ಪ್ರಧಾನಿ ನರೇಂದ್ರ ಮೋದಿಯವರಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಮತ್ಸ್ಯಾ ಸಂಪಾದನಾ ಯೋಜನೆಯ ಆಳ ಸಮುದ್ರ ಮೀನುಗಾರಿಕೆಯ ಬೋಟ್ ಫಲಾನುಭವಿಗಳಿಗೆ ಆದೇಶ ಪತ್ರವನ್ನು ವೇದಿಕೆಯಲ್ಲಿ ವಿತರಿಸಿದರು.
ಬಂಗ್ರಕೂಳೂರಿನಲ್ಲಿ ಕಾಯ್ದಿರಿಸಲಾದ ಬೃಹತ್ ಸಮಾವೇಶದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಬಂದರು ಇಲಾಖೆ ಸಚಿವ ಸರ್ಬಾನಂದ್ ಸೊನೊವಾಲ್ ಅವರು ಮೈಸೂರು ಪೇಟ ಹಾಗೂ ರತ್ನ ಮಾಲೆ ಮತ್ತು ಉಡುಪಿ ಶ್ರೀಕೃಷ್ಣನ ಸ್ಮರಣಿಕೆ ನೀಡಿ ಸ್ವಾಗತಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು ಮಲ್ಲಿಗೆ ಮಾಲಾರ್ಪಣೆ ಮಾಡಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರು ಪರಶುರಾಮನ ಸ್ಮರಣಿಕೆಯನ್ನು ನೀಡಿ
ಪ್ರಧಾನಿ ನರೇಂದ್ರ ಮೋದಿ ಅವರು, ನವಮಂಗಳೂರಿನ ಬಂದರಿನಲ್ಲಿ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಬಂದರು ಇಲಾಖೆ ಸಚಿವ ಸರ್ಬಾನಂದ್ ಸೋನೊವಾಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಹರ್ದಿಪ್ ಸಿಂಗ್ ಪುರಿ, ಶ್ರೀಪಾದ್ ಯಶೋನಾಯಕ್, ಸಂತುನು ಠಾಕೂರ್
ಸುಳ್ಯ ತಾಲೂಕಿನ ಬೆಳ್ಳಾರೆಯ ಪೆರುವಾಜೆಯಲ್ಲಿ ಯತೀಶ್ ಕುಮಾರ್ ಪೆಲತಡ್ಕ ಮಾಲಕತ್ವದ ಅಕ್ಷಯ ಫಾರ್ಮ್ ಪ್ರೆಶ್ ಚಿಕನ್ ಸೆಂಟರ್ ಶುಭಾರಂಭಗೊಂಡಿತು. ಇಲ್ಲಿ ಬಾಯ್ಲರ್, ಟೈಸನ್ ಮತ್ತು ನಾಟಿ ಕೋಳಿಗಳು ರಖಂ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಹೆಚ್ಚಿನ
ಉಡುಪಿ ಕಡೆಯಿಂದ ಮಂಗಳೂರು ಕಡೆ ಪ್ರಯಾಣಿಸುವ ಘನ ವಾಹನಗಳ ಸಹಿತ ಗೂಡ್ಸ್ ವಾಹನಗಳಿಗೆ ಪ್ರವೇಶ ನಿರಾಕರಿಸಿ ಕಾರ್ಕಳ ರಸ್ತೆಯಾಗಿ ಪ್ರಯಾಣ ಮುಂದುವರಿಸಲು ಪೊಲೀಸರು ಸೂಚನೆ ನೀಡಿದ್ದರೂ ಸುತ್ತು ಬಳಸಿ ಹೋಗುವುದನ್ನು ತಪ್ಪಿಸಲು ಬ್ರಹತ್ ಟ್ರಕ್ ಗಳು ಕಾರ್ಕಳ ರಸ್ತೆಯುದ್ಧಕ್ಕೂ ಹೆದ್ದಾರಿಗಂಟಿಕೊಂಡೇ ನಿಂತಿರುವುದರಿಂದ ಮತ್ತೊಂದು ಸಮಸ್ಯೆ ಸೃಷ್ಠಿಗೆ ಸಿದ್ದತೆ ನಡೆಸಿದಂತ್ತಿದೆ.ಮುಂಜಾನೆ ಆರು ಗಂಟೆಯಿಂದ ಸಂಜೆ ಆರರ ವರಗೆ ಈ ಪ್ರಕೃಯೆ ನಡೆಯಲಿರುವುದರಿಂದ ಪಡುಬಿದ್ರಿ
ಬಂಟ್ವಾಳ: ವಿಶ್ವಹಿಂದೂ ಪರಿಷತ್- ಮಾತೃಶಕ್ತಿ ದುರ್ಗಾವಾಹಿನಿ ಬಜರಂಗ ದಳ ಛತ್ರಪತಿ ಶಾಖೆ ಕುಮ್ಡೇಲು ಇದರ ಆಶ್ರಯದಲ್ಲಿ ಕಡೆಗೋಳಿ ಶ್ರೀ ಪೊಳಲಿ ರಾಜರಾಜೇಶ್ವರೀ ಮಹದ್ವಾರದ ಬಳಿ ನೂತನವಾಗಿ ನಿರ್ಮಾಣಗೊಂಡ ಪೂರ್ಣ ಕುಂಭ ಕಲಶ ಮಾದರಿಯ ಛತ್ರಪತಿ ಶಿವಾಜಿ ವೃತ್ತ ಉದ್ಘಾಟನಾ ಸಮಾರಂಭ ನೆರವೇರಿತು. ನೂತನ ಛತ್ರಪತಿ ಶಿವಾಜಿ ವೃತ್ತವನ್ನು ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಉದ್ಘಾಟಸಿ, ದೀಪ ಪ್ರಜ್ವಲಿಸಿದರು. ಈ ಸಂದರ್ಭ ಬಜರಂಗದಳ
ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಬಡಗ ಮಿಜಾರು ಗ್ರಾಮದ ಬೇರಿಂಜೆಯ ಮನೆಯೊಂದಕ್ಕೆ ಮುಸುಕುಧಾರಿ ವ್ಯಕ್ತಿಗಳಬ್ಬರು ನುಗ್ಗಿ ತಲವಾರು ಝಳಪಿಸಿ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 5 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ದರೋಡೆ ಮಾಡಿ ಪರಾರಿಯಾದ ಘಟನೆ ನಡೆದಿದೆ. ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ದುಡಿಯುತ್ತಿರುವ ಕಮಲ ಶೆಟ್ಟಿ ದರೋಡೆಗೊಳಗಾದ ಮಹಿಳೆ ಇವರ ಇಬ್ಬರು ಗಂಡು ಮಕ್ಕಳು ಮೃತಪಟ್ಟಿದ್ದು, ಪತಿ ಕಳೆದ ವರ್ಷ ನಿಧನ ಹೊಂದಿದ್ದರು.
ಬಹಳ ಸಮಯದ ಬಳಿಕ ಪ್ರಧಾನಿ ಕರಾವಳಿಗೆ ಬರುತ್ತಿದ್ದಾರೆ. ಸುಮಾರು 3800ಕೋಟಿಯ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇಡೀ ಕರಾವಳಿಗೆ ಅಭಿವೃದ್ಧಿಗೆ ಈ ಯೋಜನೆಗಳು ಪೂರಕ. ಉದ್ಯೋಗವಕಾಶಗಳನ್ನೂ ಇದು ನೀಡಬಲ್ಲದು. ಮೀನುಗಾರರಿಗೆ ಅನುಕೂಲ ಆಗುವ ಯೋಜನೆಗಳನ್ನು ನೀಡಲಾಗಿದೆ. ಕರಾವಳಿ ಅಭಿವೃದ್ಧಿಗೆ ಈ ಯೋಜನೆಗಳು ಪೂರಕ ಎಂದ ಸಿಎಂಮುರುಘ ಶ್ರೀಗಳ ಬಗ್ಗೆ ಮಾತಾನಾಡುವ ಪೂರಕ ಸಂದರ್ಭ ಇದಲ್ಲ. ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ತನಿಖೆ ನಡೆಸುತ್ತಿದ್ದಾರೆ.
ಮೂಡುಬಿದಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್ ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮೂಡುಬಿದಿರೆ ಮತ್ತು ಸಂತ ಥೋಮಸ್ ವಿದ್ಯಾ ಸಂಸ್ಥೆ ಆಲಂಗಾರು ಇವುಗಳ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಅಬಾಲ್ ಪಂದ್ಯಾಟವು ಆಲಂಗಾರು ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ದೀಪ ಬೆಳಗಿಸಿ, ವಾಲಿಬಾಲ್‍ನ್ನು ರಿಬ್ಬನ್‍ನಿಂದ
ಮಂಗಳೂರು, ಸೆ.1(ಕ.ವಾ):-ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಸೆ.2ರ ಶುಕ್ರವಾರ ಮಂಗಳೂರಿಗೆ ಭೇಟಿ ನೀಡುತ್ತಿದ್ದು ಬಂದರು, ಒಳನಾಡು ಜಲಸಾರಿಗೆಗೆ ಸಂಬಂಧಿಸಿದ ಎಂಟು ಯೋಜನೆಗಳ ಲೋಕಾರ್ಪಣೆ, ಶಿಲನ್ಯಾಸ ನೆರವೇರಿಸುವರು. ನಗರದ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಮಧ್ಯಾಹ್ನ 1.30 ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ 3,800 ಕೋಟಿ ರೂ.ಗಳ ಮೊತ್ತದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ನಡೆಯಲಿದೆ. ಪ್ರಧಾನಿ ಲೋಕಾರ್ಪಣೆ ಮಾಡುವ ಯೋಜನೆಗಳಲ್ಲಿ,

























