ನನ್ನ ಧರ್ಮವನ್ನು ಪ್ರೀತಿಸುವುದೇ ಹಿಂದುತ್ವ : ಮಂಗಳೂರು ಬಿಜೆಪಿ ಅಭ್ಯರ್ಥಿ ಭರತ್ ಶೆಟ್ಟಿ

ಸುರತ್ಕಲ್: ಭಯೋತ್ಪಾದಕರನ್ನು ಅಮಾಯಕರು ಎಂದು ಕರೆಯುವ ಡಿ.ಕೆ ಶಿವಕುಮಾರ್ ಅವರು ನಿಜವಾದ ಕೋಮುವಾದಿ. ಅವರಿಂದ ಒಂದು ವರ್ಗದ ತುಷ್ಟೀಕರಣವಾಗುತ್ತಿದೆ.ನಾವು ಸರಕಾರದ ಎಲ್ಲಾ ಸೌಲಭ್ಯವನ್ನು ಎಲ್ಲಾ ವರ್ಗಕ್ಕೆ ಸಮಾನವಾಗಿ ಸಿಗುವಂತೆ ಮಾಡಿದೆ ಎಂದು ಡಾ.ಭರತ್ ಶೆಟ್ಟಿ ವೈ ಹೇಳಿದರು.
ಮುಕ್ಕದಲ್ಲಿ ಪಾಲಿಕೆ ವಾರ್ಡ್ 1 ರಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ,ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದುತ್ವ ಹಾಗೂ ಅಭಿವೃದ್ಧಿ ಎರಡರ ಜತೆ ಯೂ ದಿಟ್ಟ ಹೆಜ್ಜೆ ಇಟ್ಟಿದ್ದೇನೆ. ನನ್ನ ಧರ್ಮವನ್ನು ಪ್ರೀತಿಸುವುದೇ ಹಿಂದುತ್ವ.ಅದು ಕೋಮುವಾದಿ ಅಲ್ಲ.ಹಿಂದೂ ದ್ವೇಷಿ ಕಾಂಗ್ರೆಸ್ ನಿಜವಾದ ಕೋಮುವಾದಿ ಎಂದು ಟೀಕಿಸಿದರು.ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಗೆ ಪ್ರತೀ ತಿಂಗಳು ಹಣ ನೀಡುವ ಯೋಜನೆ,ಉಚಿತ ಕರೆಂಟ್ ನೀಡುವ ಸುಳ್ಳು ಮಾತು ಹೇಳುತ್ತಿದೆ. ಸಾವಿರ ಸಾವಿರ ಕೋಟಿ ಹಣವನ್ನು ಹೇಗೆ ತರುತ್ತೀರಿ ಎಂಬ ಪ್ರಶ್ನೆಗೆ ಉತ್ತರ ವಿಲ್ಲ ಎಂದರು.
ಸಭೆಯಲ್ಲಿ ಶೋಭಾ ರಾಜೇಶ್,ರಾಜೇಶ್ ಮುಕ್ಕ ,ಸುಧಾಕರ್,ದಿನಕರ್ ಇಡ್ಯಾ ಮತ್ತಿತರರು ಜತೆಗಿದ್ದರು.