ಕಾರ್ಕಳ: ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸಿದ್ಧತೆಗಳು ಪೂರ್ಣಗೊಂಡಿದೆ. ಕಾರ್ಕಳದಲ್ಲಿ ಒಟ್ಟು 209 ಮತಗಟ್ಟೆಗಳಿದ್ದು, 1000 ಚುನಾವಣಾ ಅಧಿಕಾರಿಗಳು ನಿಯುಕ್ತಿಗೊಂಡಿದ್ದಾರೆ. 587 ಸಹಾಯಕರಿದ್ದು 57 ಬಸ್‌ಗಳು 21 ಸೆಕ್ಟರ್ ಅಧಿಕಾರಿಗಳಿದ್ದು ಕಾರ್ಕಳ ಎಂಪಿಎಂ ಕಾಲೇಜಿನಲ್ಲಿ ಸಿದ್ಧತೆಗಳು ನಡೆದು ಪೂರ್ಣಗೊಂಡಿದೆ ಎಂದು
ಜಾಲ ತಾಣಗಳಲ್ಲಿ ಕೆಲವು ಬಿಜೆಪಿಗರು ನಟ ಪ್ರಕಾಶ್‌ರಾಜ್ ಬಿಜೆಪಿ ಸೇರುವುದಾಗಿ ಪೋಸ್ಟ್ ಹಾಕಿದ್ದಾರೆ. ಅದಕ್ಕೆ ಉತ್ತರಿಸಿರುವ ಪ್ರಕಾಶ್ ರಾಜ್ ಅವರು ನನ್ನನ್ನು ಖರೀದಿಸುವಷ್ಟು ಸೈದ್ಧಾಂತಿಕ ಸಿರಿವಂತಿಕೆ ಹೊಂದಿಲ್ಲ ಎಂದು ಉತ್ತರಿಸಿದ್ದಾರೆ. ಬಿಜೆಪಿಯ ಖರೀದಿ ರಾಜಕಾರಣ ನಡೆಯಬಹುದು. ನನ್ನನ್ನು ಕೊಂಡುಕೊಳ್ಳುವ ಯೋಗ್ಯತೆ ಆ ಕಡೆ ಇಲ್ಲ ಎಂದೂ ಪ್ರಕಾಶ್ ರಾಜ್ ಹೇಳಿದ್ದಾರೆ. ನಟ ರಾಜಕಾರಣಿ ಪ್ರಕಾಶ್ ರಾಜ್ ಸದ್ಯ ತೆಲುಗಿನ ಪಾರ್ಟ್ ಒನ್, ಪುಷ್ಪ ಪಾರ್ಟ್ ಟು, ಓಜಿ
ಬೈಂದೂರು: ಕಳೆದ 40 ವರ್ಷಗಳಿಂದ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ತೊಡಗಿಸಿಕೊಂಡಿದ್ದೇನೆ. ಹಿಂದುತ್ವ ದೇಶ ಅಭಿವೃದ್ಧಿ ರಾಜಕಾರಣ ಹಾಗೂ ಕುಟುಂಬ ರಾಜಕಾರಣ ಕುರಿತು ಜನ ಸ್ಪಷ್ಟ ಫಲಿತಾಂಶ ನೀಡಲಿದ್ದಾರೆ.ಯಾವ ಒತ್ತಡಗಳಿಗೂ ಮಣಿಯಲಾರೆ.ಬ್ರಹ್ಮ ಬಂದು ಹೇಳಿದರು ಈ ಚುನಾವಣೆಯಿಂದ ಹಿಂದೆ ಸರಿಯಲಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದರು. ಅವರು ಉಪ್ಪಂದದಲ್ಲಿ ಉಪ್ಪುಂದ ಪರಿಚಯ ಹೋಟೆಲ್ ಸಭಾಭವನದಲ್ಲಿ ನಡೆದ ಈಶ್ವರಪ್ಪ ಬೆಂಬಲಿತ ಕಾರ್ಯಕರ್ತರ
ಬಿಜೆಪಿಯವರ ನಂಬಿಕೆಗೆ ಅಭಾರಿ. ಆದರೆ ಅವರು ಟಿಕೆಟ್ ನೀಡಿದ್ದರೂ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಖ್ಯಾತ ಭೋಜಪುರಿ ನಟ, ಗಾಯಕ ಪವನ್ ಸಿಂಗ್ ಹೇಳಿದ್ದಾರೆ. ಬಿಜೆಪಿಯ ಲೋಕಸಭಾ ಸ್ಪರ್ಧಿಗಳ ಮೊದಲ ಪಟ್ಟಿಯಲ್ಲಿ ಪವನ್ ಸಿಂಗ್‌ರಿಗೆ ಅಸನ್ಸೋಲ್ ಟಿಕೆಟ್ ನೀಡಲಾಗಿದೆ. ಆದರೆ ಅವರು ನೇರ ರಾಜಕೀಯ ಪ್ರವೇಶ ಇಲ್ಲ ಎಂದಿದ್ದಾರೆ. ಬಿಜೆಪಿಯ ಮೊದಲ ಪಟ್ಟಿಯಲ್ಲಿ ಹೇಮಾಮಾಲಿನಿ ಸಹಿತ ಹಲವು ನಟ ನಟಿಯರು ಸ್ಪರ್ಧಿಸಲು ಕ್ಷೇತ್ರ ಪಡೆದಿದ್ದಾರೆ. ಭೋಜಪುರಿ ಭಾಷೆಯ
ಬಂಟ್ವಾಳ: ರಾಜೇಶ್ ನಾಯ್ಕ ಅವರು ಬಂಟ್ವಾಳ ಶಾಸಕರಾದ ಮೇಲೆ ಗಲಭೆಗಳಾಗಿಲ್ಲ. ಅದಕ್ಕೆ ಸಂಬಂಧಿಸಿ ಸೆಕ್ಷನ್, ಕರ್ಪೂ, ನಿಷೇಧಾಜ್ಞೆಗಳನ್ನು ವಿಧಿಸಲಾಗಿಲ್ಲ. ಎಲ್ಲೂ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಅವರು ಶಾಸಕರಾದ ಮೇಲೆ ಶಾಂತಿ, ಸುವ್ಯವಸ್ಥೆ ನೆಲೆಸಿದ್ದು, ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳೂ ಆಗಿವೆ. ಹೀಗಾಗಿ ಮುಂಬರುವ ಚುನಾವಣೆಯಲ್ಲೂ ಅವರೇ ಶಾಸಕರಾಗಿ ಆಯ್ಕೆಯಾಗಬೇಕು ಎಂದು ಕೇರಳ ರಾಜ್ಯ ಬಿಜೆಪಿ ಖಜಾಂಚಿ ಕೃಷ್ಣದಾಸ್ ಹೇಳಿದರು. ಬಂಟ್ವಾಳದ ಬಿಜೆಪಿ
ಟಿಕೆಟ್ ಘೋಷಣೆಗೆ ಕ್ಷಣ ಗಣನೆ ನಡೆಯುತ್ತಿರುವ ಹೊತ್ತಲ್ಲಿ ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ತನ್ನ ವಿರುದ್ಧ ಯಾವುದೇ ಮಾನಹಾನಿಕಾರಕ ಸುದ್ದಿ ,ಪೊಟೋ , ವಿಡಿಯೊ ಪ್ರಕಟ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ 40 ಕ್ಕೂ ಹೆಚ್ಚು ಮಾಧ್ಯಮಗಳಲ್ಲಿ ಯಾವುದೇ ಆಕ್ಷೇಪಕಾರಿ ಸುದ್ದಿ ಪ್ರಕಟಿಸಸಂತೆ ಉಮನಾಥ ಕೋಟ್ಯಾನ್ ಅವರು ಮಂಗಳೂರು ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ತಡೆಯಾಜ್ಞೆ