Home Posts tagged V4News (Page 496)

ಎಸ್.ಡಿ.ಎಂ ಸಂಖ್ಯಾಶಾಸ್ತ್ರ ವಿಭಾಗದ ‘ಅನಂತ್ಯ’ ಉತ್ಸವಕ್ಕೆ ಚಾಲನೆ

ಉಜಿರೆ: ವಿದ್ಯಾರ್ಥಿಗಳು ಸದೃಢ ವ್ಯಕ್ತಿತ್ವ ರೂಪಿಸಿಕೊಂಡರೆ ಉನ್ನತ ಅವಕಾಶಗಳನ್ನು ಬಳಸಿಕೊಳ್ಳುವ ಜಾಣ್ಮೆ ರೂಢಿಯಾಗುತ್ತದೆ ಎಂದು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ್ ಹೆಗ್ಡೆ ಬಿ.ಎ ಅಭಿಪ್ರಾಯಪಟ್ಟರು.ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಂಖ್ಯಾಶಾಸ್ತ್ರ ವಿಭಾಗವು ಬುಧವಾರ ಆಯೋಜಿಸಿದ್ದ ‘ಅನಂತ್ಯ’

ಸೋಮೇಶ್ವರದಿಂದ ನಾಪತ್ತೆಯಾಗಿದ್ದ ಕಾರು ಡೀಲರ್ ಮೃತದೇಹ ಉಚ್ಚಿಲ ಸಮುದ್ರತೀರದಲ್ಲಿ ಪತ್ತೆ

ಉಳ್ಳಾಲ: ಸೋಮೇಶ್ವರ ಸಮುದ್ರತೀರದಿಂದ ನಾಪತ್ತೆಯಾಗಿದ್ದ ಸೆಕೆಂಡ್ಸ್ ಕಾರು ಮಾರಾಟ ಮಳಿಗೆ ಮಾಲೀಕ ಉಳ್ಳಾಲ ಧರ್ಮನಗರ ನಿವಾಸಿ ವಸಂತ್ ಅಮೀನ್ (49) ಮೃತದೇಹ ಸೋಮೇಶ್ವರ ಉಚ್ಚಿಲದ ಸಮುದ್ರ ತೀರದಲ್ಲಿ ಇಂದು ಪತ್ತೆಯಾಗಿದೆ. ಎ.26 ರ ಮಧ್ಯಾಹ್ನ ವೇಳೆ ವಸಂತ್ ಅವರ ಕಾರು , ಮೊಬೈಲ್ ಹಾಗೂ ಷೂ ಸೋಮೇಶ್ವರ ಸಮುದ್ರ ತೀರದಲ್ಲಿ ಪತ್ತೆಯಾಗಿತ್ತು. ಈ ವೇಳೆ ಸ್ಥಳೀಯರು ವಸಂತ್ ಅವರು ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿರುವುದನ್ನು ಕಂಡಿದ್ದರು. ಇದರಿಂದ ಆತ್ಮಹತ್ಯೆ ಎಂಬ

ಕಾರ್ಕಳದ ಪಕ್ಷೇತರ ಅಭ್ಯರ್ಥಿ ಡಾ. ಮಮತಾ ಹೆಗ್ಡೆ ಬಿರುಸಿನ ಪ್ರಚಾರ

ಕಾರ್ಕಳದ ಪಕ್ಷೇತರ ಅಭ್ಯರ್ಥಿ ಡಾ. ಮಮತಾ ಹೆಗ್ಡೆ ಅವರು ಕ್ಷೇತ್ರಾದ್ಯಂತ ಬಿರುಸಿನ ಮತಯಾಚನೆಯಲ್ಲಿ ತೊಡಗಿದ್ದಾರೆ. ಕ್ಷೇತ್ರದ ಪ್ರಭಾವಿ ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಡಾ. ಮಮತಾ ಹೆಗ್ಡೆ ಆರೋಪಿಸಿದ್ದಾರೆ. ಕ್ಷೇತ್ರಾದ್ಯಂತ ಮತದಾರರು ಭ್ರಷ್ಟಾಚಾರದ ವಿರುದ್ಧ ನಿಂತಿದ್ದು ತನ್ನ ಪರ ಒಲವು ವ್ಯಕ್ತಪಡಿಸಿದ್ದಾರೆ ಎಂದು ಡಾ. ಮಮತಾ ಹೆಗ್ಡೆ ವಿಶ್ವಾಸ ವ್ಯಕ್ತಪಡಿಸಿದರು.

ಬೆಳ್ತಂಗಡಿ : ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸಂವಾದ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಹಾಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿಗಳಾದನರೇಂದ್ರ ಮೋದಿಯವರ ಕಾರ್ಯಕರ್ತರ ಜೊತೆ ಸಂವಾದ ಕಾರ್ಯಕ್ರಮ ದ ವೀಕ್ಷಣೆ ನಡೆಯಿತು. ನಾರಾವಿ, ಅಳದಂಗಡಿ, ಕುವೆಟ್ಟು, ಕಣಿಯೂರು, ಲಾಯಿಲ, ಉಜಿರೆ, ಧರ್ಮಸ್ಥಳ ಹಾಗೂನಗರ ಪಂಚಾಯತ್ ವ್ಯಾಪ್ತಿಯಲ್ಲಿ ಸಂವಾದದ ವೀಕ್ಷಣೆ ಮಾಡಲಾಯಿತು. ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಂಡಲ ಅಧ್ಯಕ್ಷ ಜಯಂತ

36 ನೇ ಫೆಡರೇಶನ್ ಕಪ್ ವಾಲಿಬಾಲ್ ಚಾಂಪಿಯನ್ ಶಿಫ್

36 ನೇ ಫೆಡರೇಶನ್ ಕಪ್ ವಾಲಿಬಾಲ್ ಚಾಂಪಿಯನ್ ಶಿಪ್ಪು ಪoಡಿಚೇರಿ ಕರೇ ಕಲ್ ನಲ್ಲಿ ತಾರೀಕು 20 ರಿಂದ 26ರ ತನಕ ನಡೆಯಿತು ಈ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಸದಸ್ಯ ಪುತ್ತೂರು ಇಬ್ರಾಹಿಂ ಗೋಳಿ ಕಟ್ಟೆ ಹಾಗೂ ರಾಷ್ಟ್ರ ವಾಲಿಬಾಲ್ ತರಬೇತಿದಾರ ಪುತ್ತೂರು ಪಿ ವಿ ನಾರಾಯಣ ಅತಿಥಿಯಾಗಿ ಭಾಗವಹಿಸಿದ ಈ ಇಬ್ಬರನ್ನು ಪಾಂಡಿಚೇರಿ ಕಾರೇಕಲ್ ವಾಲಿಬಾಲ್ ಸಂಸ್ಥೆ ಸಂಘಟಿಕ ಅಧ್ಯಕ್ಷ ಜಿಎನ್ಎಸ್ ರಾಜಶೇಖರ್ ರವರು ಸಾಲು ಓದಿಸಿ ನೆನಪಿನ

ಭೂಮಿ ಕೊಟ್ಟದ್ದೂ ಕಾಂಗ್ರೆಸ್, ಕೃಷಿಕರಿಗೆ ಉಚಿತ ಕರೆಂಟ್ ಕೊಟ್ಟದ್ದೂ ಕಾಂಗ್ರೆಸ್: ಅಶೋಕ್ ರೈ

ಪುತ್ತೂರು: ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದು ಭೂಮಿಯಿಲ್ಲದ ಬಡವನನ್ನು ಭೂಮಿಯ ಒಡೆಯನನ್ನಾಗಿ ಮಾಡಿದ್ದು ಕಾಂಗ್ರೆಸ್‌ನ ಇಂದಿರಾಗಾಂಧಿ ಅದೇ ರೀತಿ ಕರ್ನಾಟಕದಲ್ಲಿ ಕೃಷಿಗೆ ಉಚಿತ ವಿದ್ಯುತ್ ನೀಡುವ ಮೂಲಕ ಕೃಷಿಕರ ಬದುಕನ್ನು ಹಸನಾಗಿಸಿದ್ದೂ ಕಾಂಗ್ರೆಸ್ ಸರಕಾರವೇ ಆಗಿದೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು. ಪೆರ್ಲಂಪಾಡಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ಬಂದಾಗ

ಕಾವಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ : ಬಿಜೆಪಿಗರಿಗೂ ಗ್ಯಾರಂಟಿ ಕಾರ್ಡು ಕೊಡಿ; ಅಶೋಕ್ ರೈ

ಪುತ್ತೂರು: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ, ಯಾರಿಗೂ ಸಂಶಯ ಬೇಡ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ನೀಡಿದ ನಾಲ್ಕು ಗ್ಯಾರಂಟಿ ಯಓಜನೆಯು ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಜಾರಿಯಾಗುತ್ತದೆ. ಈಗಾಗಲೇ ಕಾರ್ಯಕರ್ತರು ಎಲ್ಲಾ ಮನೆಗಳಿಗೂ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡು ವಿತರಣೆ ಮಾಡುತ್ತಿದ್ದು ಬಿಜೆಪಿಗರ ಮನೆಗಳಿಗೂ ಕಾರ್ಡು ವಿತರಿಸಿ ಯಾವುದೇ ತಾರತಮ್ಯ ಮಾಡಬೇಡಿ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ

ದಿನನಿತ್ಯ ಒಂದೊಂದು ರೀತಿಯ ತೆರಿಗೆ ವಿಧಿಸಿ ಜನರ ಮೇಲೆ ಬರೆ : ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ

ಮಂಜೇಶ್ವರ : ಎಲ್ಲವನ್ನೂ ಸರಿಪಡಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕೇರಳದ ಎಡರಂಗ ಸರಕಾರವು ದಿನನಿತ್ಯ ಒಂದೊಂದು ರೀತಿಯ ತೆರಿಗೆಗಳನ್ನು ಹೇರಿ ಜನತೆಯನ್ನು ಸುಲಿಯುತ್ತಿದ್ದು, ಈ ತುಘಲಕ್ ಸರಕಾರ ತೊಲಗದೆ ಜನತೆ ನೆಮ್ಮದಿ ಕಾಣಲಾರರು ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದರು. ರಾಜ್ಯ ಸರಕಾರದ ತೆರಿಗೆ ಸುಲಿಗೆ ಪ್ರತಿಭಟಿಸಿ ಯುಡಿಎಫ್ ಪೈವಳಿಕೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಪೈವಳಿಕೆ ಪಂಚಾಯತ್ ಕಚೇರಿ ಮುಂಭಾಗದಲ್ಲಿ

ಚುನಾವಣೆ ಹಿನ್ನೆಲೆ, ಕೇರಳ-ಕರ್ನಾಟಕ ಗಡಿಭಾಗದಲ್ಲಿ ತೀವ್ರ ತಪಾಸಣೆ

ಮಂಜೇಶ್ವರ : ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೇರಳ ಪೆÇಲೀಸರು ಕೂಡಾ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ.ಕರ್ನಾಟಕ ಭಾಗಕ್ಕೆ ವ್ಯಾಪಾರ, ಚಿಕಿತ್ಸೆ, ಶಿಕ್ಷಣ ಪ್ರವೇಶ ಸೇರಿದಂತೆ ವಿವಿದ ಉದ್ದೇಶಗಳಿಗಾಗಿ ಅನೇಕ ಜನರು ಕೇರಳದಿಂದ ಗಡಿ ದಾಟಿರವರು ಮರಳಿ ಬರುವಾಗ ದೊಡ್ಡ ಮೊತ್ತದ ಹಣ ಜೊತೆಯಾಗಿದ್ದರೆ ಸಾಕಷ್ಟು ದಾಖಲೆಗಳನ್ನು ಹೊಂದಿರಬೇಕು. ದಾಖಲೆಗಳ ಕೊರತೆಯಿಂದ

ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರಿಂದ ಬಿರುಸಿನ ಮತ ಪ್ರಚಾರ

ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರು ಗಂಗೊಳ್ಳಿ ಮತ್ತು ಹೊಸೂರು ಭಾಗದಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಗುರುರಾಜ್ ಗಂಟಿಹೊಳೆ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಬೈಂದೂರಿನ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.