Home Posts tagged V4News (Page 616)

ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದಕ್ಕಾಗಿ ಡಿಕೆಶಿಯ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ : ಅಮಳ ರಾಮಚಂದ್ರ

ಪುತ್ತೂರು: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಇಡಿ, ಐಟಿ ಮತ್ತು ಸಿಬಿಐಗಳನ್ನು ತನ್ನ ಸ್ವ ರಕ್ಷಣೆಯ ಸೊತ್ತುಗಳಾಗಿ ಬಳಸಿಕೊಳ್ಳುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದಕ್ಕಾಗಿ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಆರೋಪಿಸಿದ್ದಾರೆ. ಅವರು

ಮಂಗಳೂರಿನ ಪೂಮಾ ಮಳಿಗೆ ಶುಭಾರಂಭ

ಮಂಗಳೂರಿನ ಬಂಟ್ಸ್‍ಹಾಸ್ಟೆಲ್‍ನಲ್ಲಿರುವ ಮೆರೈನ್ ಪ್ಯಾರಡೈಸ್ ಪ್ಲಾಜಾದಲ್ಲಿ ಪೂಮಾ ಮಳಿಗೆ ಶುಭಾರಂಭಗೊಂಡಿತು. ಒಂದೇ ಸೂರಿನಡಿಯಲ್ಲಿ ಪೂಮಾ ಕಂಪೆನಿಯ ವಸ್ತ್ರಗಳು ಮತ್ತು ಶೂಷ್, ಆಕ್ಸೆಸಸರೀಸ್‍ಗಳು ಲಭ್ಯವಿದೆ. ನೂತನ ಮಳಿಗೆಯನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹ್ಯಾಂಗ್ಯೋ ಐಸ್‍ಕ್ರೀಮ್ ಪ್ರೈವೆಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಪ್ರದೀಪ್

ಹೋಮದ ಹೊಗೆಯ ಲಾಭ ಗಳಿಸಿ ಮನೆ ಕಳವು ನಡೆಸಿದ ಕಳ್ಳ ಕೋಟೆಕಾರಿನಲ್ಲಿ ಗೃಹಪ್ರವೇಶದ ದಿನವೇ ನಡೆದ ಘಟನೆ

ಉಳ್ಳಾಲ: ಗೃಹಪ್ರವೇಶದ ಮನೆಯಲ್ಲಿ ಪೂಜಾ ಸಂದರ್ಭದಲ್ಲೇ ಎಲ್ಲರ ಮುಂದೆ ಕಳವು ನಡೆಸಿದ ಕಳ್ಳನೋರ್ವ, ಅದೇ ರಾತ್ರಿ ನೆರೆಮನೆಯಿಂದಲೂ ಲಕ್ಷಾಂತರ ಮೌಲ್ಯದ ನಗನಗದು ದೋಚಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರು ಬಳಿ ನಡೆದಿದೆ. ಡಿ.10 ರಂದು ರಾತ್ರಿ ಸ್ಮಿತಾ-ದಾಮೋದರ್ ದಂಪತಿ ಕೋಟೆಕಾರು ಪಟ್ಟಣ ಪಂ. ವ್ಯಾಪ್ತಿಯ ಅಡ್ಕ ಬೈಲು ಎಂಬಲ್ಲಿ ತಾವು ನಿರ್ಮಸಿದ ನೂತನ ಮನೆಯಲ್ಲಿ ವಾಸ್ತು ಹೋಮ ನೆರವೇರಿಸಿದ್ದರು.ವಾಸ್ತು ಹೋಮ ನಡೆಯುತ್ತಿರುವಾಗಲೇ ಎಲ್ಲರ ಸಮ್ಮುಖದಲ್ಲೇ

ಎಸ್ಸಿ,ಎಸ್ಟಿ ಕುಟುಂಬಗಳ ಕೃಷಿ ನೀರಿಗೆ ಸಮಸ್ಯೆಯಾಗಬಾರದು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ

ಬೆಳ್ತಂಗಡಿ ತಾಲೂಕಿನ ಎಲ್ಲಾ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಕುಟುಂಬಗಳು ಕೃಷಿ ನೀರಿಗೆ ಸಮಸ್ಯೆಯಾಗ ಬಾರದು ಎಂದು ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ಹೇಳಿದರು. ಅವರು ಬೆಳ್ತಂಗಡಿ ತಾಲೂಕಿನಾದ್ಯಂತ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಪಂಗಡ 25 ಮತ್ತು ಪರಿಶಿಷ್ಟ ಜಾತಿ 25 ಕುಟುಂಬಗಳಿಗೆ ಸುಮಾರು ಒಂದು ಕೋಟಿ 25 ಲಕ್ಷ ರೂಪಾಯಿ ಮೊತ್ತವನ್ನು ಕಾವೇರಿ ಜಲ ಅಭಿವೃದ್ದಿ ನಿಗಮ ಯೋಜನೆಯಡಿ ಕೊಳವೆ ಬಾವಿಗೆ ಪಂಪ್ ಅಳವಡಿಕೆ ಮತ್ತು ಪೈಪ್ ಲೈನಿಗೆ ಚಾಲನೆ

ಶ್ರೀರಾಮಸೇನಾ ಕಾರ್ಯಕರ್ತರ ತಂಟೆಗೆ ಬಂದಾಗ ತಕ್ಕಶಾಸ್ತಿ : ಕಾರ್ಕಳದಲ್ಲಿ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ ಎಚ್ಚರಿಕೆ

ಕಾರ್ಕಳ: ಶೀರಾಮಸೇನಾ ಕಾರ್ಯಕರ್ತರ ವಿರುದ್ಧ ವಿನಾಕಾರಣ ಉಪಟಳ ನೀಡಿ ಕಾನೂನು ಕುಣಿಕೆಗೆ ಸಿಲುಕಿಸುವ ಪ್ರಯತ್ನಗಳು ಮುಂದುವರಿಸಿದ್ದು ಆದಲ್ಲಿ ತಕ್ಕಶಾಸ್ತಿಯನ್ನು ಎದುರಿಸಬೇಕಾದಿತ್ತು. ಇಡೀ ರಾಜ್ಯದ ಹಿಂದು ಪರ ಸಂಘಟನಾ ಕಾರ್ಯಕರ್ತರು ಕಾರ್ಕಳಕ್ಕೆ ಮುತ್ತಿಗೆ ಹಾಕುವಂತ ಪ್ರಮೇದ ಎದುರು ಹಾಕದಿರಿ ಎಂದು ಬಿಜೆಪಿ ರಾಜ್ಯ ಘಟಕ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರಕ್ಕೆ ಶ್ರೀ ರಾಮಸೇನೆಯ ಕಾರ್ಯಧ್ಯಕ್ಷ ಗಂಗಾಧರ್ ಕುಲಕರ್ಣಿ ಎಚ್ಚರಿಸಿದ್ದಾರೆ.

ಡಿ.11ರ ಮನೆ ಕಳ್ಳತನ ಪ್ರಕರಣದ ಆರೋಪಿಯ ಬಂಧನ

ಉಡುಪಿ ತಾಲೂಕು ಶಿವಳ್ಳಿಯಲ್ಲಿ ಡಿ.11ರಂದು ನಡೆದಿದ್ದ ಮನೆ ಕಳ್ಳತನ ಪ್ರಕರಣದ ಆರೋಪಿಯನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಆಶ್ರಯ ಬಡಾವಣೆ ನಿವಾಸಿ ಸಾಧಿಕ್ ಉಲ್ಲಾ (35) ಬಂಧಿತ ಆರೋಪಿ. ಉಡುಪಿ‌ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಈತನನ್ನು‌ ಬಂಧಿಸಿದ್ದು ಶಿಕಾರಿಪುರದ ತನ್ನ ಮನೆಯಲ್ಲಿಟ್ಟಿದ್ದ ಕಳವು‌ಮಾಡಿಕೊಂಡು ಹೋದ 4 ಲಕ್ಷ 35 ಸಾವಿರ ಮೌಲ್ಯದ ವಜ್ರದ ಉಂಗುರ, ಚಿನ್ನಾಭರಣ, ಬೆಳ್ಳಿ ಗಟ್ಟಿ, ಬೆಳ್ಳಿ ಆಭರಣ

ವಿಟ್ಲ : ಹೊಂಡದಲ್ಲಿ ಮೃತದೇಹ ಹಾಗೂ ಮೊಬೈಲ್ ಪತ್ತೆ

ವಿಟ್ಲ: ಪುಣಚ ಗ್ರಾಮದ ನೆಲ್ಲಿಗುಡ್ಡೆ ಜರಿಮೂಲೆ ಸಮೀಪ ಹೊಂಡದಲ್ಲಿ ಮೃತದೇಹ ಹಾಗೂ ಮೊಬೈಲ್ ಪತ್ತೆಯಾದ ಘಟನೆ ನಡೆದಿದೆ. ಸೊಪ್ಪು ಸೌದೆ ತರಲು ಗುಡ್ಡಕ್ಕೆ ಹೋದ ಸ್ಥಳೀಯ ನಿವಾಸಿಗಳಿಗೆ ಮೊಬೈಲ್ ಪತ್ತೆಯಾಗಿದೆ. ಇದನ್ನು ಗಮನಿಸಿ ಅಕ್ಕಪಕ್ಕದ ನೋಡಿದಾಗ ಮೃತದೇಹ ಪತ್ತೆಯಾಗಿದ್ದು, ಭಯಗೊಂಡು ಓಡಿಹೋಗಿದ್ದಾರೆನ್ನಲಾಗಿದೆ. ಪಕ್ಕದಲ್ಲಿರುವ ಮರದಲ್ಲಿ ಬಳ್ಳಿಯೊಂದು ನೇತಾಡುತ್ತಿದ್ದು, ಮೃತದೇಹ ನೆಲದಲ್ಲಿ ಬಿದ್ದುಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ

ದೇರಳಕಟ್ಟೆ ಫ್ಲಾಟ್‍ನಲ್ಲಿ ತಪ್ಪಿದ ಭಾರೀ ಅಗ್ನಿ ಅವಘಢ

ಉಳ್ಳಾಲ: ದೇರಳಕಟ್ಟೆ ಎರಡು ಆಸ್ಪತ್ರೆಗಳ ನಡುವೆ ಇರುವ ಫ್ಲಾಟ್ ಒಂದರಲ್ಲಿ ಅಗ್ನಿ ಅವಘಢ ಸಂಭವಿಸಿದ್ದು, ಫ್ಲಾಟ್ ನ ಮೆನೇಜರ್ ಸಮಯಪ್ರಜ್ಞೆಯಿಂದ 100ಕ್ಕೂ ಅಧಿಕ ಮಂದಿಯಿರುವ 13 ಮಹಡಿಗಳ ಫ್ಲಾಟ್‍ನಲ್ಲಿ ಅಗ್ನಿ ದುರಂತ ತಪ್ಪಿದೆ. ದೇರಳಕಟ್ಟೆ ಕ್ಷೇಮ ಆಸ್ಪತ್ರೆ ಬಳಿಯಿರುವ ಫ್ಲಾಮ ನೆಸ್ಟ್ ಫ್ಲಾಟ್‍ನಲ್ಲಿ ಅಗ್ನಿ ಅವಘಢ ಸಂಭವಿಸಿರುವುದು.ಫ್ಲಾಟ್‍ನ 202ರ ರೂಮಿನಲ್ಲಿ ದಂತ ವೈದ್ಯಕೀಯ ಕಲಿಯುವ ಇಬ್ಬರು ವಿದ್ಯಾರ್ಥಿನಿಯರಿದ್ದು, ಡಿ.20 ರ

ಅಪ್ರಾಪ್ತ ಬಾಲಕಿಯ ಜೊತೆ ಅಸಭ್ಯ ವರ್ತನೆ ಪ್ರಕರಣ : ಮೂಲ್ಕಿ- ಕೆರೆಕಾಡು ಗ್ರಾಮಸ್ಥರಿಂದ ಪೊಲೀಸ್ ಠಾಣೆಗೆ ಮುತ್ತಿಗೆ

ಮೂಲ್ಕಿ- ಕಳೆದ ಕೆಳ ದಿನಗಳ ಹಿಂದೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆರೆಕಾಡು ಎಂಬಲ್ಲಿ ಆರೋಪಿ ಹಳೆಯಂಗಡಿ ಇಂದಿರಾ ನಗರದ ನಿವಾಸಿ ದಾವುದ್ ಹಕೀಮ್ ಎಂಬಾತ ಅಪ್ರಾಪ್ತ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಲ್ಕಿ ಪೆÇಲೀಸರು ಪ್ರಕರಣದ ತನಿಖೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕೆರೆಕಾಡು ಗ್ರಾಮಸ್ಥರು ಮುಲ್ಕಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ಮುಲ್ಕಿ

ಗೂಂಡಾ ವರ್ತನೆಗೆ ಆಮ್ ಆದ್ಮಿ ಖಂಡನೆ

ಮಂಗಳೂರು : ಹಿಂದುತ್ವ ಸಂಘಟನೆಗಳಿಂದ ನಡೆದಿರುವ ಅನೈತಿಕ ಪೊಲೀಸ್ ಗಿರಿ ಗೂಂಡಾವರ್ತನೆ ಆಗಿದ್ದು ಖಂಡನೀಯವಾಗಿದ್ದು, ಕಾನೂನು ಕೈಗೆತ್ತಿಗೊಳ್ಳಲು ಪೊಲೀಸರು ಅವಕಾಶ ನೀಡಬಾರದು ಎಂದು ಆಮ್ ಆದ್ಮಿ ಹೇಳಿದೆ. ಚುನಾವಣೆ ಹತ್ತಿರ ಆಗುತ್ತಿರುವಂತೆ ಕರಾವಳಿಯಲ್ಲಿ ಅನೈತಿಕ ಗೂಂಡಾಗಿರಿ, ಕೋಮು ವೈಷಮ್ಯದ ಘಟನೆಗಳು ನಡೆಯುತ್ತಿದೆ. ಕೋಮು ದ್ವೇಷವನ್ನು ಹರಡುವ ಮೂಲಕ ಮತಗಳಿಸುವ ಕೆಟ್ಟ ರಾಜಕೀಯ ನಡೆಯುತ್ತಿರುವುದು ಶೋಚನೀಯವಾಗಿದೆ. ರಾಜಕೀಯ ಲಾಭಗೊಸ್ಕರ ಧರ್ಮವನ್ನು ಬಳಕೆ