Home Posts tagged V4News (Page 404)

ಮೂಡುಬಿದಿರೆ ಗಣೇಶೋತ್ಸವಕ್ಕೆ ವಜ್ರ ಮಹೋತ್ಸವ

ಮೂಡುಬಿದಿರೆ: ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಸಮಾಜ ಮಂದಿರದಲ್ಲಿ ಪೂಜಿಸಲ್ಪಡುವ ಮೂಡುಬಿದಿರೆ ಗಣೇಶೋತ್ಸವವು ಈ ವರ್ಷ ವಜ್ರಮಹೋತ್ಸವವನ್ನು ಆಚರಿಸುತ್ತಿದೆ. ಈ ಹಿನ್ನಲೆಯಲ್ಲಿ ಗಣೇಶೋತ್ಸವ ಸಮಿತಿ, ಪವರ್ ಫ್ರೆಂಡ್ಸ್ ಬೆದ್ರ ಮತ್ತು ಸಮಾಜಮಂದಿರ ಸಭಾ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಮರುಜೋಡಣೆಯ ತಪಾಸಣಾ ಉಚಿತ ಶಿಬಿರ

ಕುಲಾಲ ಸಂಘ ಮುಂಬಯಿ ವತಿಯಿಂದ ‘ಆಟಿದ ಅಟೀಲ್’

ಮುಂಬಯಿ : ಕುಲಾಲ ಸಂಘ ಮುಂಬಯಿ, ನವಿಮುಂಬಯಿ ಸಮಿತಿಯ ಮಹಿಳಾ ವಿಭಾಗವು ”ಆಟಿದ ಅಟೀಲ್” ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಆಟಿ ಕೇವಲ ಆಚರಣೆಯಾಗಿರದೆ ಆಟಿ ನಮ್ಮ ಸಂಪ್ರದಾಯವಾಗಿದೆ ಎಂದು ಕುಲಾಲ ಸಂಘ ಮುಂಬಯಿ ಹ ಅಧ್ಯಕ್ಷರಾದ ರಘು ಎ. ಮೂಲ್ಯ ಪಾದೆಬೆಟ್ಟು ತಿಳಿಸಿದರು. ಕನ್ನಡ ಸಂಘ ಸಭಾಗೃಹ, ಶಿವ ವಿಷ್ಣು ಮಂದಿರ ಮಾರ್ಗ, ಜುಹು ನಗರ, ಸೆಕ್ಟರ್ 9ಎ, ವಾಶಿ, ನವಿ ಮುಂಬಯಿ ಇಲ್ಲಿ ಜರಗಿದ ಕುಲಾಲ ಸಂಘದ ನವಿಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ

ತೊಕ್ಕೊಟ್ಟಿನಲ್ಲಿ ಸರಣಿ ಕಳವು ಪ್ರಕರಣ

ತೊಕ್ಕೊಟ್ಟು ಒಳಪೇಟೆಯಲ್ಲಿರುವ ಮೂರು ಅಂಗಡಿಗೆ ನುಗ್ಗಿದ ಕಳ್ಳನೋರ್ವ ನಗದು ಹಾಗೂ ಸಾಮಗ್ರಿಗಳನ್ನು ಕಳವುಗೈದಿರುವ ಘಟನೆ ನಡೆದಿದ್ದು, ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ತೊಕ್ಕೊಟ್ಟು ಒಳಪೇಟೆಯಲ್ಲಿರುವ ಹರಿಶ್ಚಂದ್ರ ಶೆಟ್ಟಿ ಎಂಬವರಿಗೆ ಸೇರಿದ ಲಕ್ಷ್ಮೀ ಕ್ಯಾಂಟೀನ್ , ಹ್ಯಾರೀಸ್ ಎಂಬವರಿಗೆ ಸೇರಿದ ಸಿಲ್ವರ್ ಸ್ಟಾರ್ ಎಂಟರ್‍ಪ್ರೈಸ್ ಸ್ಟೀಲ್ ಸಾಮಗ್ರಿಗಳ ಮಾರಾಟ ಮಳಿಗೆ ಹಾಗೂ ಮೋಹನ್ ಎಂಬವರಿಗೆ ಸೇರಿದ ಎಸ್ ಎಸ್ ಕಮ್ಯುನಿಕೇಷನ್ಸ್ ಮೊಬೈಲ್

ವಸಂತ ಬಂಗೇರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ ಅಪಪ್ರಚಾರ : ಅಭಿಮಾನಿ ಬಳಗದಿಂದ ದೂರು

ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಿ ಅಪಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ವಸಂತ ಬಂಗೇರ ಅವರ ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಪ್ರಯತ್ನವಾಗಿದೆ. ಈ ಸಂದೇಶವನ್ನು ತಾಲೂಕಿನ ಹಲವರು ಹಂಚಿಕೊಂಡು ಗೊಂದಲ ಮೂಡಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರಹಾಸ ಚಾರ್ಮಾಡಿ, ಅಶೋಕ್ ಪೂಜಾರಿ, ಧನಂಜ ಜೈನ್ ಉಪಸ್ಥಿತರಿದ್ದರು.

ಮೋಹನ್ ಕೋಡಿಂಬಾಳ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ

ಕಡಬ : ಜೇಸಿಐ ಭಾರತದ ಪ್ರತಿಷ್ಠಿತ ಘಟಕವಾದ ಜೇಸಿಐ ಕಡಬ ಕದಂಬದ ಮಾಜಿ ಅಧ್ಯಕ್ಷರಾದ ಮೋಹನ್ ಕೋಡಿಂಬಾಳ ರವರಿಗೆ ಜೇಸಿಐ ವಲಯ-15 ನೀಡುವ ಪ್ರತಿಷ್ಠಿತ ‘ಉದ್ಯೋಗ ರತ್ನ’ ಪ್ರಶಸ್ತಿ ಲಭಿಸಿದೆ. ಜೇಸಿಐ ಶಂಕರನಾರಾಯಣ ಘಟಕದ ಆಶ್ರಯದಲ್ಲಿ ಹಾಲಾಡಿಯ ಶಾಲಿನಿ ಜಿ.ಶಂಕರ ಕನ್ವೆನ್ಸನ್‌ ಸೆಂಟರ್‌ನಲ್ಲಿ ನಡೆದ ವಲಯ 15ರ ಬೆಳವಣಿಗೆ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿಯವರು ಪ್ರಶಸ್ತಿ ವಿತರಿಸಿದರು.

ಪ್ರಧಾನಿಯವರನ್ನು ಭೇಟಿಯಾದ ಸಿಎಂ ಸಿದ್ಧರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಂಸತ್ ಭವನದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ, ಅವರನ್ನು ಭೇಟಿಯಾದರು ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವರಾದ ರಾಜನಾಥಸಿಂಗ್ ಅವರನ್ನು ಭೇಟಿ ಮಾಡಿ ಮೈಸೂರು ದಸರಾ ಮಹೋತ್ಸವದಲ್ಲಿ ಏರ್ ಶೋ ನಡೆಸಲು ಮನವಿ ಮಾಡಿದರು. ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.

ಮಂಗಳೂರು ಜಂಕ್ಷನ್‍ನಲ್ಲಿ ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣ

ಮಂಗಳೂರು ಜಂಕ್ಷನ್‍ನಲ್ಲಿ ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣಕ್ಕೆ ಆಗಸ್ಟ್ 6ರಂದು ಶಿಲಾನ್ಯಾಸ ನೆರವೇರಲಿದೆ.\ ರೈಲು ನಿಲ್ದಾಣದಲ್ಲಿ ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣಕ್ಕೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ರವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಈ ಮಂಗಳೂರು ಜಂಕ್ಷನ್ ರೈಲು ನಿಲ್ದಾಣವು ಸುಮಾರು ರೂ. 19.32

ಕಾರ್ಕಳದ ಕೆನರಾ ಬ್ಯಾಂಕ್‍ನಲ್ಲಿ ಅಗ್ನಿ ಅನಾಹುತ

ಕಾರ್ಕಳದ ಅನಂತ ಪದ್ಮನಾಭ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಇಂದು ಬೆಳಿಗ್ಗೆ ಅಗ್ನಿ ಅನಾಹುತ ಸಂಭವಿಸಿದೆ. ಕಾರ್ಕಳ ಅಗ್ನಿಶಾಮಕ ದಳ ಕಾರ್ಯಚರಣೆ ನಡೆಸಿ ತ್ವರಿತ ಗತಿಯಲ್ಲಿ ಬೆಂಕಿ ನಂದಿಸಿದ್ದಾರೆ. ಯಾವುದೇ ಅಗತ್ಯತೆ ಉಳ್ಳ ದಾಖಲೆಗಳು ಹಾಗೂ ಸೂತ್ತುಗಳು ಹಾನಿಯಾಗಿಲ್ಲ. ಗ್ರಾಹಕರು ಯಾರು ಭಯಪಡುವ ಅವಶ್ಯಕತೆ ಇಲ್ಲ ಎಂದು ಬ್ಯಾಂಕ್ ಪ್ರಬಂಧಕರು ತಿಳಿಸಿದ್ದಾರೆ.

ಸಮಾಜದ ರಕ್ಷಣೆಯ ಹೆಸರಿನಲ್ಲಿ ನೈತಿಕ ಗೂಂಡಗಿರಿ ಖಂಡನೀಯ : ಸಚಿವ ಬಿ. ರಮಾನಾಥ ರೈ

ಬಂಟ್ವಾಳ: ಸಮಾಜದ ರಕ್ಷಣೆ ಮಾಡುತ್ತೇವೆಂದು ನೈತಿಕ ಗೂಡಂಗಿರಿ ಮಾಡುವ ಪ್ರವೃತ್ತಿ ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಸೇರಿದ ವ್ಯಕ್ತಿಗಳಿಂದ ನಡೆಯುತಿದ್ದು ಇದನ್ನು ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಖಂಡಿಸುವುದಾಗಿ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮನಾಥ ರೈ ಹೇಳಿದರು. ಅವರು, ಬಿ.ಸಿ.ರೋಡಿನಲ್ಲಿರುವ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇಂತಹ ಕೃತ್ಯ ಎಸಗುವವರ ವಿರುದ್ದ

ಧರ್ಮಸ್ಥಳದಲ್ಲಿ ನೈತಿಕ ಪೊಲೀಸ್ ಗಿರಿ – ಆಟೋ ರಿಕ್ಷಾ ಚಾಲಕನ ಮೇಲೆ ತಂಡದಿಂದ ಹಲ್ಲೆ

ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಾಡಿಗೆಗೆ ಹೋಗಿದ್ದ ಉಜಿರೆಯ ಆಟೋ ರಿಕ್ಷಾ ಚಾಲಕನಿಗೆ ತಂಡವೊಂದು ತೀವ್ರ ಹಲ್ಲೆ ನಡೆಸಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಉಜಿರ ಹಳೆ ಪೇಟೆ ನಿವಾಸಿ ಮುಹಮ್ಮದ್ ಆಶಿಕ್ ಹಲ್ಲೆಗೊಳಗಾದ ಯುವಕ. ಆಶಿಕ್ ತನ್ನ ಆಟೋದಲ್ಲಿ ಬುಧವಾರ ರಾತ್ರಿ ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಾಡಿಗೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ. ನಾಲ್ವರ ತಂಡವೊಂದು ಧರ್ಮಸ್ಥಳ ಕೆಎಸ್ಸಾರ್ಟಿಸಿ