ಕಾರ್ಕಳದ ಕೆನರಾ ಬ್ಯಾಂಕ್‍ನಲ್ಲಿ ಅಗ್ನಿ ಅನಾಹುತ
ಕಾರ್ಕಳದ ಅನಂತ ಪದ್ಮನಾಭ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಇಂದು ಬೆಳಿಗ್ಗೆ ಅಗ್ನಿ ಅನಾಹುತ ಸಂಭವಿಸಿದೆ. ಕಾರ್ಕಳ ಅಗ್ನಿಶಾಮಕ ದಳ ಕಾರ್ಯಚರಣೆ ನಡೆಸಿ ತ್ವರಿತ ಗತಿಯಲ್ಲಿ ಬೆಂಕಿ ನಂದಿಸಿದ್ದಾರೆ. ಯಾವುದೇ ಅಗತ್ಯತೆ ಉಳ್ಳ ದಾಖಲೆಗಳು ಹಾಗೂ ಸೂತ್ತುಗಳು ಹಾನಿಯಾಗಿಲ್ಲ. ಗ್ರಾಹಕರು ಯಾರು ಭಯಪಡುವ ಅವಶ್ಯಕತೆ ಇಲ್ಲ ಎಂದು ಬ್ಯಾಂಕ್ ಪ್ರಬಂಧಕರು ತಿಳಿಸಿದ್ದಾರೆ.