Home Posts tagged V4News (Page 561)

ಪತ್ರಿಕೋದ್ಯಮಕ್ಕೆ ವೃತ್ತಿ ಒಲವು ಮುಖ್ಯ

ಉಜಿರೆ ಎಸ್.ಡಿ. ಎಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಥಮ ವರ್ಷದ ಎಂ.ಸಿ.ಜೆ ವಿದ್ಯಾರ್ಥಿಗಳಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಖ್ಯಾತ ಕ್ರೈಂ ರಿಪೋರ್ಟರ್ ಸುನಿಲ್ ಧರ್ಮಸ್ಥಳ ವೃತ್ತಿ ಕುರಿತು ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಪೋಲಿಸ್ ಸ್ತರಗಳು ಮತ್ತು ಅದರೊಳಗಿನ ವಿಭಾಗಗಳ ಕುರಿತು ಸವಿಸ್ತಾರವಾದ

ಎಸ್ ಡಿ ಎಂ ಕಾಲೇಜಿನ ಎನ್ ಸಿ ಸಿ ನೌಕಾ ವಿಭಾಗದ ಆರು ಕೆಡೆಟ್ ಗಳಿಗೆ ಬಂಗಾರದ ಪದಕ 

ದೆಹಲಿಯಲ್ಲಿ ನಡೆದ 2023 ರ ಗಣರಾಜ್ಯೋತ್ಸವ ಪರೇಡ್ ನಲ್ಲಿ  ಉಜಿರೆ ಎಸ್ ಡಿ ಎಮ್ ಕಾಲೇಜಿನ ನೌಕಾ ವಿಭಾಗದ 6 ಕೆಡೆಟ್ ಗಳು ಶಿಪ್ ಮೊಡೆಲಿಂಗ್ ವಿಭಾಗದಲ್ಲಿ ಬಂಗಾರದ ಪದಕವನ್ನು ಗಳಿಸಿ ಸಂಸ್ಥೆಗೆ ಗೌರವವನ್ನು ತಂದಿದ್ದಾರೆ. ಪಿಓ ಕೆಡೆಟ್  ಶ್ರೀರಾಮ ಮರಾಠೆ  ಮತ್ತು ಪಿಓ ಕೆಡೆಟ್ ಅನನ್ಯಾ ಕೆ.ಪಿ ಇವರು ಪವರ್ ಮಾಡೆಲ್ ವಿಭಾಗದಲ್ಲಿ ಬಂಗಾರದ ಪದಕವನ್ನು ಸಂಪಾದಿಸಿದ್ದಾರೆ. ಇಡೀ ದೇಶದ 17 ಡೈರೆಕ್ಟರೇಟ್ ನವರು ಸಿದ್ಧಪಡಿಸಿ ಪರೀಕ್ಷೆಗೊಳಪಡಿಸಿದ ಈ ಸ್ಪರ್ಧೆಗಳಲ್ಲಿ ಇವರು

ಬಹುಭಾಷಾ ನಟ ಡಾ. ಸುಮನ್ ತಲ್ವಾರ್‌ಗೆ ‘ಸುಮನ ತಮ್ಮನ’ ಅಭಿನಂದನಾ ಕಾರ್ಯಕ್ರಮ

ಮಂಗಳೂರು: ಬಹುಭಾಷಾ ನಟ ಡಾ. ಸುಮನ್ ತಲ್ವಾರ್‌ಗೆ ಮಂಗಳೂರಿನ ಅಭಿನಂದನಾ ಸಮಿತಿ ವತಿಯಿಂದ ನಗರದ ಪುರಭವನದಲ್ಲಿ ಗುರುವಾರ ‘ಸುಮನ ತಮ್ಮನ’ ಅಭಿನಂದನಾ ಕಾರ್ಯಕ್ರಮ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಕಲಾರಾಧನೆಯ ಮೂಲಕ ದಕ್ಷಿಣ ಭಾರತದ 1 ಭಾಷೆಗಳಲ್ಲಿ 700ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿದ ಮಂಗಳೂರಿನ ನಟ ಸುಮನ್ ತಲ್ವಾರ್ ತುಳುನಾಡಿನ ಕಲಾ ರಾಯಭಾರಿಯಾಗಿದ್ದಾರೆ. ತುಳುನಾಡಿನ ಹಲವು ಶ್ರೇಷ್ಠ ನಟ-ನಟಿಯರು ವಿವಿಧ ಭಾಷೆಗಳ ಸಿನೆಮಾದಲ್ಲಿ ಅಭಿನಯಿಸಿ

ಮಂಗಳೂರು ವಿವಿ: ಮೌಲ್ಯಮಾಪನ ಕುಲಸಚಿವರಾಗಿ ಡಾ. ರಾಜು ಕೃಷ್ಣ ಚಲ್ಲಣ್ಣವರ್ ಅಧಿಕಾರ ಸ್ವೀಕಾರ

ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ (ಮೌಲ್ಯಮಾಪನ) ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ರಾಜು ಕೃಷ್ಣ ಚಲ್ಲಣ್ಣವರ್ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಸರ್ಕಾರದ ಅಧಿಸೂಚನೆಯಂತೆ ಕುಲಸಚಿವ (ಮೌಲ್ಯಮಾಪನ) ರಾಗಿದ್ದ ಪ್ರೊ. ಪಿ ಎಲ್ ಧರ್ಮ ಅವರು ನೂತನ ಕುಲಸಚಿವರಿಗೆ ಅಧಿಕಾರ ಹಸ್ತಾಂತರಿಸಿದರು. ಪ್ರೊ. ಪಿ ಎಲ್ ಧರ್ಮ ಅವರು ಮಂಗಳೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಮುಂದುವರಿಯಲಿದ್ದಾರೆ. ಅನ್ವಯಿಕ

ಯಕ್ಷರಂಗದ ಭೀಷ್ಮ’ ಬಲಿಪ ಭಾಗವತರು ಇನ್ನಿಲ್ಲ

ಮೂಡುಬಿದಿರೆ: ಯಕ್ಷರಂಗದ ಭಾಗವತಿಕೆಯ ಭೀಷ್ಮ ಎಂದೇ ಖ್ಯಾತರಾಗಿರುವ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರು(86) ಗುರುವಾರ ಸಾಯಂಕಾಲ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಮಾರೂರಿನಲ್ಲಿರುವ ನೂಯಿ ಸ್ವಗೃಹದಲ್ಲಿ ನಿಧನರಾದರು. ಕಳೆದ ಕೆಲವು ದಶಕಗಳಿಂದ ಯಕ್ಷಗಾನ ಭಾಗವತಿಕೆಯಲ್ಲಿ ತಮ್ಮ ಕಂಚಿನ ಕಂಠದ ಮೂಲಕ ಸುಪ್ರಸಿದ್ಧರಾಗಿದ್ದ ಅವರು ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದರು.ವರ್ಷ ಪ್ರಾಯದ ಭಾಗವತರು ಅಲ್ಪಕಾಲದ ಅಸೌಖ್ಯದಿಂದ ಇಂದು ಸಂಜೆ ನಿಧನರಾಗಿದ್ದಾರೆ.ನಾಲ್ವರು

ಶಿವಪಾಡಿ ಶ್ರೀ ಉಮಾಮಹೇಶ್ವರ ಸನ್ನಿಧಿಯಲ್ಲಿ ಫೆಬ್ರವರಿ 18 ರಂದು : “ಅಬ್ಬಗ ದಾರಗ” ತುಳು ಪ್ರಸಂಗ ಮತ್ತು “ಬೇಡರ ಕಣ್ಣಪ್ಪ” ಕನ್ನಡ ಪ್ರಸಂಗ ಯಕ್ಷಗಾನ ಪ್ರದರ್ಶನ

ಶಿವಪಾಡಿ ಶ್ರೀ ಉಮಾಮಹೇಶ್ವರ ಸನ್ನಿಧಿಯಲ್ಲಿ ಫೆಬ್ರವರಿ 18 ರಂದು ಆಚರಿಸಲ್ಪಡುವ ಮಹಾಶಿವರಾತ್ರಿಯ ಅಂಗವಾಗಿ ‘ಮಹಾಶಿವರಾತ್ರಿ ಮಹೋತ್ಸವ’ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 06:30 ರಿಂದ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ ಹಾಗೂ ಸರ್ವ ಸೇವೆಗಳು ನೆರವೇರಲಿವೆ. ರಾತ್ರಿ 10:30 ರಿಂದ ಸಹಸ್ರ ಬಿಲ್ವಾರ್ಚನೆ, ಮಹಾರಂಗಾ ಪೂಜಾದಿಗಳು ಜರುಗಲಿದ್ದು, ರಾತ್ರಿ 09:30 ರಿಂದ ಪ್ರಾತಃಕಾಲದವರೆಗೆ ದೇವಸ್ಥಾನದ ವಠಾರದಲ್ಲಿ ಶ್ರೀ ಮಯೂರ

ಅಶ್ವತ್ಥನಾರಾಯಣ ಹೇಳಿಕೆ ವಿರುದ್ಧ ಕ್ರಮಕ್ಕೆ ಮಾಜಿ ಸಚಿವ ಅಭಯಚಂದ್ರ ಜೈನ್ ಒತ್ತಾಯ

ಮೂಡುಬಿದಿರೆ: ಉನ್ನತ ಶಿಕ್ಷಣ ಸಚಿವ ಡಾ.ಸಿ ಅಶ್ವತ್ಥನಾರಾಯಣ ಅವರು ಮಂಡ್ಯದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಟಿಪ್ಪುಸುಲ್ತಾನನ್ನು ಹೊಡೆದು ಹಾಕಿದಂತೆ ಹೊಡೆದು ಹಾಕಬೇಕು ಎಂದಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮತ್ತು ರಾಷ್ಟ್ರಪತಿಯವರು ಮುಖ್ಯಮಂತ್ರಿಗೆ ಸೂಚನೆ ನೀಡಬೇಕು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆಗ್ರಹಿಸಿದ್ದಾರೆ. ಗುರುವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ

ಫೆ.18 : ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ 15 ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಮಹಾ ಶಿವರಾತ್ರಿ ಆಚರಣೆ.

ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಪ್ರಾಣ ಪ್ರತಿಷ್ಠೆ ಮಾಡಿರುವ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ 2023ರ ಫೆಬ್ರವರಿ18 ರಂದು 15 ನೇ ಪ್ರತಿಷ್ಠಾ ವರ್ಧಂತ್ಯುತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಅಂದು ಬೆಳಗ್ಗೆ 6 ಗಂಟೆಗೆ ಅಷ್ಟ ದ್ರವ್ಯ ಮಹಾಗಣಪತಿ ಹೋಮ, ರುದ್ರ ಮಂತ್ರ ಪಠನ,ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮಾರ್ಚನೆ, ಮಹಾ ಮೃತ್ಯುಂಜಯ ಹೋಮ,ಸತ್ಸಂಗ, ಮಹಾ ಸುದರ್ಶನ ಹೋಮ, ಕಳಶ ಪೂಜೆ,ಪಂಚಗವ್ಯ,ನವಕ, ಮಹಾ ಅಭಿಷೇಕ, ಧಾರಾ, ಆರತಿ

ಸೋಮೇಶ್ವರ : ಫೆ.18ರಂದು ಮಹಾಶಿವರಾತ್ರಿ

ಉಳ್ಳಾಲ: ಮಹಾಶಿವರಾತ್ರಿಯ ಸೂರ್ಯಾಸ್ತದ ನಂತರ ಜಾಗರಣದ ಸಂಧಿಕಾಲದಲ್ಲಿ ಸೋಮೇಶ್ವರ ದೇವಸ್ಥಾನದ ಬಳಿ ಇರುವ ರುದ್ರಪಾದೆಯಲ್ಲಿ ಲೋಕಕಲ್ಯಾಣಕ್ಕಾಗಿ ಅಗ್ನಿಹೋತ್ರ ಮತ್ತು ಭಸ್ಮ ತಯಾರಿ ಯಜ್ಞವು ಕರಾವಳಿ ಕಲ್ಯಾಣ ಪರಿಷತ್, ಕರ್ನಾಟಕ ಸೋಮೇಶ್ವರ ಶಕ್ತಿ ಕೇಂದ್ರದ ನೇತೃತ್ವದಲ್ಲಿ ಜರಗಲಿದೆ ಫೆಬ್ರವರಿ 18ರಂದು ನಡೆಯಲಿದೆ ಎಂದು ಪರಿಷತ್ ನ ಪದ್ಮನಾಭ ವರ್ಕಾಡಿ ತಿಳಿಸಿದ್ದಾರೆ. ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್‍ಕ್ಲಬ್ ನಲ್ಲಿ ನಡೆಸಿದ

ದ.ಕ. ಜಿಲ್ಲೆಯಲ್ಲಿ ಒಕ್ಕಲಿಗ ಗೌಡ ಸಮುದಾಯಕ್ಕೆ 2 ಸ್ಥಾನ ನೀಡಬೇಕು : ದ.ಕ.ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಮನವಿ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಕ್ಕಲಿಗ ಗೌಡ ಸಮುದಾಯಕ್ಕೆ ಎರಡು ಸ್ಥಾನವನ್ನು ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘ ಮನವಿಯನ್ನು ಮಾಡಿದೆ.ಈ ಬಗ್ಗೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಲೋಕಯ್ಯ ಗೌಡ ಅವರು, ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಪುತ್ತೂರು, ಬೆಳ್ತಂಗಡಿ ಕ್ಷೇತ್ರಗಳಲ್ಲಿ ಪ್ರಾತಿನಿದ್ಯ ಕೊಡಬೇಕು. ಎರಡು