ಮುಲ್ಕಿ ಅ7.ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ಮಹತ್ವಾಕಾಂಕ್ಷೆಯ ಯೋಜನೆಯ ಅಂಗವಾಗಿ ಮೂಲ್ಕಿಯ ನಗರಕ್ಕೆ ಸಮೀಪವಾಗಿ ರಾಷ್ಟ್ರೀಯ ಹೆದ್ದಾರಿ ಸಮೀಪ 65 ಸೆಂಟ್ಸ್ ನಿವೇಶನದಲ್ಲಿ ಅತ್ಯಾಧುನಿಕ ಸುಂದರವಾದ ವಿವಿಧ ಸ್ವರೂಪಗಳ ಭವನಗಳ ನಿರ್ಮಾಣದ ಅಂಗವಾಗಿ ಇಂದು ಮುಲ್ಕಿ ದುರ್ಗಾಪರಮೇಶ್ವರಿ ದೇವಳದ ಅರ್ಚಕರಾದ ಗೋಪಾಲಕೃಷ್ಣ ಉಪಾಧ್ಯಾಯ ಇವರ ಮೂಲಕ ಧಾರ್ಮಿಕ ವಿಧಿ
ಮಂಗಳೂರಿನಲ್ಲಿ ರಾಜಾರೋಷವಾಗಿ ನಡೆಯುವ ಅಕ್ರಮ, ಅನ್ಯಾಯಗಳ ವಿರುದ್ಧ, ಬಿಜೆಪಿ ಸರಕಾರಗಳ ಜನವಿರೋಧಿ ನೀತಿಗಳ ವಿರುಧ್ದ ನಿರಂತರ ಮತ್ತು ನಿರ್ಭೀತವಾಗಿ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿಯವರನ್ನು ನಿನ್ನೆ ರಾತ್ರಿ ಬಜಪೆ ಠಾಣಾ ಪೊಲೀಸರು ವಿನಾಃ ಕಾರಣ ಬಂಧಿಸಿರುವುದನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಖಂಡಿಸುತ್ತದೆ. ಕರ್ನಾಟಕದ ರಾಜ್ಯದ ಬಿಜೆಪಿ ಸರಕಾರದ ದುರಾಡಳಿತದ ವಿರುಧ್ದ, ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ , ಭರತ್ ಶೆಟ್ಟರ ಅಕ್ರಮ,
ಬಿಎನ್‍ಐ ಇನ್‍ಸ್ಪಾಯರ್ ಮಂಗಳೂರು ಅಧ್ಯಕ್ಷರಾಗಿ ಜಿ.ಡಿ. ಎಡ್ವರ್ಟೈಸಿಂಗ್ ಪ್ರೈ.ಲಿ. ಇದರ ಆಡಳಿತ ನಿರ್ದೇಶಕ ರೋಶನ್ ಬಾಳಿಗಾ ಬಂಟ್ವಾಳ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುನೀತಾ ಡಿಸೋಜಾ, ಕಾರ್ಯದರ್ಶಿ ಹಾಗೂ ಖಜಾಂಜಿಯಾಗಿ ಅರವಿಂದ ಪ್ರಭು ಆಯ್ಕೆಯಾಗಿದ್ದಾರೆ.
5G ಅಥವಾ 5 ನೇ ಜನರೇಷನ್ನಿನ ಮೊಬೈಲ್ ನೆಟ್ ವರ್ಕ್ ಕೇವಲ ಇಂಟರ್ನೆಟ್ ಸ್ಪೀಡ್ ನ್ನು ಮಾತ್ರವೇ ಅಪ್ ಗ್ರೇಡ್ ಮಾಡುವುದಿಲ್ಲ ಬದಲಾಗಿ ಇದು ಮುಂದಿನ ಜನರೇಷನ್ನಿನ ಟೆಕ್ನಾಲಜಿಯನ್ನು ಡ್ರೈವ್ ಮಾಡುತ್ತದೆ. ಇದೀಗ 5G ಯಲ್ಲಿ ಕೆಲ ಸೈಬರ್ ಹ್ಯಾಕರ್’ಗಳು ಕೂಡ ಹೊಸ ರೀತಿಯ ವಂಚನೆಗೆ ಮುಂದಾಗಿದ್ದಾರೆ. ಈ ಹೊಸ ರೂಪದ ಸೈಬರ್ ಕ್ರೈಮ್ಗೆ ಬಲಿಯಾಗಬೇಡಿ ಎಂದು ತಜ್ಞರು ಎಚ್ಚರಿಸಿದ್ದಾರೆ. ನಿಮ್ಮ ಮೊಬೈಲ್‌ನಲ್ಲಿರುವ 4G ಸಿಸ್ಟಮ್’ನ್ನ 5ಉಗೆ ಅಪ್‌ಗ್ರೇಡ್ ಮಾಡಬೇಕೆಂದು ನಿಮ್ಮ
ಮುಂಬೈ: ಮಹಾರಾಷ್ಟ್ರದ ನಾಸಿಕ್‌ನಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಔರಂಗಾಬಾದ್ ರಸ್ತೆಯಲ್ಲಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಸಂಭವಿಸಿದ ದುರ್ಘಟನೆಯಲ್ಲಿ 24 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಲೀಪರ್ ಕೋಚ್ ಬಸ್‌ನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದರು. ನಂದೂರ್ ನಾಕಾ ಎಂಬಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ಕೆಲವೇ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಾಟಕಕಾರ, ಸಾಹಿತ್ಯ ಮತ್ತು ಸಮಾಜ ಸೇವಕ ದಿ ಎ. ಶಿವಾನಂದ ಕರ್ಕೇರ ಅವರ ಸವಿ ನೆನಪು ಕಾರ್ಯಕ್ರಮವನ್ನು ನಗರದ ತುಳು ಭವನದಲ್ಲಿ ಆಯೋಜಿಸಲಾಗಿತ್ತು. ಮಂಗಳೂರಿನ ಉರ್ವಸ್ಟೋರಿನ ತುಳಭವನದಲ್ಲಿ ಸಿರಿ ಚಾವಡಿಯಲ್ಲಿ ನಾಟಕಕಾರ , ಸಾಹಿತ್ಯ ಮತ್ತು ಸಮಾಜ ಸೇವಕ ದಿ ಎ. ಶಿವಾನಂದ ಕರ್ಕೇರ ಅವರ ಸವಿ ನೆನಪು ಕಾರ್ಯಕ್ರಮದ ಪ್ರಯಕ್ತ ಅವರ ಭಾವಚಿತ್ರಕ್ಕೆ ಗಣ್ಯರು ಪುಪ್ಪನಮನ ಸಲ್ಲಿಸಿದರು. ಇನ್ನು ಸಭಾ ಕಾರ್ಯಕ್ರಮವನ್ನು ಪ್ರಪುಲ್ಲ
ದಕ್ಷಿಣ ಕನ್ನಡ ಹಾಲು ಒಕ್ಕೂಟ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ 2 ರೂಪಾಯಿ 5 ಪೈಸೆ ಪ್ರೋತ್ಸಾಹಧನವನ್ನು ನೀಡುವುದಾಗಿ ಒಕ್ಕೂಟದ ಅಧ್ಯಕ್ಷರಾದ ಕೆ.ಪಿ. ಸುಚರಿತ ಶೆಟ್ಟಿ ತಿಳಿಸಿದ್ದಾರೆ. ಅವರು ಕುಲಶೇಖರದ ಹಾಲು ಒಕ್ಕೂಟದ ಆಡಳಿತ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಅಕ್ಟೋಬರ್ 11ರಂದು ನಡೆಯಲಿರುವ ವಿಶೇಷ ಸಭೆಯಲ್ಲಿ ರೈತರಿಗೆ ಪ್ರೋತ್ಸಾಹಧನವಾಗಿ ವಿಶೇಷವಾಗಿ 29.5 ಪೈಸೆಯನ್ನು ನೀಡುತ್ತಿದ್ದು ಅದಕ್ಕೆ 2 ರೂಪಾಯಿ 5 ಪೈಸೆ ಏರಿಸಿ
ಮೂಡುಬಿದಿರೆ : ಪಡುಬಿದ್ರಿ ಯುಪಿಸಿಎಲ್ ನಿಂದ ಕೇರಳಕ್ಕೆ ವಿದ್ಯುತ್ ಪ್ರಸರಣಕ್ಕಾಗಿ ಸರ್ವೇ ನಡೆಸಲಾಗುತ್ತಿದೆ ಎಂದು ಹೇಳಿಕೊಂಡು ಅನಧಿಕೃತವಾಗಿ ನಿಡ್ಡೋಡಿ ಪರಿಸರದಲ್ಲಿ ಸರ್ವೇ ಕಾರ್ಯಕ್ಕಾಗಿ ಆಗಮಿಸಿದ ಅನಧಿಕೃತ ವ್ಯಕ್ತಿಗಳನ್ನು ಮಾತೃಭೂಮಿ ಸಂರಕ್ಷಣಾ ಸಮಿತಿ ಸೇರಿದಂತೆ ಗ್ರಾಮಸ್ಥರು ಹಿಮ್ಮೆಟ್ಟಿಸಿದ ಘಟನೆ ಶುಕ್ರವಾರ ನಡೆದಿದೆ.ಜಿಲ್ಲಾಡಳಿತವಾಗಲೀ ಸ್ಥಳೀಯಾಡಳಿತದಿಂದಾಗಲೀ ಯಾವುದೇ ಪರವಾನಿಗೆ ಪಡೆಯದೇ ಸರ್ವೇ ನಡೆಸಲು ಆಗಮಿಸಿದ್ದರು. ಈ ಕುರಿತು ಸ್ಥಳೀಯರು
ಉಳ್ಳಾಲ: ರಸ್ತೆ ಬದಿಯಲ್ಲಿ ಒಂದು ದಿನದ ಮಗುವನ್ನು ಬಿಟ್ಟು ಹೋಗಿರುವ ಘಟನೆ ತೊಕ್ಕೊಟ್ಟು ಕಾಪಿಕಾಡು ಅಂಬಿಕಾರೋಡಿನ ಗೇರು ಅಭಿವೃದ್ದಿ ಕೇಂದ್ರದ ಬಳಿ ನಡೆದಿದ್ದು, ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೊಕ್ಕೊಟ್ಟು ಕಾಪಿಕಾಡ್ ನಿವಾಸಿ ಅಮರ್ ಎಂಬವರ ಮನೆಯ ಎದುರುಗಡೆ ಗೇಟಿನ ಹೊರಗಡೆ ನಿಲ್ಲಿಸಿದ್ದ ಕಾರಿನ ಅಡಿಯಲ್ಲಿ ಮಗು ಪತ್ತೆಯಾಗಿದೆ. ಮನೆಮಂದಿ ಬೆಳಿಗ್ಗೆ ಏಳುವಾಗ ಮಗು ಕೂಗುತ್ತಿರುವುದನ್ನು ಗಮನಿಸಿ ಹೊರಹೋದಾಗ ಕಾರಿನ ಕೆಳಗಡೆ ಬಿಳಿ
ರಾಷ್ಟ್ರೀಯ ಹೆದ್ದಾರಿ 66ರ ನಾಯ್ಕನಕಟ್ಟೆ ಸರ್ಕಲ್ ಬಳಿ ನೂತನವಾಗಿ ಗೋಲ್ಡ್ ಮೊಬೈಲ್ ಮತ್ತು ಎಸ್‍ಎಲ್‍ವಿ ಟ್ರೇಡರ್ಸ್ ಮಳಿಗೆ ಶುಭಾರಂಭಗೊಂಡಿತು. ಇಲ್ಲಿ ಎಲ್ಲಾ ತರಹದ ಕಂಪನಿ ಮೊಬೈಲಗಳು ಹಾಗೂ ವಿವಿಧ ಕಂಪನಿಯ ಮೊಬೈಲ್ ರೀಚಾರ್ಜ್‍ಗಳು ಸಿಮ್ ಕಾರ್ಡ್‍ಗಳು, ಗ್ರಾಹಕರಿಗೆ ಪಾನ್ ಕಾರ್ಡ್, ಲ್ಯಾಂಡ್ ಲಿಂಕ್ಸ್, ವಿವಿಧ ಕಂಪನಿಯ ಮೋಟಾರ್ ಸೈಕಲ್‍ಗಳು, ಮಿನಿ ಎಟಿಎಂ ಇನ್ನಿತರ ಎಲ್ಲಾ ಗ್ರಾಹಕರಿಗೆ ಬೇಕಾಗುವ ಸೌಲಭ್ಯಗಳು ಸಿಗುತ್ತದೆ

























