Home Posts tagged V4News (Page 521)

ಚರ್ಚ್‍ಗಳಲ್ಲಿ ಶ್ರದ್ಧಾ ಭಕ್ತಿಯ ಶುಭ ಶುಕ್ರವಾರ ಆಚರಣೆ

ಪ್ರಭು ಯೇಸುಕ್ರಿಸ್ತರನ್ನು ಶಿಲುಬೆಗೇರಿಸುವ ದಿನವಾದ ಗುಡ್ ಫ್ರೈಡೇ(ಶುಭ ಶುಕ್ರವಾರ) ದಿನವನ್ನು ವಿಶ್ವದಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು, ಪುತ್ತೂರು ತಾಲೂಕಿನ ಚರ್ಚ್‍ಗಳಲ್ಲಿಯೂ ಗುಡ್ ಫ್ರೈಡೇ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಪುತ್ತೂರಿನ ಮಾಯಿದೆ ದೇವುಸ್ ಚರ್ಚ್, ಮರೀಲಿನ ಸೆಕ್ರೇಡ್ ಹಾರ್ಟ್ ಚರ್ಚ್,

ಎಸ್.ಡಿ.ಎಂ ನಿವೃತ್ತ ಪ್ರಾಂಶುಪಾಲರಿಗೆ ಗೌರವಾಭಿನಂದನೆ

“ಸಾಧನೆ ಮಾಡಬೇಕೆಂದರೆ ಸಾಮರ್ಥ್ಯ ಮುಖ್ಯ. ಎನ್.ಸಿ.ಸಿ ಕೆಡೇಟ್ ಗಳು ನಿಜಕ್ಕೂ ಭಾಗ್ಯಶಾಲಿಗಳು. ನಿಮ್ಮ ಸಾಧನೆ ನಮ್ಮ ಕಾಲೇಜಿಗೆ ಗೌರವವನ್ನು ತಂದುಕೊಟ್ಟಿದೆ” ಎಂದು ಎಸ್.ಡಿ.ಎಂ ನಿವೃತ್ತ ಪ್ರಾಂಶುಪಾಲರಾದ ಡಾ ಎ. ಜಯಕುಮಾರ್ ಶೆಟ್ಟಿ ಹೇಳಿದರು.         ಕಾಲೇಜಿನ 2/18 ಕರ್ನಾಟಕ ಬೆಟಾಲಿಯನ್ ಆರ್ಮಿ ವಿಂಗ್ ಹಾಗು 5 ಕಾರ್ ನೇವಲ್ ಸಬ್ ಯುನಿಟ್ ನೇವಿ ವಿಂಗ್ ಕೆಡೇಟ್ ಗಳು ಶುಕ್ರವಾರ ಪೂರ್ವಾಹ್ನ ನಿವೃತ್ತ ಜೀವನಕ್ಕೆ

ದೂರುಗಳಿಗೆ ಸಿ-ವಿಜಲ್ ಉಪಯುಕ್ತ

ಸಾರ್ವಜನಿಕರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತ ದೂರುಗಳನ್ನು ದಾಖಲಿಸಲು ಕೇಂದ್ರ ಚುನಾವಣಾ ಆಯೋಗ (ಇಸಿಐ) ಅಭಿವೃದ್ಧಿ ಪಡಿಸಿದ ಸಿ-ವಿಜಲ್ ಆಪ್ ಅತ್ಯಂತ ಉಪಯುಕ್ತ ಎಂದು ಜಿಲ್ಲಾ ಐಟಿ ನೋಡಲ್ ಅಧಿಕಾರಿ ಡಾ. ಬಸವರಾಜ್ ತಲ್ವಾರ್ ಹೇಳಿದರು.ಅವರು ಏ.7ರ ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಿ-ವಿಜಲ್ ಆಪ್ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಗಾರದಲ್ಲಿ ಮಾತನಾಡಿದರು.ಚುನಾವಣಾ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ(ಎಂಸಿಸಿ)ಯ ಉಲ್ಲಂಘನೆಯ

ಅಂಗಾರ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿ

ಸತತ ಆರು ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ ನಿಷ್ಕಳಂಕ ರಾಜಕಾರಣಿ ಮಾದರಿ ವ್ಯಕ್ತಿತ್ವ ಹೊಂದಿರುವ ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಸುಳ್ಯ ಮಂಡಲ ಬಿಜೆಪಿ ಸಮಿತಿಯ ಸದಸ್ಯ ನೆಲ್ಯಾಡಿಯ ಮಹಾಬಲ ಪಡುಬೆಟ್ಟು ಪಕ್ಷದ ಹಾಗೂ ಬಿಜೆಪಿ ಮುಖಂಡರಿಗೆ ಮನವಿ ಮಾಡಿದ್ದಾರೆ. ಅವರು ಕಡಬದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾವು ಮಾಡುವ ಮನವಿ ತಪ್ಪ

ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ಕಾರ್ಯಾಗಾರ

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಚುನಾವಣಾ ನಿರ್ವಾಹಣಾ ಸಮಿತಿ ಕಾರ್ಯಾಗಾರವು ನಗರದ ಸುಧೀಂದ್ರ ಸಭಾ ಭವನದ ಹಾಲ್‍ನಲ್ಲಿ ನಡೆಯಿತು.ಚುನಾವಣಾ ನಿರ್ವಹಣಾ ಸಮಿತಿಯ ಕಾರ್ಯಾಗಾರಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಚಾಲನೆಯನ್ನು ನೀಡಿದರು. ಬಳಿಕ ಮಾತನಾಡಿ ಅವರು, ಜನಸಾಮಾನ್ಯರ ಮಧ್ಯ ಬಿಜೆಪಿ ಪಕ್ಷ ಬಹಳ ಪ್ರಬಲವಾಗಿ ಬೆಳೆದು ಮುಂದಿನ ಅಧಿಕಾರದ ಸೂತ್ರವನ್ನು ಹಿಡಿಯುವ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ. ಮುಂದಿನ ಚುನಾವಣೆಯಲ್ಲಿ ನಿಶ್ಚಲ

ಮೀಸಲಾತಿ ಪಟ್ಟಿಯಲ್ಲಿ ಅನ್ಯಾಯ : ಮೊಗೇರ ಸಂಘದಿಂದ ಪ್ರತಿಭಟನೆಯ ಎಚ್ಚರಿಕೆ

ಕರ್ನಾಟಕ ರಾಜ್ಯ ಸರಕಾರವು ಇತ್ತೀಚೆಗೆ ಹೊರಡಿಸಿರುವ ಪರಿಶಿಷ್ಟ ಜಾತಿಗಳ ಮೀಸಲಾತಿ ಪಟ್ಟಯಲ್ಲಿ ಕರ್ನಾಟಕ ರಾಜ್ಯದ 8 ಜಿಲ್ಲೆಗಳಲ್ಲಿ ವಾಸಿಸುವ ಮೊಗೇರ ಜಾತಿ ಸೇರಿದಂತೆ 89 ಉಪಜಾತಿಗಳಿಗೆ ಕೇವಲ 1 ಶೇಕಡಾ ಮೀಸಲಾತಿಯನ್ನು ಪ್ರಕಟಿಸಿ ವಂಚನೆ ಮಾಡಿರುವ ಸರಕಾರದ ಧೋರಣೆಯನ್ನು ಖಂಡಿಸಿ, ಮೊಗೇರ, ಸಮಾಜವು ರಾಜ್ಯದಾದ್ಯಂತ ತೀವ್ರ ಹೋರಾಟವನ್ನು ನಡೆಸಲಿದೆ ಎಂದು ಕರ್ನಾಟಕ ರಾಜ್ಯ ಮೊಗೇರ ಸಂಘದ ಸ್ಥಾಪಕಾಧ್ಯಕ್ಷರು ಹಾಗೂ ನಿಕಟ ಪೂರ್ವ ಅಧ್ಯಕ್ಷರಾದ ಸುಂದರ ಮೇರ ತಿಳಿಸಿದ್ದಾರೆ.

ಹೊಟೇಲ್ ಹಿರಾ ಇಂಟರ್ ನ್ಯಾಷನಲ್ ಮಂಗಳೂರಿನ ಪಂಪ್‍ವೆಲ್ ಬಳಿ ಹೊಟೇಲ್ ಶುಭಾರಂಭ

ಮಂಜೇಶ್ವರ: ದೇಶಿ, ವಿದೇಶಿ ಗ್ರಾಹಕರ ಅಪೇಕ್ಷೆಯನ್ನು ಪೂರೈಸುವ ವಿಭಿನ್ನತೆಯೊಂದಿಗೆ, ಅಂತರಾಷ್ಟ್ರೀಯ ಗುಣಮಟ್ಟದ ಸೌಲಭ್ಯವುಳ್ಳ ಹೊಟೇಲ್ ಹಿರಾ ಇಂಟರ್ ನ್ಯಾಷನಲ್, ಇದೀಗ ಮಂಗಳೂರಿನಲ್ಲಿ ಶುಭಾರಂಭಗೊಂಡಿದೆ. ಮಂಗಳೂರಿನ ಪಂಪ್ವೆಲ್ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ತಲೆ ಎತ್ತಿ ನಿಂತಿರುವ ಮಂಜೇಶ್ವರ ಉದ್ಯಾವರ ನಿವಾಸಿ ಆಲಿ ಕುಟ್ಟಿ ಹಾಜಿಯವರ ಮಾಲಕತ್ವದಲ್ಲಿರುವ ನೂತನ ಕಟ್ಟಡದಲ್ಲಿ ಶುಭಾರಂಭಗೊಂಡಿತು. ಅಂತರಾಷ್ಟ್ರೀಯ ಗುಣಮಟ್ಟದ, ಕೇವಲ ಫೈವ್ ಸ್ಟಾರ್

ಹರೀಶ್ ಪೂಂಜ ನವ ಬೆಳ್ತಂಗಡಿಯ ಹರಿಕಾರ ಆಲ್ಬಾಂ ಸಾಂಗ್ ಬಿಡುಗಡೆ

ಶಾಸಕ ಹರೀಶ್ ಪೂಂಜ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಪ್ರಚುರಪಡಿಸುವ ” ಹರೀಶ್ ಪೂಂಜ ನವ ಬೆಳ್ತಂಗಡಿಯ ಹರಿಕಾರ” ಆಲ್ಬಂ ಸಾಂಗ್ ನ್ನು ಶಾಸಕ ಹರೀಶ್ ಪೂಂಜ ಬಿಡುಗಡೆಗೊಳಿಸಿದರು. ಎಪಿಕೆ ಕ್ರಿಯೆಶನ್ಸ್ ಬ್ಯಾನರ್ ಅಡಿಯಲ್ಲಿ ಅಜಿತ್ ಪೂಜಾರಿ ಕನ್ಯಾಡಿ ರಾಗಸಂಯೋಜನೆ ಮಾಡಿ ಈ ಹಾಡನ್ನು ಹಾಡಿದ್ದಾರೆ. ನಿಧೀಶ್ ಶೆಟ್ಟಿ ಕನ್ಯಾಡಿ, ನವೀನ್ ಸುವರ್ಣ ಕನ್ಯಾಡಿ, ಅವಿನಾಶ ಶೆಟ್ಟಿ ಕನ್ಯಾಡಿ,ಸಹನ್ ಉಜಿರೆ, ರಾಘವೇಂದ್ರ ಗೌಡ ಕೊಂಕ್ರೋಟ್ಟು, ಅಶೋಕ್ ಬಂಗೇರ

ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಕುತ್ತಾರಿನಿಂದ ದೇರಳಕಟ್ಟೆವರೆಗೆ ಪೊಲೀಸ್ ಪಥಸಂಚಲನ

ಉಳ್ಳಾಲ: ಕರ್ನಾಟಕ ವಿಧಾನಸಭಾ ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದಿಂದ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆವರೆಗೆ ಸಿಆರ್ ಪಿಎಫ್ , ಉಳ್ಳಾಲ ಪೊಲೀಸ್ ಠಾಣೆ, ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಹಾಗೂ ಕೆಎಸ್ ಆರ್ ಪಿ ಅಸೈಗೋಳಿ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್ , ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್, ಮಂಗಳೂರು ದಕ್ಷಿಣ

ಕಲಶ ಕಟ್ಟುತ್ತಿದ್ದಾಗ ರಥದಿಂದ ಜಾರಿ ಬಿದ್ದು ವ್ಯಕ್ತಿ ಸಾವು

ವಿಜಯಪುರದ ಗೊಲ್ಲಾಳೇಶ್ವರ ರಥೋತ್ಸವದಲ್ಲಿ ರಥದ ಕಲಶ ಕಟ್ಟುತ್ತಿದ್ದಾಗ ಜಾರಿ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಗೊಲ್ಲಾಳೇಶ್ವರ ರಥೋತ್ಸವದ ಹಿನ್ನೆಲೆಯಲ್ಲಿ ಸಾಹೇಬಪಟೇಲ್ ಖಾಜಾಪಟೇಲ್ ಎಂಬವರು ರಥದ ತುತ್ತ ತುದಿಯಲ್ಲಿ ಕಲಶ ಕಟ್ಟುತ್ತಿದ್ದರು. ಈ ವೇಳೆ ಸಾಹೇಬಪಟೇಲ್ ಅವರು ಕಾಲು ಜಾರಿ ರಥದಿಂದ ಬಿದ್ದಿದ್ದಾರೆ ಎನ್ನಲಾಗಿದೆ. ಕಲಶ ಕಟ್ಟುವಾಗ ಕೈಯಲ್ಲಿದ್ದ ಹಗ್ಗ ಜಾರಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಕೂಡಲೇ