ಮಧ್ಯವಯಸ್ಕ ವ್ಯಕ್ತಿ ಮತ್ತು ಮಹಿಳೆ ಸಮುದ್ರಕ್ಕೆ ಬಿದ್ದಿರುವ ಘಟನೆ ನಡೆದಿದ್ದು, ಬೆಂಗಳೂರಿನ ಲಕ್ಷ್ಮಿ (43), ಬೋರಲಿಂಗಯ್ಯ (50) ಮೃತ ವ್ಯಕ್ತಿಗಳು ಎಂದು ತಿಳಿದು ಬಂದಿದೆ. ಇವರಿಬ್ಬರು ಮನೆಯಲ್ಲಿ ಹೇಳದೇ ಬೆಂಗಳೂರಿನಿಂದ ತೆರಳಿರುವುದಾಗಿ ಪೆÇಲೀಸರಿಗೆ ಪ್ರಾಥಮಿಕ ಮಾಹಿತಿ ದೊರಕಿದೆ. ಇವರಿಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
ಬಹರೈನ್ ದ್ವೀಪರಾಷ್ಟ್ರದಲ್ಲಿ ಚಿತ್ರೀಕರಣಗೊಂಡಿರುವ ಕಿರುಚಲನ ಚಿತ್ರ “ಎಲ್ಲಾದರೂ ಇರು ಎಂತಾದರೂ ಇರು” ಇದೀಗ ತೆರೆಗೆ ಬರಲು ಸಿದ್ಧವಾಗಿ ನಿಂತಿದೆ. ಕನ್ನಡಿಗ ಚರಣ್ ಅಕ್ಷಯ್ ರವರು ಇಂತಹ ಒಂದು ಸಾಹಸಕ್ಕೆ ಕೈ ಹಾಕಿದ್ದು, ಈ ಚಿತ್ರವು ಅಕ್ಟೋಬರ್ 27ರಂದು ಮನಾಮದಲ್ಲಿರುವ ಅಲ್ ಹಮ್ರಾ ಚಿತ್ರ ಮಂದಿರದಲ್ಲಿ ಪ್ರೀಮಿಯರ್ ಪ್ರದರ್ಶನ ಕಾಣಲಿದೆ. ಸ್ನೇಹಿತರ ಗಾಢ ಸ್ನೇಹದ ಜೊತೆಗೆ ಕನ್ನಡ ನಾಡು, ನುಡಿಯ ಬಗ್ಗೆ ಅವರಿಗಿರುವ ಕಾಳಜಿಯ ಎಳೆಯೊಂದನ್ನು ಇಟ್ಟುಕೊಂಡು
ಮಂಜೇಶ್ವರದ ನೆತ್ತಿಲ ಪದವು ಗೋವಿಂದ ಪೈ ರಸ್ತೆಯ ಮರುಡಾಮರೀಕರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಐದು ಕೋಟಿ ರೂಪಾಯಿ ಮಂಜೂರುಗೊಂಡು ಕಾಮಗಾರಿ ನಡೆಸಲಾಗಿದೆ. ಆದರೆ, ಇದೀಗ ಕಾಮಗಾರಿಯಲ್ಲಿ ಲೋಪದೋಷಗಳು ಕಂಡುಬಂದಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಈ ಮೊದಲು ರಸ್ತೆಯು 3 ಮೀಟರ್ 80 ಸೆಂಟಿ ಮೀಟರ್ ಅಗಲವಾಗಿತು. ಆದರೆ ನೂತನವಾಗಿ ನಿರ್ಮಾಣವಾಗುವ ರಸ್ತೆ 5 ಮೀಟರ್ 80 ಸೆಂಟಿ ಮೀಟರ್ ಇರಬೇಕೆಂಬುವುದು ಸ್ಥಳೀಯರ ಬೇಡಿಕೆಯಾಗಿತ್ತು. ಆದರೆ ಈಗಾಗಲೇ ಕಾಮಗಾರಿ
ಅಕ್ರಮವಾಗಿ ಪಿಡಬ್ಲ್ಯೂಡಿ ರಸ್ತೆಯಂಚಿನಲ್ಲಿ ನಿರ್ಮಾಣ ನಡೆಸುತ್ತಿದ್ದ ನಾಲ್ಕು ಕಟ್ಟಡ ಪ್ರದೇಶಕ್ಕೆ ಸ್ವತಃ ಪಿಡಬ್ಲ್ಯೂಡಿ ಅಧಿಕಾರಿಗಳೇ ಸ್ಥಳಕ್ಕೆ ಬಂದು ಪರಿಶೀಲಿಸಿ ಕಾಮಗಾರಿ ನಡೆಸದಂತೆ ಕಟ್ಟಡ ಕಾಮಗಾರಿ ತಡೆಯೊಡ್ಡಿದ ಘಟನೆ ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಈ ಅಕ್ರಮಕ್ಕೆ ಸ್ವತಃ ಗ್ರಾ.ಪಂ. ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬುದಾಗಿ ಸಾರ್ವಜನಿಕ ಲಿಖಿತ ದೂರು ಜಿಲ್ಲಾಧಿಕಾರಿಗಳು ಸಹಿತ ಎಲ್ಲಾ ಇಲಾಖೆಗಳಿಗೂ ರವಾನೆ ಆಗಿದೆ. ಸದ್ಯಕ್ಕೆ
ಫುಟ್ ಪಾತ್‍ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐದು ಮಂದಿಗೆ ಕಾರು ಢಿಕ್ಕಿಯಾಗಿ ಓರ್ವ ಯುವತಿ ದಾರುಣವಾಗಿ ಮೃತಪಟ್ಟ ಭೀಕರ ಘಟನೆ ಮಂಗಳೂರಿನ ಲೇಡಿಹಿಲ್ ಬಳಿ ನಡೆದಿದೆ. ಅಪಘಾತದಲ್ಲಿ ರೂಪಶ್ರೀ (23) ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುರತ್ಕಲ್‍ನ ಕಾನ, ಬಾಳದ ಗಂಗಾಧರ್ ಅವರ ಪುತ್ರಿಯಾದ ರೂಪಶ್ರೀ ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದರೆಂದು ತಿಳಿದುಬಂದಿದೆ. ರೂಪಶ್ರೀ ಜೊತೆಯಲ್ಲಿ ಸ್ವಾತಿ (26), ಹಿತ್ನವಿ (16),
ಕುಂದಾಪುರ: ಅತಿ ವೇಗದಿಂದ ಸಾಗುತ್ತಿದ್ದ ಖಾಸಗಿ ಬಸ್‍ವೊಂದು ಚಾಲಕ ನಿಯಂತ್ರಣ ತಪ್ಪಿ ಅರಾಟೆ ಎಂಬಲ್ಲಿ ಹೈಮಾಸ್ಟ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ, ಪಕ್ಕದ ರಸ್ತೆಗೆ ಉರುಳಿದ ಘಟನೆ ನಡೆದಿದೆ. ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆ ಸೇರಿದಂತೆ ಸುಮಾರು 20ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರದಿಂದ ಪ್ರಯಾಣಿಕರನ್ನು ಹೊತ್ತ ಬಸ್ ರಾಷ್ಟ್ರೀಯ
101 ನೇ ಮಂಗಳೂರು ಶಾರದಾ ಮಹೋತ್ಸವ ಪ್ರಯುಕ್ತ ವಿಗ್ರಹದ ಭವ್ಯ ಮೆರವಣಿಗೆ ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ , ಆಚಾರ್ಯ ಮಠ ವಠಾರದಲ್ಲಿ 101 ನೇ ವರ್ಷ ಸಂಭ್ರಮಾಚರಣೆಯ ಮಂಗಳೂರು ಶ್ರೀ ಶಾರದಾ ಮಹೋತ್ಸವ ಪ್ರಯುಕ್ತ ಶ್ರೀ ಶಾರದಾ ಮಾತೆಯ ಭವ್ಯ ವಿಗ್ರಹದ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು . ಇಂದು ರಾತ್ರಿ ಶ್ರೀ ಮಾತೆಯ ವಿಗ್ರಹ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿರುವುದು . 7 ದಿನಗಳ ಪರ್ಯಂತ ಮಹೋತ್ಸವ ನಡೆಯಲಿದ್ದು ಸಹಸ್ರಾರು ಭಜಕರು
ಮೂಡುಬಿದಿರೆ : ತೆಲಂಗಾಣ ಹನುಮಕೊಂಡ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಅಕ್ಟೋಬರ್ 15 ರಿಂದ 17 ರವರೆಗೆ ನಡೆದ 34ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಸ್ಟೋಟ್ಸ್ ಕ್ಲಬ್, ಮೂಡುಬಿದಿರೆ ಒಟ್ಟು 3 ಚಿನ್ನ, 3 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಪಡೆದು ಒಟ್ಟು 09 ಪದಕಗಳÀನ್ನು ತನ್ನದಾಗಿಸಿಕೊಂಡಿದೆ. 16 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ರೀತುಶ್ರೀ 300ಮೀ ತೃತೀಯ ಸ್ಥಾನ ಹಾಗೂ ಮಿಡ್ಲೆರಿಲೆ ಪ್ರಥಮ ಸ್ಥಾನ,
ಮಂಗಳೂರು ,ಅ.18:-ರೋಗಿಗಳಲ್ಲಿ ಧನಾತ್ಮಕ ಚಿಂತನೆಗೆ ಓದುವ ಹವ್ಯಾಸ ಪೂರಕವಾಗಿದೆ ಎಂಬುದಾಗಿ ದ.ಕ ಜಿಲ್ಲಾ ಉಸ್ತುವಾರಿ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮಂಗಳೂರಿನ ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಪತ್ರೆ ಯಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ,ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಹಾಗೂ ಯೂತ್ ರೆಡ್ ಕ್ರಾಸ್ ಸಹಭಾಗಿತ್ವದಲ್ಲಿ ಆರಂಭಿಸಲಾಗಿರುವ ಸಮುದಾಯ ವಾಚನಾಲಯಕ್ಕೆ ಬುಧವಾರದಂದು ಭೇಟಿ
ಮಂಗಳೂರು :ಇತ್ತೀಚೆಗೆ ನಿಧನರಾದ ಮೂಡುಬಿದಿರೆ ಪ್ರೆಸ್‌ಕ್ಲಬ್‌ನ ಮಾಜಿ ಅಧ್ಯಕ್ಷ ವೇಣುಗೋಪಾಲ ಅವರಿಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ನಗರದ ಪತ್ರಿಕಾ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನುಡಿನಮನ ಸಲ್ಲಿಸಿದ ಮೂಡುಬಿದಿರೆಯ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ‘ ಜನಪರ ಕಾಳಜಿಯ ಯುವ ಪತ್ರಕರ್ತ ವೇಣುಗೋಪಾಲ್ ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಪ್ರೆಸ್‌ಕ್ಲಬ್‌ಗೆ ಸ್ವಂತ ನಿವೇಶನ




























