ಕುಲಾಲ ಸಂಘ ಮುಂಬಯಿ ವತಿಯಿಂದ ‘ಆಟಿದ ಅಟೀಲ್’

ಮುಂಬಯಿ : ಕುಲಾಲ ಸಂಘ ಮುಂಬಯಿ, ನವಿಮುಂಬಯಿ ಸಮಿತಿಯ ಮಹಿಳಾ ವಿಭಾಗವು ”ಆಟಿದ ಅಟೀಲ್” ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಆಟಿ ಕೇವಲ ಆಚರಣೆಯಾಗಿರದೆ ಆಟಿ ನಮ್ಮ ಸಂಪ್ರದಾಯವಾಗಿದೆ ಎಂದು ಕುಲಾಲ ಸಂಘ ಮುಂಬಯಿ ಹ ಅಧ್ಯಕ್ಷರಾದ ರಘು ಎ. ಮೂಲ್ಯ ಪಾದೆಬೆಟ್ಟು ತಿಳಿಸಿದರು.
ಕನ್ನಡ ಸಂಘ ಸಭಾಗೃಹ, ಶಿವ ವಿಷ್ಣು ಮಂದಿರ ಮಾರ್ಗ, ಜುಹು ನಗರ, ಸೆಕ್ಟರ್ 9ಎ, ವಾಶಿ, ನವಿ ಮುಂಬಯಿ ಇಲ್ಲಿ ಜರಗಿದ ಕುಲಾಲ ಸಂಘದ ನವಿಮುಂಬಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ”ಆಟಿದ ಅಟೀಲ್” ಕಾರ್ಯಕ್ರದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು. ಸಂಘದ ಎಲ್ಲಾ ಕಾರ್ಯಕ್ರಮದಲ್ಲಿ ಹಿರಿಯರೊಂದಿಗೆ ಸಮಾಜದ ಕಿರಿಯರು ಸಹಕರಿಸಿದಲ್ಲಿ ಸಂಘವು ಇನ್ನೂ ಪ್ರಗತಿ ಯೊಂದುದರಲ್ಲಿ ಸಂದೇಹವಿಲ್ಲ. ಸಮಾಜದ ಯುವ ಜನಾಂಗವು ಹೆಚ್ಚಿನ ಮಟ್ಟದಲ್ಲಿ ಸಂಘದ ಕಾರ್ಯದಲ್ಲಿ ಕ್ರೀಯಾಶೀಲರಾಗಲಿ ಎಂದರು.

ಈ ಕಾರ್ಯಕ್ರಮವನ್ನು ಕುಲಾಲ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಕವಿತಾ ಹಂಡ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂಟರ ಸಂಘ ಮುಂಬಯಿ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಜಯಂತಿ ಸಿ. ಶೆಟ್ಟಿ ಆಗಮಿಸಿದ್ದು ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಸುಂದರವಾದ ಕಾರ್ಯಕ್ರಮದಲ್ಲಿ ಬಾಗವಹಿಸಲು ಸಂತೋಷವಾಗುತ್ತಿದೆ ಎಂದರು. ಸಮಾಜಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದವರನ್ನು ಹುಡುಕಿ ಅವರನ್ನು ದಂಪತಿ ಸಮೇತ ಇಂದು ಸನ್ಮಾನಿಸಿ ಉತ್ತಮ ಕಾರ್ಯವನ್ನು ಮಾಡಿದ್ದೀರಿ ಎಂದರು.
ಸಂಘದ ಗೌರವ ಅಧ್ಯಕ್ಷರಾದ ಪಿ. ದೇವದಾಸ್ ಕುಲಾಲ್, ಮಾತನಾಡುತ್ತಾ 94 ವರ್ಷಗಳ ಇತಿಹಾಸವನ್ನು ಹೊಂದಿರುವ ಕುಲಾಲ ಸಂಘ ಮುಂಬಯಿ ಇತರ ಎಲ್ಲಾ ಸಮಾಜ ಬಾಂಧವರಲ್ಲಿ ಉತ್ತಮ ಸಂಮಂಧವನ್ನು ಬೆಳೆಸಿದ್ದು ನಾವು ಮುಂಬಯಿಯಲ್ಲಿ ವಿಶಾಲವಾದ ಜಾಗವನ್ನು ಹೊಂದಿರುವೆವು ಹಾಗೂ ಮಂಗಳೂರಲ್ಲಿಯೂ ಕುಲಾಲ ಭವನ ವನ್ನು ನಿರ್ಮಿಸಿದ್ದು ಇದು ನಮ್ಮ ಹಾಗೂ ನಮ್ಮ ಹಿರಿಯರ ಸಾಧನೆ ಎಂದರು. ಕುಲಾಲ ಸಂಘದ ಸಾಧನೆ, ಚಟುವಟಿಕೆಗಳ ಹಾಗೂ ಕಾರ್ಯಗಳ ಬಗ್ಗೆ ಸಮಾಜ ಬಾಂಧವರು ಅರಿತುಕೊಳ್ಳಬೇಕಾಗಿದೆ ಎಂದರು.

ಮಹಿಳಾ ವಿಭಾಗದ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಮಮತಾ ಎಸ್. ಕುಲಾಲ್ ಎಲ್ಲರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಬೇಬಿ ವಿ. ಬಂಗೇರ ಆಟಿ ಬಗ್ಗೆ ವಿವರಿಸಿದರು. ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯದರ್ಶಿ ಮಾಲತಿ ಜಯ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಬಿ ಜಿ ಅಂಚನ್ ದಂಪತಿಯನ್ನು ಸನ್ಮಾನಿಸಲಾಯಿತು. ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಕುಲಾಲ್ ಮತ್ತು ಸದನಂದ ಕುಲಾಲ ದಂಪತಿಯನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಕುಲಾಲ ಸಮಾಜದ ಮಹಾದಾನಿ ಸುನಿಲ್ ಸಾಲ್ಯಾನ್ ಮತ್ತು ದೇವಕಿ ಸಾಲ್ಯಾನ್ ದಂಪತಿಯನ್ನು ವಿಶೇಷವಾಗಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಮಹಿಳೆಯರು ಮನೆಯಲ್ಲಿ ತಯಾರಿಸಿದ ರುಚಿಕರ ಆಟಿಯ ತಿಂಡಿಗಳನ್ನು ತಿನೆಸುಗಳ ಬೋಜನ ನಡೆಯಿತು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಒಳಾಂಗಣ ಕ್ರೀಡೆ ಇತ್ಯಾದಿಗಳು ನಡೆಯಿತು.
ಉಪಾಧ್ಯಕ್ಷ ಡಿ. ಐ. ಮೂಲ್ಯ, ಗೌರವ ಪ್ರಧಾನ , ಗೌರವ ಕೋಶಾಧಿಕಾರಿ ಜಯ ಎಸ್. ಅಂಚನ್, ನವಿಮುಂಬಯಿ ಸಮಿತಿಯ ಪರವಾಗಿ ಕಾರ್ಯಾಧ್ಯಕ್ಷ ವಾಸು ಬಂಗೇರ, ಉಪಕಾರ್ಯಾಧ್ಯಕ್ಷ ಸದಾನಂದ ಕುಲಾಲ್, ಕಾರ್ಯದರ್ಶಿ ಎಲ್ ಆರ್ ಮೂಲ್ಯ, ಕೋಶಾಧಿಕಾರಿ ಸೂರಜ್ ಎಸ್ ಕುಲಾಲ್, ಮಹಿಳಾ ವಿಭಾಗದ , ಉಪ ಕಾರ್ಯಾಧ್ಯಕ್ಷೆ ದೇವಕಿ ಎಸ್ ಸಾಲ್ಯಾನ್, ಕೋಶಾಧಿಕಾರಿ ಉಷಾ ಅರ್. ಮೂಲ್ಯ, ಜೊತೆ ಕಾರ್ಯದರ್ಶಿ ಶೋಭನಾ ಎನ್. ಬಂಗೇರ, ಜೊತೆ ಕೋಶಾಧಿಕಾರಿ ಸುಶೀಲಾ ಪಿ ಬಂಗೇರ ಹಾಗೂ ಸಮಿತಿಯ ಮತ್ತು ಸ್ಥಳೀಯ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
