Home Posts tagged V4News (Page 493)

ಮೂಡಬಿದಿರೆ : ಕಡ್ದಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಉಮಾನಾಥ ಕೋಟ್ಯಾನ್ ಮತಯಾಚನೆ

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಗಾಂಧಿನಗರದ ಕಡ್ದಬೆಟ್ಟು ವಾಡ್ 9ನಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ ಎ.ಕೋಟ್ಯಾನ್ ಅವರು ಕಾರ್ಯಕರ್ತರ ಜತೆ ಮಾತುಕತೆ ನಡೆಸಿ ಮತದಾನ ಮಾಡುವಂತೆ ವಿನಂತಿಸಿದರು. ನಂತರ ಕಾರ್ಯಕರ್ತರು ಕಡ್ದಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಪರವಾಗಿ ಮತಯಾಚಿಸಿದರು.ವಾಡ್ 9 ಸದಸ್ಯೆ ದಿವ್ಯಾ ಜಗದೀಶ್,

ಬಂಟ್ವಾಳ : ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಪರ ಪ್ರಚಾರ

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪರ್ಲಿಯ ಪ್ರದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್ ಅವರು ಮನೆ ಮನೆಗಳಿಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಿ ಬಿ. ರಮಾನಾಥ ರೈ ಅವರ ಪರವಾಗಿ ಪ್ರಚಾರ ನಡೆಸಿದರು.

ಮೇ 1 ಎಸ್.ಡಿ.ಎಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮಿಲನ

ಉಜಿರೆ, ಎ.29: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಮೇ 1 ರಂದು ಕಾಲೇಜಿನ ಸಮ್ಯಗ್ದರ್ಶನ ಸೆಮಿನಾರ್ ಹಾಲ್ ನಲ್ಲಿ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ‘ಕ್ಷೇಮವನ’ ಬೆಂಗಳೂರು ಇದರ ನಿರ್ದೇಶಕಿ ಶ್ರದ್ಧಾ ಅಮಿತ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಲೇಜಿನ ಇನ್ನೋರ್ವ ಹಿರಿಯ ವಿದ್ಯಾರ್ಥಿ, ನಾವೂರಿನ ಆರೋಗ್ಯ ಕ್ಲಿನಿಕ್ ನ ವೈದ್ಯ ಡಾ. ಪ್ರದೀಪ್ ಎ.

ಹಿಂದುತ್ವದ ಹೆಸರಿನಲ್ಲಿ ಗೆದ್ದು ಹಿಂದೂಗಳಿಗೆ ದ್ರೋಹ ಬಗೆಯುವ ಬಿಜೆಪಿಯನ್ನು ಸೋಲಿಸಿ – ಅನುಪಮ ಶೆಣೈ

ಮಂಗಳೂರು: “10% ಸರಕಾರ ಎಂದು ಹಿಂದಿನ ಸರಕಾರವನ್ನು ದೂಷಿಸಿ ಹಿಂದುತ್ವದ ಹೆಸರಿನಲ್ಲಿ ಡಬಲ್ ಇಂಜಿನ್ ಸರಕಾರ ರಚಿಸಿ ಬ್ರಷ್ಟಾಚಾರವನ್ನು 40% ಗೆ ತಲುಪಿದ ಮೋದಿಯವರು ಇಂದು ಬ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲಾ ಕಡೆ ಭ್ರಷ್ಟರಿಗೆ ಪ್ರಾಶಸ್ತ್ಯ ನೀಡುವುದು ಕಾಣುತ್ತಿದೆ” ಎಂದು ಭ್ರಷ್ಟಾಚಾರದ ವಿರುದ್ಧ ಹೋರಾಡಿ ತನ್ನ ಡಿವೈಎಸ್ಪಿ ಪದವಿಯನ್ನು ತ್ಯಾಗ ಮಾಡಿದ್ದ ಅನುಪಮಾ ಶೆಣೈ ಅವರು ಹೇಳಿದ್ದಾರೆ. ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ 40 ಯೋಧರು

ಕೆರೆಯ ಪಾಚಿ ತೆಗೆಯಲು ಹೋದ ಯುವಕ ಮೃತ್ಯು

ತೋಟದ ಕೆರೆಯಲ್ಲಿದ್ದ ಪಾಚಿ ತೆಗೆಯಲು ಹೋದ ಯುವಕ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ತಾಡಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಪಾಲ್ತಾಡಿ ಗ್ರಾಮದ ಕಾಪುತಮೂಲೆ ನಿವಾಸಿ ಮೋನಪ್ಪ ನಾಯ್ಕ ಎಂಬವರ ಪುತ್ರ ಗೋಪಾಲಕೃಷ್ಣ ಕೆ.(34) ಎಂದು ಗುರುತಿಸಲಾಗಿದೆ. ತೋಟದ ಕೆರೆಯಲ್ಲಿರುವ ಪಾಚಿಯನ್ನು ತೆಗೆಯಲು ಹೋದ ಪಿರ್ಯಾದಿದಾರರ ಗೋಪಾಲಕೃಷ್ಣ ಅವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಈಜು ಬಾರದೇ

ನನ್ನ ಧರ್ಮವನ್ನು ಪ್ರೀತಿಸುವುದೇ ಹಿಂದುತ್ವ : ಮಂಗಳೂರು ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ

ಸುರತ್ಕಲ್: ಭಯೋತ್ಪಾದಕರನ್ನು ಅಮಾಯಕರು ಎಂದು ಕರೆಯುವ ಡಿ.ಕೆ ಶಿವಕುಮಾರ್ ಅವರು ನಿಜವಾದ ಕೋಮುವಾದಿ. ಅವರಿಂದ ಒಂದು ವರ್ಗದ ತುಷ್ಟೀಕರಣವಾಗುತ್ತಿದೆ.ನಾವು ಸರಕಾರದ ಎಲ್ಲಾ ಸೌಲಭ್ಯವನ್ನು ಎಲ್ಲಾ ವರ್ಗಕ್ಕೆ ಸಮಾನವಾಗಿ ಸಿಗುವಂತೆ ಮಾಡಿದೆ ಎಂದು ಡಾ.ಭರತ್ ಶೆಟ್ಟಿ ವೈ ಹೇಳಿದರು. ಮುಕ್ಕದಲ್ಲಿ ಪಾಲಿಕೆ ವಾರ್ಡ್ 1 ರಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ,ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು. ಹಿಂದುತ್ವ ಹಾಗೂ ಅಭಿವೃದ್ಧಿ ಎರಡರ ಜತೆ ಯೂ ದಿಟ್ಟ ಹೆಜ್ಜೆ

ಮಟ್ಟು : ತಲೆ ತಿರುಗಿ ಮೂರ್ಚೆ ಹೋಗಿದ್ದ ಮಹಿಳೆ : ಮಾನವೀಯತೆ ಮೆರೆದ ವಿನಯ್‍ಕುಮಾರ್ ಸೊರಕೆ

ಮತಯಾಚನೆ ಸಂದರ್ಭದಲ್ಲಿ ಕಾಪು ಕ್ಷೇತ್ರ ಮಟ್ಟುವಿನಲ್ಲಿ ರಸ್ತೆ ಮಧ್ಯದಲ್ಲಿ ತಲೆ ತಿರುಗಿ ಬಿದ್ದಿದ್ದ ಮಹಿಳೆಯನ್ನು ಎತ್ತಿ ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್‍ಕುಮಾರ್ ಸೊರಕೆ. ಮಾನವೀಯತೆ , ಮ್ರದುತ್ವ, ಉಪಚಾರ, ಸಂತೈಸುವಿಕೆ ಇವೆಲ್ಲವೂ ರಾಜಕೀಯ ರಂಗದಲ್ಲಿ ಕಾಣಿಸದ ಈ ದಿನಗಳಲ್ಲಿ ಕಾಪು ಕ್ಷೇತ್ರದ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಯವರು ರಾಜಕೀಯ ರಂಗಕ್ಕೆ ಮಾದರಿಯಾಗಿದ್ದಾರೆ. ಕಾಪು ಕ್ಷೇತ್ರದ ಮಟ್ಟು

ಪಿಎಫ್‍ಐ ಬ್ಯಾನ್ ಮಾಡಿದ ಕೀರ್ತಿ ಬಿಜೆಪಿಗೆ ಇದೆ : ಅಮಿತ್ ಷಾ

ಕಾಂಗ್ರೆಸ್ ಪಕ್ಷವು ದೇಶದ ಸುರಕ್ಷತೆಯನ್ನು ವೋಟ್ ಬ್ಯಾಂಕ್ ಆಗಿ ಪರಿವರ್ತಿಸಲು ರಾಜಕೀಯವಾಗಿ ಆಟವಾಡುತ್ತಿದೆ. ಬಿಜೆಪಿ ಪಕ್ಷವು ಯಾವತ್ತೂ ವೋಟ್ ಬ್ಯಾಂಕ್ ರಾಜಕೀಯದಲ್ಲಿ ನಂಬಿಕೆ ಇಟ್ಡಿಲ್ಲ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಅವರು ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು, ಸಾಮಾಜಿಕ ನ್ಯಾಯದಲ್ಲಿ ಗುರುತರವಾದ ಗುರುಗಳಾಗಿ ಧರ್ಮರಕ್ಷಣೆಯನ್ನು ಮಾಡಿದವರು ನಾರಾಯಣಗುರುಗಳು. ಪ್ರವೀಣ್ ನೆಟ್ಟಾರು

ವಿಟ್ಲದಲ್ಲಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ರೋಡ್ ಶೋ

ಭಾರತದಲ್ಲಿ ಕಾಂಗ್ರೆಸ್ ಬೇಡ ಎಂಬ ನಿರ್ಧಾರಕ್ಕೆ ಜನ ಬಂದಿದ್ದಾರೆ. ಕರ್ನಾಟಕದಲ್ಲಿ ಮಾಡಿದ ಕೆಲಸ ಕಾರ್ಯದ ಹಿನ್ನಲೆಯಲ್ಲಿ ಅದರ ಪ್ರಚಾರಕ್ಕೆ ರಾಷ್ಟ್ರ ನಾಯಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಕಾಂಗ್ರೆಸ್ ರಿವರ್ಸ್ ಗೇರ್ ನಲ್ಲಿ ಹೋಗುತ್ತಿದ್ದು, ಬಿಜೆಪಿ ಡಬ್ಬಲ್ ಇಂಜಿನ್ ನಲ್ಲಿ ಹೋಗುತ್ತಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು. ಅವರು ವಿಟ್ಲ ಮುಖ್ಯ ರಸ್ತೆಯಲ್ಲಿ ರೋಡ್ ಶೋ ನಡೆಸಿ, ಜೈನ ಬಸದಿ ಸಮೀಪದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಉದಯಣ್ಣ ಗೆದ್ದರೆ ಕಾರ್ಕಳ ಜನತೆ ಗೆದ್ದಂತೆ: ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶುಭದ ರಾವ್ ಹೇಳಿಕೆ

ಕಾರ್ಕಳ, ಮಿಯಾರು ಗ್ರಾಮದ ಜೋಡುಕಟ್ಟೆ ಸಂಜೆ ಕಾಂಗ್ರೆಸ್ ಪಕ್ಷದ ಬಹಿರಂಗ ಪ್ರಚಾರ ಸಭೆಯು ನಡೆಯಿತು ಸಭೆಯನ್ನು ಉದ್ದೇಶಿಸಿ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಶುಭದ ರಾವ್ ಮಾತನಾಡಿ ಮುನಿಯಾಲು ಉದಯಶೆಟ್ಟಿ ಯವರೇ ಕಾರ್ಕಳದ ಕಾಂಗ್ರೆಸ್ ಅಭ್ಯರ್ಥಿಯಾಗಬೇಕೆಂದು ಬಹುಜನರ ಬೇಡಿಕೆಯಾಗಿತ್ತು. ಆ ಬೇಡಿಕೆ ಇಂದು ನೆರವೇರಿದೆ. ಉದಯಣ್ಣ ಗೆದ್ದರೆ ಕಾರ್ಕಳ ಜನತೆ ಗೆದ್ದಂತೆ. ಉದಯಣ್ಣ ಗೆದ್ದರೆ ಕಾರ್ಕಳದ ಸೌಹಾರ್ದ ಗೆದ್ದಂತೆ. ಎಂದು ನಾವು ಅರ್ಥ ಮಾಡಿಕೊಳ್ಳಬೇಕೆಂದು