ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ:ನಾಟಕಕಾರ, ಸಾಹಿತ್ಯ ಮತ್ತು ಸಮಾಜ ಸೇವಕ ದಿ ಎ. ಶಿವಾನಂದ ಕರ್ಕೇರ ಅವರ ಸವಿ ನೆನಪು ಕಾರ್ಯಕ್ರಮ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಾಟಕಕಾರ, ಸಾಹಿತ್ಯ ಮತ್ತು ಸಮಾಜ ಸೇವಕ ದಿ ಎ. ಶಿವಾನಂದ ಕರ್ಕೇರ ಅವರ ಸವಿ ನೆನಪು ಕಾರ್ಯಕ್ರಮವನ್ನು ನಗರದ ತುಳು ಭವನದಲ್ಲಿ ಆಯೋಜಿಸಲಾಗಿತ್ತು.

tulu sahitya accadamy
ತುಳು ಸಾಹಿತ್ಯ ಅಕಾಡೆಮಿ

ಮಂಗಳೂರಿನ ಉರ್ವಸ್ಟೋರಿನ ತುಳಭವನದಲ್ಲಿ ಸಿರಿ ಚಾವಡಿಯಲ್ಲಿ ನಾಟಕಕಾರ , ಸಾಹಿತ್ಯ ಮತ್ತು ಸಮಾಜ ಸೇವಕ ದಿ ಎ. ಶಿವಾನಂದ ಕರ್ಕೇರ ಅವರ ಸವಿ ನೆನಪು ಕಾರ್ಯಕ್ರಮದ ಪ್ರಯಕ್ತ ಅವರ ಭಾವಚಿತ್ರಕ್ಕೆ ಗಣ್ಯರು ಪುಪ್ಪನಮನ ಸಲ್ಲಿಸಿದರು. ಇನ್ನು ಸಭಾ ಕಾರ್ಯಕ್ರಮವನ್ನು ಪ್ರಪುಲ್ಲ ಶಿವಾನಂದ ಕರ್ಕೇರ ಅವರು ದೀಪ ಬೆಳಗಿಸಿ, ಉದ್ಘಾಟಿಸಿದರು. ಕಾರ್ಯಕ್ರಮ ದಲ್ಲಿ ಸಾಹಿತಿ ವಿ.ಜಿ.ಪಾಲ್ ಅವರು ಮಾತನಾಡಿ, ಶಿವಾನಂದ ಕರ್ಕೇರ ಅವರು ತುಂಬಾ ಕಷ್ಟ ಜೀವನದಲ್ಲ ಸಾಧನೆ ಮಾಡಿದ್ದಾರೆ. ಜೊತೆಗೆ ತುಳು ಸಾಹಿತ್ಯ ಕ್ಷೇತ್ರದಲ್ಲೂ ಅವರ ಕೊಡುಗೆ ಅಪಾರವಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಜಯಾನಂದ್ ಅಂಚನ್ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ, ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಶಿವಾನಂದ ಕರ್ಕೇರ ಅವರು ರಸ್ತೆಗೆ ಹೆಸರಿಡುವ ಬಗ್ಗೆ ಚರ್ಚಿಸಲಾಗುವುದು. ತಮ್ಮ ನಿವಾಸದ ರಸ್ತೆಗೆ ಹೆಸರಿಡುವ ಕುರಿತು ಸ್ಥಳೀಯ ಪಾಲಿಕೆ ಸದಸ್ಯರೊಂದಿಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ತುಳು ಸಾಹಿತ್ಯ ಅಕಾಡೆಮಿ

ಈ ವೇಳೆ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್ ಸಾರ್ ಅವರು ಸ್ವಾಗತ ಹಾಗೂ ಪಾಸ್ತಾವಿಕ ಮಾತುಗಳನ್ನಾಡಿದ್ರು, ಕಾರ್ಯಕ್ರಮವನ್ನು ಸದಸ್ಯರಾದ ನರೇಂದ್ರ ಕೆರೆಕಾಡು ನಿರೂಪಿಸಿದರು.ಇದೇ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನ ಗೌರವಿಸಲಾಯ್ತು. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಜರುಗಿತ್ತು.
ಈ ವೇಳೆ ಸಾಹಿತಿ ಭಾಸ್ಕರ್ ರೈ ಕುಕ್ಕವಳ್ಳಿ,ಪಿ.ಎಫ್ ಅಧಿಕಾರಿ ಅಶೋಕ್, ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ
ವಿಜಯಲಕ್ಷ್ಮಿ , ನಾಗೇಶ್ ಕುಲಾಲ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

dr m v shetty

Related Posts

Leave a Reply

Your email address will not be published.