ಬಿಜೆಪಿಗೆ ನನ್ನನ್ನು ಕೊಳ್ಳುವ ತಾಕತ್ತು ಇಲ್ಲ : ಪ್ರಕಾಶ್ ರಾಜ್
ಜಾಲ ತಾಣಗಳಲ್ಲಿ ಕೆಲವು ಬಿಜೆಪಿಗರು ನಟ ಪ್ರಕಾಶ್‌ರಾಜ್ ಬಿಜೆಪಿ ಸೇರುವುದಾಗಿ ಪೋಸ್ಟ್ ಹಾಕಿದ್ದಾರೆ. ಅದಕ್ಕೆ ಉತ್ತರಿಸಿರುವ ಪ್ರಕಾಶ್ ರಾಜ್ ಅವರು ನನ್ನನ್ನು ಖರೀದಿಸುವಷ್ಟು ಸೈದ್ಧಾಂತಿಕ ಸಿರಿವಂತಿಕೆ ಹೊಂದಿಲ್ಲ ಎಂದು ಉತ್ತರಿಸಿದ್ದಾರೆ.
ಬಿಜೆಪಿಯ ಖರೀದಿ ರಾಜಕಾರಣ ನಡೆಯಬಹುದು. ನನ್ನನ್ನು ಕೊಂಡುಕೊಳ್ಳುವ ಯೋಗ್ಯತೆ ಆ ಕಡೆ ಇಲ್ಲ ಎಂದೂ ಪ್ರಕಾಶ್ ರಾಜ್ ಹೇಳಿದ್ದಾರೆ.
ನಟ ರಾಜಕಾರಣಿ ಪ್ರಕಾಶ್ ರಾಜ್ ಸದ್ಯ ತೆಲುಗಿನ ಪಾರ್ಟ್ ಒನ್, ಪುಷ್ಪ ಪಾರ್ಟ್ ಟು, ಓಜಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.