Home Posts tagged padubidri (Page 2)

ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಟೋಲ್ ಗೇಟ್ ಸಿಬ್ಬಂದಿಗಳ ಮುಷ್ಕರ

ಸಿಬ್ಬಂದಿಗಳಿಗೆ ಸಂಬಳ ನೀಡದೆ ಸತ್ತಾಯಿಸುತ್ತಿದ್ದ “ಟಿಬಿಆರ್” ಕಂಪನಿಯ ವಿರುದ್ಧ ಸಮರ ಸಾರಿರುವ ಸುಮಾರು ತೊಂಭತ್ತು ಮಂದಿ ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರನಡೆಸುತ್ತಿದ್ದಾರೆ. ಮುಂಜಾನೆ ಎಂಟು ಗಂಟೆಗೆ ಮುಷ್ಕರ ಆರಂಭಿಸಿದ ಸಿಬ್ಬಂದಿಗಳ ಮನವೊಲಿಸಲು ಅಧಿಕಾರಿಗಳು ವಿವಿಧ ಬಗೆಯಲ್ಲಿ ಪ್ರಯತ್ನ ನಡೆಸಿದರೂ ಪ್ರಯತ್ನ

ಪಡುಬಿದ್ರಿ ಮುಖ್ಯ ಪೇಟೆಯಲ್ಲೇ ಸರಣಿ ಕಳ್ಳತನ

ಪಡುಬಿದ್ರಿ ಪೊಲೀಸ್ ಠಾಣೆಯ ನೂರು ಮೀಟರ್ ಅಂತರ, ಪೇಟೆಭಾಗದ ಪೊಲೀಸ್ ವಾಹನ ತಪಾಸಣಾ ಸ್ಥಳಕ್ಕೆ ಇಪ್ಪತ್ತು ಮೀಟರ್ ಅಂತರದಲ್ಲಿರುವ ಆರು ಅಂಗಡಿಗಳಲ್ಲಿ ಕಳ್ಳರು ಕೈಚಳಕ ತೋರಿಸುವ ಮೂಲಕ ಸರಣಿ ಕಳ್ಳತನ ನಡೆಸಿದ್ದಾರೆ. ಪೊಲೀಸರಿಗೆ ಸವಾಲಾದ ಈ ಕಳ್ಳತನ ಪ್ರಕರಣ ಭೇದಿಸಲು ಪೊಲೀಸರು ಸಿಸಿ ಕ್ಯಾಮಾರಗಳ ಮೊರೆ ಹೋಗಿದ್ದಾರೆ. ಕಳ್ಳತನ ನಡೆದ ಎರಡು ಅಂಗಡಿಗಳ ಅಂಚು ತೆಗೆದು ಒಳ ನುಗ್ಗಿದರೆ, ಉಳಿದ ಹಣ್ಣು ಹಂಪಲು, ಕಬ್ಬಿನ ಜ್ಯೂಸ್, ತರಕಾರಿ, ಹೂವಿನಂಗಡಿ ಇವುಗಳಿಗೆ ಭದ್ರತೆ

ಪಡುಬಿದ್ರಿ: ಅಕ್ಕಿ ಸಾಗಾಟ ಪಿಕಪ್ ವಾಹನ ಪಲ್ಟಿ: ಚಾಲಕ ಅಪಾಯದಿಂದ ಪಾರು

ಕೋಟೇಶ್ವರದಿಂದ ಮಂಗಳೂರಿಗೆ ಅಕ್ಕಿ ಸಾಗಿಸುತ್ತಿದ್ದ ಪಿಕಪ್ ವಾಹನವೊಂದರ ಟಯರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ಕಳೆದು ಕೊಂಡು ಪಲ್ಟಿಯಾಗಿದ್ದು ಚಾಲಕ ಅದೃಷ್ಟವಶಾತ್ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ. ಟೈಗರ್ ಬ್ರಾಂಡ್ ಅಕ್ಕಿ ಹೇರಿಕೊಂಡು ಬರುತ್ತಿದ್ದು ಇದ್ದಕ್ಕಿದಂತೆ ಟಯರ್ ಸ್ಫೋಟಗೊಂಡು ರಸ್ತೆಗೆ ಉರುಳಿ ಬಿದ್ದಿದೆ. ಆ ಸಂದರ್ಭ ಹೆದ್ದಾರಿಯಲ್ಲಿ ಯಾವುದೇ ವಾಹನಗಳು ಸಂಚರಿಸದಿರುವುದರಿಂದ ಬಾರೀ ದುರಂತವೊಂದು ತಪ್ಪಿದೆ ಎನ್ನುತ್ತಾರೆ ಅಪಘಾತಕ್ಕೊಳಗಾದ

ಅಕ್ರಮವಾಗಿ ಸಾಗಿಸುತ್ತಿದ್ದ  ಜಾನುವಾರು ಪತ್ತೆ:ಇಬ್ಬರು ವಶಕ್ಕೆ

ಪೈಶಾಚಿಕ ಕೃತ್ಯವೊಂದರಲ್ಲಿ ವ್ಯವಸ್ಥಿತ ರೀತಿಯಲ್ಲಿ ಟ್ರಕ್ ನಲ್ಲಿ ಕೋಣ, ಎತ್ತು, ಎಮ್ಮೆ ಹೀಗೆ ಹದಿನೇಳು ಜಾನುವಾರುಗಳನ್ನು ಅಡ್ಡಾದಿಡ್ಡಿಯಾಗಿ ತುಂಬಿಸಿಕೊಂಡು ಬರುತ್ತಿರುವ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸರು ಹೆಜಮಾಡಿ ಟೋಲ್ ಗೇಟ್ ಬಳಿ ತಡೆದು ನಿಲ್ಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇದರಲ್ಲಿ ಒಂದು ಎತ್ತು ಸಾವನ್ನಪ್ಪಿದ್ದರೆ, ಮತ್ತೊಂದು ಸಾವಿನಂಚಿನಲ್ಲಿದೆ. ಇನ್ನೊಂದು ಕಾರ್ಯಚರಣೆಯ ಸಂದರ್ಭ ಪರಾರಿಯಾಗಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ

ಅಕ್ರಮವಾಗಿ ಜಾನುವಾರುಗಳ ಸಾಗಾಟ: ಪಡುಬಿದ್ರಿ ಪೊಲೀಸರ ಕಾರ್ಯಾಚರಣೆ

ಎಚ್.ಆರ್.ನೋಂದಾಣಿ ಸಂಖ್ಯೆಯ ಲಾರಿಯೊಂದರಲ್ಲಿ ಹತ್ತಾರು ಕೋಣ, ಎತ್ತು, ಎಮ್ಮೆಗಳನ್ನು ಬೇಕಾಬಿಟ್ಟಿ ತುಂಬಿಸಿಕೊಂಡು ಬರುತ್ತಿದ್ದ ಖಚಿತ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸರು ಹೆಜಮಾಡಿ ಟೋಲ್ ಪಕ್ಕ ಅಡ್ಡ ಹಾಕಿ ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯಿಂದ ಕೇರಳಕ್ಕೆ ಇದನ್ನು ಸಾಗಿಸಲಾಗುತ್ತಿದೆ ಎಂಬುದಾಗಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಹುಬ್ಬಳ್ಳಿ ಮೂಲದ ಚಾಲಕ ಹಾಗೂ ಕೇರಳ ಮೂಲದ ಲಾರಿ ಕ್ಲಿನರ್ ಪೊಲೀಸ್ ವಶದಲ್ಲಿದ್ದಾರೆ. ಲಾರಿಯಲ್ಲಿ ಅಡ್ಡಾದಿಡ್ಡಿಯಾಗಿ

ಹೆಜಮಾಡಿ ಗುಂಡಿ ರಸ್ತೆಯುದ್ಧಕ್ಕೂ ಮೆಸ್ಕಾಂ ಕಂಬಗಳಿಗೆ ಬಳ್ಳಿ ಅಲಂಕಾರ..!

ಅತೀ ದೊಡ್ಡ ವ್ಯಾಪ್ತಿ ಹೊಂದಿರುವ ಪಡುಬಿದ್ರಿ ಮೆಸ್ಕಾಂ ಕಛೇರಿಗೆ ಶಾಶ್ವತ ಶಾಖಾಧಿಕಾರಿ ಇಲ್ಲದೆ, ವ್ಯವಸ್ಥೆಗಳು ಹಾಳಾಗುತ್ತಿದ್ದು ಇದಕ್ಕೆ ಸಾಕ್ಷಿಯೋ ಎಂಬಂತೆ ಹೆಜಮಾಡಿ ಗುಂಡಿ ರಸ್ತೆಯುದ್ಧಕ್ಕೂ ಮೆಸ್ಕಾಂ ವಿದ್ಯುತ್ ಕಂಬ ತಂತಿಗಳಿಗೆ ಬಳ್ಳಿ ಸುತ್ತಿಕೊಂಡು ಅಪಾಯದ ಸ್ಥಿತಿ ನಿರ್ಮಾಣಗೊಂಡಿದೆ. ಪಡುಬಿದ್ರಿ ಮೆಸ್ಕಾಂ ಕಛೇರಿ ವ್ಯಾಪ್ತಿ ಬಹಳಷ್ಟು ವಿಸ್ತೀರ್ಣ ಇದ್ದು ಇಲ್ಲಿ ಸಮಸ್ಯೆ ತುಂಬಿ ತುಳುಕುತ್ತಿದೆ. ಈ ಬಗ್ಗೆ ಪ್ರತೀ ಗ್ರಾಮಸಭೆಗಳಲ್ಲೂ ಸಭೆಗೆ ಮಾಹಿತಿ ನೀಡಲು

ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಭತ್ತದ ಪೈರುಗಳ ನಾಶ-ಅಪಾರ ಬೆಳೆ ಹಾನಿ

ಅಕಾಲಿಕ ಮಳೆಯಿಂದಾಗಿ ಬೈಲು ಸಾಲಿನ ಭತ್ತದ ಗದ್ದೆಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು ಕಾಪು ತಾಲೂಕಿನ ವಿವಿಧೆಡೆ ಬೆಳೆದು ನಿಂತ ಭತ್ತದ ಪೈರುಗಳು ಗದ್ದೆಯಲ್ಲಿ ನಾಶಗೊಂಡ ಪರಿಣಾಮ ರೈತರು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಭೀತಿಯನ್ನು ಎದುರಿಸುವಂತಾಗಿದೆ. ಕರಾವಳಿಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ಬೆಳೆದು ನಿಂತಿರುವ ಪೈರುಗಳು ಮಕಾಡೆ ಮಲಗಿದ್ದು ಇದರಿಂದಾಗಿ ಭತ್ತದ ಕೃಷಿಕರು ತಾವು ಕಷ್ಟಪಟ್ಟು ಬೆಳೆಸಿದ

ಪಡುಬಿದ್ರಿ ಬಾಲ ಗಣಪತಿಯ ಅಂತಿಮ ಶೋಭಾಯಾತ್ರೆಗೆ ಕ್ಷಣಗಣನೆ

ಪಡುಬಿದ್ರಿಯ ಇತಿಹಾಸ ಪ್ರಸಿದ್ಧ ಬಾಲಗಣಪತಿ(ಗುಡ್ಡೆ ಗಣಪತಿ) ದೇವರ ವಾರ್ಷಿಕ ಶೋಭಾಯಾತ್ರೆಗೆ ಕ್ಷಣ ಗಣನೆ ಆರಂಭಗೊಂಡಿದೆ. ಗಣೇಶ ಚೌತಿಯ ದಿನದಂದ್ದು ಪ್ರತಿಷ್ಠಾಪನೆಗೊಂಡು ನವರಾತ್ರಿ ಸಂದರ್ಭ ತಾಯಿ ಶಾರದೆಯ ಒಂಭತ್ತು ದಿನಗಳ ಭವ್ಯ ಪೂಜಾ ಕೈಂಕರ್ಯಗಳನ್ನು ವೀಕ್ಷಿಸಿ ಎಲ್ಲಾ ಕಡೆಗಳಲ್ಲೂ ಶಾರದೆ ವಿಸರ್ಜನಾ ಕಾರ್ಯಕ್ರಮ ನಡೆದರೆ ಇಲ್ಲಿ ಮಾತ್ರ ಬಾಲಗಣೇಶನ ವಿಸರ್ಜನಾ ಮೆರವಣಿಗೆ ನಡೆಯುತ್ತಿದೆ. ಈ ಪುಣ್ಯಕ್ಷೇತ್ರದ ವಿಶೇಷತೆ ಏನೆಂದರೆ ಇಂದು ಬೃಹತ್ ಕಟ್ಟಡ ಹೊಂದಿದ

ಕಾಪು ಮಾರಿಗುಡಿ ದೇವಸ್ಥಾನದಲ್ಲಿ ಮಹಾಚಂಡಿಕಾಯಾಗ

ಇತಿಹಾಸ ಪ್ರಸಿದ್ಧ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ಮಹಾಚಂಡಿಕಾಯಾಗ, ಪೂರ್ಣಾಹುತಿ ಮತ್ತು ಭೂರಿ ಭೋಜನ ಸಂಪನ್ನಗೊಂಡಿತು. ಹೊಸ ಮಾರಿಗುಡಿಯ ಪಧಾನ ತಂತ್ರಿಗಳಾದ ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ ಇವರ ಮಾರ್ಗದರ್ಶನದಲ್ಲಿ ಪಧಾನ ಅರ್ಚಕ ಶ್ರೀನಿವಾಸ ತಂತ್ರಿಯವರ ನೇತೃತ್ವದಲ್ಲಿ ಮಹಾ ಚಂಡಿಕಾಯಾಗದ ಧಾರ್ಮಿಕ ವಿಧಿ ವಿಧಾನಗಳು ಜರಗಿದವು. ಚಂಡಿಕಾಯಾಗ, ಪೂರ್ಣಾಹುತಿಯೊಂದಿಗೆ ಸುವಾಸಿನಿ ಪೂಜೆ, ನವಗ್ರಹ ಪೂಜೆ ಹಾಗೂ ವಿಷ್ಣು ಪೂಜೆ

ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆ ಹಾಸ್ಯಾಸ್ಪದ: ಕಾಂಗ್ರೆಸ್ ಮುಖಂಡರ ಜಂಟಿ ಸುದ್ದಿಗೋಷ್ಟಿ

ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂಬ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕೊಯಿಲಾಡಿ ಸುರೇಶ್ ನಾಯಕ್ ಹೇಳಿಕೆ ಹಾಸ್ಯಸ್ಪದ ಎಂಬುದಾಗಿ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಪೂಜಾರಿ ಹಾಗೂ ಕೆ.ಪಿ.ಸಿ.ಸಿ ಸಂಯೋಜಕ ನವೀನ್‌ಚಂದ್ರ ಜೆ. ಶೆಟ್ಟಿ ತಿಳಿಸಿದ್ದಾರೆ. ಪಡುಬಿದ್ರಿಯ ಖಾಸಗಿ ಸಭಾಂಗಣದಲ್ಲಿ ಜಂಟಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾದ-ವಿವಾದ