Home Posts tagged V4News (Page 491)

ಬಜರಂಗದಳ ನಿಷೇಧ ಕುರಿತು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಕಿಡಿ

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವ ಬಜರಂಗದಳ ನಿಷೇಧ ಕುರಿತು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಅವರು ಕಿಡಿ ಕಾರಿದ್ದು, ನಿಷೇಧಿತ ಪಿಎಫ್ಐ ಜೊತೆ ಬಜರಂಗದಳವನ್ನು ಹೋಲಿಕೆಗೆ ತಕ್ಕ ಪ್ರತಿಫಲ ಅನುಭವಿಸಲಿದೆ ಎಂದು ಹೇಳಿದ್ದಾರೆ. ಜನರಿಂದ ತಿರಸ್ಕಾರಗೊಂಡಿರುವ‌ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಓಲೈಕೆ ರಾಜಕಾರಣದಲ್ಲಿ

ಬಜರಂಗದಳ ನಿಷೇಧ ಪ್ರಸ್ತಾವ : ಹಿಂದೂಗಳಿಗೆ ಮಾಡಿದ ಅವಮಾನ : ವಿ.ಎಚ್.ಪಿ

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳದ ನಿಷೇಧ ಪ್ರಸ್ತಾಪಿಸಿದನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ಖಂಡಿಸಿದೆ. ಬಜರಂಗದಳ ರಾಷ್ಟ್ರಭಕ್ತ ಸಂಘಟನೆ ದೇಶದಾದ್ಯಂತ 60 ಸಾವಿರ ಗ್ರಾಮಗಳಲ್ಲಿ ಬಜರಂಗದಳದ ಕಾರ್ಯ ನಡೆಯುತ್ತಿದೆ. ಶ್ರೀರಾಮ ಮಂದಿರ ಹೋರಾಟದಿಂದ ಪ್ರಾರಂಭಗೊಂಡು ಹಿಂದು ಶ್ರದ್ದಾ ಬಿಂದುಗಳ ರಕ್ಷಣೆ, ಗೋರಕ್ಷಣೆ, ಲವಜಿಹಾದ್‌ಗೆ ಬಲಿಯಾದ ಹೆಣ್ಣುಮಕ್ಕಳ ರಕ್ಷಣೆ,ಸಾವಿರಾರು ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಬಂದಿರುವ ಬಜರಂಗದಳ ಸಂಘಟನೆಯನ್ನು ನಿಷೇಧ

ಭಜರಂಗ ದಳದ ನಿಷೇದಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಸರ್ವನಾಶ ಖಂಡಿತ : ಅರುಣ್ ಕುಮಾರ್ ಪುತ್ತಿಲ

ಭಜರಂಗದಳ ನಿಷೇಧ ಬಿಡಿ, ಯಾವ ಒಬ್ಬ ಕಾರ್ಯಕರ್ತನಿಗೆ ತೊಂದರೆಯಾಗಲು ನಾವು ಬಿಡುವುದಿಲ್ಲ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆ.ಪುತ್ತೂರು : ಚುನಾವಣೆಯ ಹೊಸ್ತಿಲಿನಲ್ಲಿಯೇ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಪ್ರಣಾಳಿಕೆ ಕೆಲವು ವಿಚಾರವು ಕಿಚ್ಚು ಹಚ್ಚಿದೆ.ಈ ಬಗ್ಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರು ಪ್ರತಿಕ್ರಿಯಿಸಿದ್ದು, `ಕಾಂಗ್ರೆಸ್

ಬಜರಂಗದಳ ಮುಟ್ಟಿದರೆ ರಾವಣನ ಲಂಕೆಯು ದಹನವಾದಂತೆ ಕಾಂಗ್ರೆಸ್ ದಹನವಾಗಲಿದೆ : ಡಾ.ಭರತ್ ಶೆಟ್ಟಿ ವೈ

ಹಿಂದೂ ಸಮಾಜದ ಶಕ್ತಿಯಾಗಿರುವ ಬಜರಂಗದಳವನ್ನು ಕನಸಿನಲ್ಲೂ ನಿಷೇಧಿಸುವ ಬಗ್ಗೆ ಯೋಚಿಸಬೇಡಿ, ರಾವಣನ ಲಂಕೆಯು ದಹನವಾದಂತೆ ಕಾಂಗ್ರೆಸ್ ದಹನವಾಗಲಿದೆ. ಮಾತ್ರವಲ್ಲ ಈಗಿನ ಅಳಿದುಳಿದ ನಿಮ್ಮ ಕಾಂಗ್ರೆಸ್ ಪಕ್ಷದ ಕುರುಹನ್ನು ಜನರೇ ಸಮೀಪದ ಅರಬೀ ಸಮುದ್ರದಲ್ಲಿ ವಿಸರ್ಜಿಸಲಿದ್ದಾರೆ. ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ,ಹಾಲಿ ಶಾಸಕ ಡಾ.ಭರತ್ ಶೆಟ್ಟಿ ವೈ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ದೇಶ ಭಕ್ತ ,ಹಿಂದೂ ಸಮಾಜದ ಒಳಿತಿಗಾಗಿ ಹಾಗೂ ಸಾಮಾಜಿಕವಾಗಿ

ಬೆಳ್ತಂಗಡಿ : ಪಡಂಗಡಿಯಲ್ಲಿ ಬಿಜೆಪಿ ಸಾರ್ವಜನಿಕ ಪ್ರಚಾರ ಸಭೆ

ವಿಧಾನಸಭಾ ಚುನಾವಣೆಯ ಹಿನ್ನೆಲೆ ಪಡಂಗಡಿಯಲ್ಲಿ ನಡೆದ ಮೊದಲ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಹರೀಶ ಪೂಂಜಾ ಅವರು ಭಾಗಿಯಾಗಿ ಚಾಲನೆಯನ್ನು ನೀಡಿದರು. ಸಾರ್ವಜನಿಕ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ ಬೆಳ್ತಂಗಡಿ ಕ್ಷೇತ್ರ ಈಗ ರಾಜ್ಯಕ್ಕೆ ಮಾದರಿಯಾಗಿ ನಿಂತಿದೆ, ಅಭಿವೃದ್ಧಿಯ ಮಹಾಪರ್ವವೇ ನಡೆದಿದೆ. ಬೆಳ್ತಂಗಡಿಯನ್ನು ಮತ್ತಷ್ಟು ಬೆಳಗಲು ಕ್ಷೇತ್ರದ ಜನತೆ ಮತ್ತೊಂದು ಬಾರಿ ಹರೀಶ ಪೂಂಜಾ ಅವರನ್ನು

ಪಾರ್ಸೆಲ್ ನೀಡುವ ನೆಪದಲ್ಲಿ ಮಹಿಳೆಯ ಸರ ಎಗರಿಸಿ ಪರಾರಿ

ಬಂಟ್ಬಾಳ: ಪಾರ್ಸೆಲ್ ನೆಪದಲ್ಲಿ ಮನೆಗೆ ಬಂದ ವ್ಯಕ್ತಿಯೊಬ್ಬ ಮಹಿಳೆಯ ಕತ್ತಿನಿಂದ ಕರಿಮಣಿ ಸರ ಕದ್ದು ಪರಾರಿಯಾದ ಘಟನೆ ಬಂಟ್ವಾಳದ ರಾಯರ ಚಾವಡಿ ಎಂಬಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನದ ವೇಳಗೆ ಮನೆ ಬಳಿಗೆ ಬಂದ ಕಳ್ಳ ಪಾರ್ಸೆಲ್ ನೀಡುವ ನೆಪದಲ್ಲಿ ಮಹಿಳೆಯ ಸಮೀಪಕ್ಕೆ ಬಂದು ಸುಮಾರು 4 ಪವನಿನ ಕರಿಮಣಿ ಸರ ಎಗರಿಸಿ ಸ್ಥಳದಿಂದ ಓಡಿ ಹೋಗಿದ್ದಾನೆ. ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳ ಸರ ಎಗರಿಸಿ ಓಡುವ ದೃಶ್ಯ ಎದುರಿನ ಮನೆಯ ಸಿಸಿ

ಬೈಂದೂರು ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ

ಇಡೀ ಕ್ಷೇತ್ರದ ರಾಜಕಾರಣದ ದಿಕ್ಕನ್ನು ಬದಲಾಯಿಸುವ ಶಕ್ತಿ ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗಿದೆ. ಆ ಹಿನ್ನೆಲೆಯಲ್ಲಿ ಪ್ರಣಾಳಿಕೆಯನ್ನು ಮನೆ ಮನೆಗೂ ತಲುಪಿಸುವ ಕಾರ್ಯ ವಾಗಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲದ ವತಿಯಿಂದ ತ್ರಾಸಿಯ ಕೊಂಕಣ ಖಾರ್ವಿ ಸಭಾಭವನದಲ್ಲಿ ನಡೆದ ಪಂಚಾಯತ್ ಪ್ರತಿನಿಧಿಗಳ ಸಮಾವೇಶದಲ್ಲಿ ಪಕ್ಷದ ಬೈಂದೂರು ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು. ಬಿಜೆಪಿ ಸರ್ಕಾರ ಇವತ್ತು

ಬಜಪೆ : ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಭೇಟಿ

ಸುಂಕದಕಟ್ಟೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡ ಅವರು ಅಪಾರ ಸಂಖ್ಯೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳಿಗೆ ಶಕ್ತಿ ತುಂಬಿದರು.. ಹೆಚ್.ಡಿ.ದೇವೇಗೌಡರು ಸುಂಕದಕಟ್ಟೆ ಬಜಪೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಜೊತೆಗೆ ಮಂಗಳೂರು ಉತ್ತರ ಅಭ್ಯರ್ಥಿ ಮೊಯ್ದೀನ್ ಭಾವ ಮತ್ತು ಮಂಗಳೂರು ಕೇಂದ್ರ ಅಭ್ಯರ್ಥಿ ಸುಮತಿ ಹೆಗ್ಡೆ, ಗಣೇಶ್ ಉಡುಪ, ಫರಾಕ್ ಅಬ್ದುಲ್ಲಾ ಸೇರಿದಂತೆ ಹಲವರು

ಸುಸ್ಥಿರ, ಸುವ್ಯಸ್ಥಿತ ಸಮನ್ವಯದ ಅಭಿವೃದ್ಧಿಗಾಗಿ ಬಿಜೆಪಿಗೆ ಜನಾದೇಶ ಖಚಿತ: ಗೋಪಾಲಕೃಷ್ಣ ಅಗರ್ವಾಲ್

ಮಂಗಳೂರು: ಸುಸ್ಥಿರ, ಸುವ್ಯವಸ್ಥಿತ ಮತ್ತು ಸಮನ್ವಯದ ಅಭಿವೃದ್ಧಿ ಕಾರ್ಯಗಳಿಗಾಗಿ ಕರ್ನಾಟಕದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರಕಾರವನ್ನು ಪುನರಾಯ್ಕೆ ಮಾಡುವುದು ನಿಶ್ಚಿತವಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೋಪಾಲಕೃಷ್ಣ ಅಗರ್ವಾಲ್ ಪ್ರತಿಪಾದಿಸಿದರು. ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವನ್ನು 5 ಟ್ರಿಲಿಯನ್‌ ಡಾಲರ್ ಗಾತ್ರದ ಅರ್ಥವ್ಯವಸ್ಥೆಯನ್ನಾಗಿ ಅಭಿವೃದ್ಧಿಪಡಿಸುವ ಪ್ರಧಾನಿ ನರೇಂದ್ರ ಮೋದಿ ಅವರ

ಸಮಾನ ಮನಸ್ಕರು ಒಂದಾಗಿ ಬಿಜೆಪಿ ಸೋಲಿಸಬೇಕು : ರಮಾನಾಥ ರೈ

ಬಂಟ್ವಾಳ : ಮತೀಯವಾದಿ, ಫ್ಯಾಸಿಸ್ಟರಿಂದ ದೇಶಕ್ಕೆ ಅಪಾಯವಿದೆ. ಒಂದೇ ದೇಶ, ಒಂದೇ ಪಕ್ಷ, ಒಂದೇ ನಾಯಕತ್ವ ಎಂಬರ್ಥದಲ್ಲಿ ಬಿಜೆಪಿಗರು ಮಾತನಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಮುನ್ಸೂಚನೆಯಾಗಿದೆ. ಹೀಗಾಗಿ ಸಮಾನ ಮನಸ್ಕರು ಒಂದಾಗಿ ಚುನಾವಣೆ ಎದುರಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಬಂಟ್ವಾಳದಲ್ಲಿ ನಡೆದ ಸಿಪಿಐ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಎಡಪಂಥಿಯ ಚಿಂತನೆಗಳು ಹಾಗೂ