಸಣೆ ನಡೆಸಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ. ಕಳೆದ ಕೆಲವು ಸಮಯಗಳಿಂದ ವಿವಿಧ ಹಣ್ಣುಗಳ ಸೀಸನ್ ಸಮಯದಲ್ಲಿ ವಾಹನದಲ್ಲಿ ತಂದು ಮೂಡುಬಿದಿರೆ ಪೇಟೆಯ ರಸ್ತೆ ಬದಿಗಳಲ್ಲಿ ನಿಲ್ಲಿಸಿ ಹಾಗೂ ಮಾರ್ಕೆಟ್ ನಲ್ಲಿ ಮಾರಾಟ ಮಾಡುತ್ತಿದ್ದರು. ರಾಸಾಯನಿಕ
ಮಂಗಳೂರಿನ ಹೊರವಲಯದ ಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಕಾಮಗಾರಿಯ ಹಿನ್ನಲೆ ಪಕ್ಕದಲ್ಲಿದ್ದ ಮೀನು ಮಾರುಕಟ್ಟೆಯ ಮೆಲ್ಚಾವಣಿಯನ್ನು ತೆಗದು ಮಾರುಕಟ್ಟೆಯನ್ನು ನೆಲಸಮ ಮಾಡಲು ಹೊರಟಿರುವುದು ಮೀನು ಮಾರಾಟ ಮಾಡುವ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಎಐಸಿಸಿ ಕಾರ್ಯದರ್ಶಿ ಐವನ್ ಡಿ’ಸೊಜಾರವರು 2 ವರ್ಷದ ಹಿಂದೆ ಎಂಎಲ್‌ಸಿಯಾಗಿದ್ದ ಸಂದರ್ಭ ಎನ್‌ಹೆಚ್ 66 ಬೈಕಂಪಾಡಿಯಲ್ಲಿ ಮೀನುಗಾರ ಮಹಿಳೆಯರಿಗೆ ಸಹಾಯವಾಗುವ ನಿಟ್ಟಿನಲ್ಲಿ ಅನುದಾನ ನೀಡಿ
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಉವ೯ ಮಾರುಕಟ್ಟೆಯನ್ನು ಮೂಡದಿಂದ ಪಾಲಿಕೆಗೆ ಹಸ್ತಾಂತರಗೊಳಿಸುವ ಕುರಿತು ಮೇಯರ್ ಪ್ರೇಮಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು. ಮೂಡ ಕಛೇರಿಯಿಂದ ಈಗಾಗಲೇ ಉವ೯ ಮಾರುಕಟ್ಟೆಯಲ್ಲಿನ ಮೇಲಿನ ಮಹಡಿಗಳಲ್ಲಿರುವ ಕಛೇರಿ ಉಪಯೋಗಿತ ಕೆಲವೊಂದು ಅಂಗಡಿಗಳನ್ನು ಹರಾಜು ರೂಪದಲ್ಲಿ ನೀಡಲು ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಈ ಹಿಂದೆ ಹಳೇ ಮಾರುಕಟ್ಟೆಯಲ್ಲಿ ವ್ಯಾಪಾರ