ಮೂಡುಬಿದಿರೆ: 34ನೇ ದಕ್ಷಿಣವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಆಳ್ವಾಸ್‌ಗೆ 09 ಪದಕ

ಮೂಡುಬಿದಿರೆ : ತೆಲಂಗಾಣ ಹನುಮಕೊಂಡ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ಅಕ್ಟೋಬರ್ 15 ರಿಂದ 17 ರವರೆಗೆ ನಡೆದ 34ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಸ್ಟೋಟ್ಸ್ ಕ್ಲಬ್, ಮೂಡುಬಿದಿರೆ ಒಟ್ಟು 3 ಚಿನ್ನ, 3 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಪಡೆದು ಒಟ್ಟು 09 ಪದಕಗಳÀನ್ನು ತನ್ನದಾಗಿಸಿಕೊಂಡಿದೆ.

16 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ರೀತುಶ್ರೀ 300ಮೀ ತೃತೀಯ ಸ್ಥಾನ ಹಾಗೂ ಮಿಡ್ಲೆರಿಲೆ ಪ್ರಥಮ ಸ್ಥಾನ, ಗೋಪಿಕಾ ಮಿಡ್ಲೆರಿಲೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

18 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ರಾಮು 800ಮೀ ದ್ವಿತೀಯ ಸ್ಥಾನ, ಯಶವಂತ್ 800ಮೀ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

18 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಗೀತಾ ಚೌಕಾಶಿ 400ಮೀ ಪ್ರಥಮ ಸ್ಥಾನ, ಅಂಬಿಕಾ ಕೋಲಿ 5ಕಿ.ಮೀ ನಡಿಗೆ ದ್ವಿತೀಯ ಸ್ಥಾನ, ಐಶ್ವರ್ಯ ಮಾರುತಿ ಚಕ್ರಎಸೆತ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

20 ವರ್ಷ ವಯೋಮಿತಿಯಲ್ಲಿ ಬಾಲಕರ ವಿಭಾಗದಲ್ಲಿ ಪರಶುರಾಮ ಹ್ಯಾಮರ್ ತ್ರೋ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. 20 ವರ್ಷ ವಯೋಮಿತಿಯಲ್ಲಿ ಬಾಲಕಿಯರ ವಿಭಾಗದಲ್ಲಿ ರೇಖಾ ಬಸಪ್ಪ 800ಮೀ ಪ್ರಥಮ ಸ್ಥಾನವನ್ನು
ಪಡೆದಿರುತ್ತಾರೆ.

ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದ್ದಾರೆ.

Related Posts

Leave a Reply

Your email address will not be published.