ದಿನನಿತ್ಯ ಒಂದೊಂದು ರೀತಿಯ ತೆರಿಗೆ ವಿಧಿಸಿ ಜನರ ಮೇಲೆ ಬರೆ : ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ
ಮಂಜೇಶ್ವರ : ಎಲ್ಲವನ್ನೂ ಸರಿಪಡಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕೇರಳದ ಎಡರಂಗ ಸರಕಾರವು ದಿನನಿತ್ಯ ಒಂದೊಂದು ರೀತಿಯ ತೆರಿಗೆಗಳನ್ನು ಹೇರಿ ಜನತೆಯನ್ನು ಸುಲಿಯುತ್ತಿದ್ದು, ಈ ತುಘಲಕ್ ಸರಕಾರ ತೊಲಗದೆ ಜನತೆ ನೆಮ್ಮದಿ ಕಾಣಲಾರರು ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದರು.
ರಾಜ್ಯ ಸರಕಾರದ ತೆರಿಗೆ ಸುಲಿಗೆ ಪ್ರತಿಭಟಿಸಿ ಯುಡಿಎಫ್ ಪೈವಳಿಕೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಪೈವಳಿಕೆ ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆಸಲಾದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಶ್ರೀ ಮೋಹನ್ ರೈ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಗೋಲ್ಡನ್ ಅಬ್ದುಲ್ ರೆಹಮಾನ್, ಝಡ್ . ಎ. ಕಯ್ಯಾರ್, ಅಜೀಜ್ ಕಳಾಯಿ,ಸಾಲಿ ಹಾಜಿ, ಅಂದುಂಞ ಹಾಜಿ,ಹಮೀದ್ ಮಾಸಿಮಾರ್,ಮಾಮು ಪೆರ್ವೋಡಿ ಮೊದಲಾದವರು ಮಾತನಾಡಿದರು.
ಹಮೀದ್ ಕುಞõಲಿ,ಆದಂ ಬಳ್ಳೂರು,ಬಿ.ಕೆ.ಖಾದರ್ ಹಾಜಿ,ಅಜೀಜ್ ಚೇವಾರ್,ಝಕೀರ್ ಪೆÇಯ್ಯೆ,ಫಾರೂಕ್ ಕೆಕೆ ನಗರ,ಫಾರೂಕ್ ಪಲ್ಲೆಕೂಡಲ್,ಸತ್ತಾರ್ ಮಿಯಾ,ಖಲೀಲ್ ಮರಿಕೆ,ಶಾಫಿ ಹಾಜಿ ಪೈವಳಿಕೆ, ಅಮೀರ್ ಅಲಿ ಪೆರ್ಮುದೆ, ಅಬ್ದುಲ್ಲ ಹಾಜಿ ಗೋಳಿಯಡ್ಕ,ಸುಂದರ ಕಯ್ಯಾರ್, ಮೊದಲಾದವರು ನೇತೃತ್ವ ನೀಡಿದರು.