Home Posts tagged #utkhader (Page 2)

ಉಚ್ಚಿಲ ಕಡಲ್ಕೊರೆತ ಪ್ರದೇಶಕ್ಕೆ ಸ್ಪೀಕರ್ ಖಾದರ್ ಭೇಟಿ

ಕಡಲ್ಕೊರೆತಕ್ಕೆ ವಿಪರೀತ ಹಾನಿಗೊಳಗಾಗುತ್ತಿದ್ದ ಉಚ್ಚಿಲ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಗಳಿಗೆ ರಾಜ್ಯ ವಿಧಾನ ಸಭೆಯ ಸ್ಪೀಕರ್, ಮಂಗಳೂರು ಶಾಸಕ ಯು. ಟಿ. ಖಾದರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅವರು ಜಿಲ್ಲಾಧಿಕಾರಿ ರವಿ ಕುಮಾರ್ ಎಮ್.ಆರ್ ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಯು.ಟಿ. ಖಾದರ್ ಅವರು,

ಬಿ. ಜನಾರ್ದನ ಪೂಜಾರಿಯನ್ನು ಭೇಟಿಯಾದ ಯು.ಟಿ. ಖಾದರ್

ಬಂಟ್ವಾಳ: ಮಂಗಳೂರು ಶಾಸಕ ಯು.ಟಿ. ಖಾದರ್ ಅವರು ಬುಧವಾರ ಸಂಜೆ ಬಂಟ್ವಾಳದಲ್ಲಿ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಜನಾರ್ದನ ಪೂಜಾರಿಯವರು ನಮ್ಮ ಪಕ್ಷದ ಹಿರಿಯ ನಾಯಕರು. ತನ್ನ ವಿದ್ಯಾರ್ಥಿ ಜೀವನದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಿ. ಜನಾರ್ದನ ಪೂಜಾರಿಯವರು ಮಾರ್ಗದರ್ಶನ ಮಾಡಿದ್ದರು. ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಸಾಮಾಜಿಕ

ಉತ್ತಮ ಸಮಾಜ, ಸಾಮರಸ್ಯಕ್ಕಾಗಿ ಕಾಂಗ್ರೆಸ್‍ಗೆ ಮತ ಕೊಟ್ಟಿದ್ದಾರೆ: ಖಾದರ್

ಸತ್ಯ- ಅಸತ್ಯ, ಪ್ರಚಾರ-ಅಪಪ್ರಚಾರದ ಬಗ್ಗೆ ರಾಜ್ಯದಲ್ಲಿ ಚುನಾವಣೆ ಆಗಿತ್ತು. ರಾಜ್ಯದ ಜನತೆ ಸತ್ಯಕ್ಕೆ ಜಯ ಕೊಟ್ಟಿದ್ದಾರೆ. ಜನರು ಬೆಲೆಯೇರಿಕೆ, ದ್ವೇಷ ಭಾವನೆಯಿಂದ ಕಂಗೆಟ್ಟು ನಿರಾಶರಾಗಿದ್ದರು. ಉತ್ತಮ ಸಮಾಜ, ಸಾಮರಸ್ಯಕ್ಕಾಗಿ ಕಾಂಗ್ರೆಸಿಗೆ ಮತ ಕೊಟ್ಟಿದ್ದಾರೆ. ಕರಾವಳಿಯಲ್ಲಿ ಜನರ ವಿಶ್ವಾಸಗಳಿಸಬೇಕಾಗಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಡಿದರು. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ವ್ಯತ್ಯಾಸವನ್ನು

ಸರ್ಕಾರ ಮಹತ್ವವಿಲ್ಲದ ಬಜೆಟ್ ಮಂಡಿಸಿದೆ : ಯು.ಟಿ. ಖಾದರ್

ರಾಜ್ಯದ ಸಂಸದರ ಮೌನ, ಸರಕಾರದ ಅಸಹಾಯಕತೆ, ಕೇಂದ್ರ ಸರಕಾರದ ಮಲತಾಯಿ ಧೋರಣೆಯಿಂದಾಗಿ ರಾಜ್ಯದ ಜನತೆ ಸಾಲದ ಹೊರೆಯಲ್ಲಿ ಹೊತ್ತುಕೊಳ್ಳುವಂತಾಗಿದೆ. ರಾಜ್ಯ ಸರಕಾರ ಮಂಡಿಸಿದ್ದು ಸುಲಿಗೆ, ಸಾಲದ ಬಜೆಟ್ ಆಗಿದೆ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊನೆಯ ಉಸಿರೆಳೆಯುತ್ತಿರುವ ಸರಕಾರ ಮಹತ್ವವಿಲ್ಲದ ಬಜೆಟ್ ಮಂಡಿಸಿದ್ದು, ಜನತೆಯನ್ನು ಸಾಲದಲ್ಲಿ ಮುಳುಗಿಸಿದೆ

ಗೋಸಂತತಿ ಹೆಚ್ಚಿಸಲು ಯೋಜನೆ ಜಾರಿಗೊಳಿಸಬೇಕಿದೆ : ವಿಪಕ್ಷ ಉಪನಾಯಕ ಯು.ಟಿ ಖಾದರ್ ಹೇಳಿಕೆ

ಉಳ್ಳಾಲ: ಗೋಸಂತತಿ ಕಡಿಮೆಯಿದೆ. ಅದನ್ನು ಹೆಚ್ಚು ಮಾಡುವ ಕೆಲಸ ಆಗಬೇಕಿದೆ. ಗೋವುಗಳನ್ನು ಸಾಕುವವರಿಗೆ ಅದರ ಕಷ್ಟಗಳು ಗೊತ್ತಿದೆ ಹೊರತು ಭಾಷಣ ಮಾಡುವವರಿಗೆ ಕಷ್ಟದ ಬಗ್ಗೆ ಗೊತ್ತಿಲ್ಲ. ಗೋಸಾಕುವವರಿಗೆ ಶೇ.90 ಕ್ಕಿಂತ ಹೆಚ್ಚಿನ ಸಬ್ಸಿಡಿಯನ್ನು ಸರಕಾರ ನೀಡಿ ಗೋವುಗಳನ್ನು ಸಾಕಲು ಪ್ರೋತ್ಸಾಹಿಸಬೇಕು ಎಂದು ವಿಪಕ್ಷ ಉಪನಾಯಕ ಯು.ಟಿ ಖಾದರ್ ಹೇಳಿದರು. ದ.ಕ ಜಿಲ್ಲಾ ಪಂಚಾಯತ್ , ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಳ್ಳಾಲ ತಾಲೂಕು ಇದರ 2021-22 ನೇ ಸಾಲಿನ

ಬಿಜೆಪಿಯವರ ಅಪಪ್ರಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹೋರಾಡಬೇಕಿದೆ : ಯು.ಟಿ ಖಾದರ್ ಹೇಳಿಕೆ

ಉಳ್ಳಾಲ: ಬಿಜೆಪಿಯವರ ಅಪಪ್ರಚಾರದ ತಂತ್ರಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಎದ್ದು ನಿಂತು ಹೋರಾಡಬೇಕು. ಚುನಾವಣೆ ಬರುವವರೆಗೂ ಕಾಯದೇ, ಈಗಿನಿಂದಲೇ ತಯಾರಾಗುವ ವಿಚಾರಗಳಾಗಲಿ. ವೋಟರ್ ಲಿಸ್ಟ್ ಸರಿಯಾಗಿದ್ದಲ್ಲಿ ಅಲ್ಲಿ ಯಶಸ್ವೀ ಕಾರ್ಯನಿರ್ವಹಿಸಲು ಸಾಧ್ಯ. ಡಿಲೀಷನ್ ಲಿಸ್ಟ್‍ನಲ್ಲಿ ಇರುವಂತಹ ಹೆಸರುಗಳನ್ನು ಕೌಂಟರ್ ಚೆಕ್ ಮಾಡಬೇಕಿದೆ ಎಂದು ವಿಪಕ್ಷ ಉಪನಾಯಕ ಹಾಗೂ ಶಾಸಕ ಯು.ಟಿ ಖಾದರ್ ಹೇಳಿದ್ದಾರೆ. ಅವರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಮಂಗಳೂರು

ಫ್ಲೆಕ್ಸ್ ನಲ್ಲಿ ಗರ್ಭಿಣಿಯ ಭಾವಚಿತ್ರ ಅಳವಡಿಕೆ : ಕೆರಳಿದ ಬಜರಂಗದಳ

ಕೊಲ್ಯ: ಸೀಮಂತ ಕಾರ್ಯಕ್ರಮದ ಫ್ಲೆಕ್ಸ್ ನಲ್ಲಿ ಗರ್ಭಿಣಿಯ ಭಾವಚಿತ್ರ ಅಳವಡಿಕೆ, ಕೆರಳಿದ ಬಜರಂಗದಳದ ಕಾರ್ಯಕರ್ತರಿಂದ ಆಕ್ರೋಶ, ಯಾರೋ ಮಾಡಿದ ತಪ್ಪಿಗೆ ಶಾಸಕರ ವಿರುದ್ಧ ಪ್ರತಿಭಟನೆ…!ಉಳ್ಳಾಲ:ಕಾರ್ಯಕ್ರಮವೊಂದರ ಫ್ಲೆಕ್ಸ್ ನಲ್ಲಿ ಮಹಿಳೆಯ ಅನುಮತಿ ಇಲ್ಲದೆ ಫೊಟೋ ಅಳವಡಿಸಿದ ಕುರಿತಾಗಿ ಕೆರಳಿದ ಬಜರಂಗದಳದ ಕಾರ್ಯಕರ್ತರು ಕಾರ್ಯಕ್ರಮ ಆಯೋಜಕರಿಗೆ ಸರಿಯಾಗಿ ಕ್ಲಾಸ್ ಕೊಟ್ಟ ಘಟನೆ ಕೊಲ್ಯ ನಾರಾಯಣಗುರು ಸಭಾಭವನದಲ್ಲಿ ಬುಧವಾರ ಘಟಿಸಿತು. ದಕ್ಷಿಣ ಕನ್ನಡ ಜಿಲ್ಲಾ ದಕ್ಷಿಣ

ಸೋನು ಸೂದ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಉಳ್ಳಾಲದಲ್ಲಿ ಆಕ್ಸಿಜನ್ ಪ್ಲ್ಯಾಂಟ್

ಸೋನು ಸೂದ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಉಳ್ಳಾಲದಲ್ಲಿ ಆಕ್ಸಿಜನ್ ಪ್ಲ್ಯಾಂಟ್ ನಿರ್ಮಾಣವಾಗಲಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಥಾಪನೆ ಆಗಲಿದೆ. ನಟ ಸೋನು ಸೂದ್ ನಮ್ಮ ಭಾಗಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ.ಇದು ನನಗೆ ಮತ್ತು ನಮ್ಮ ಕ್ಷೇತ್ರದ ಜನರಿಗೆ ಸಿಹಿ ಸುದ್ದಿಯಾಗಿದೆ. ಇನ್ನೂ 60ಲಕ್ಷ ನಟ ಸೋನು ಸೂದ್ ಉಳಿದ 40ಲಕ್ಷ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊಟ್ಟಿದೆ. ನಮ್ಮ ಕ್ಷೇತ್ರದ ಜನರ ಪರವಾಗಿ