Home Posts tagged #v4newskarnataka (Page 104)

ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ : ಪದಕ ವಿಜೇತ ಸತೀಶ್ ಖಾರ್ವಿಗೆ ಅದ್ಧೂರಿ ಸ್ವಾಗತ

ಕುಂದಾಪುರ: ಡೆಡ್‍ಲಿಫ್ಟ್‍ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ನನಗೆ, ಕಾಮನ್‍ವೆಲ್ತ್‍ನಲ್ಲೂ ವೈಯಕ್ತಿಕ ದಾಖಲೆ ನಿರ್ಮಿಸಬೇಕೆಂಬ ಹಂಬಲವಿತ್ತು. ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ. ಆದರೆ ಅಲ್ಲಿ ವಿಪರೀತ ಚಳಿಯಿಂದಾಗಿ ಭಾರ ಎತ್ತಲು ಸಾಧ್ಯವಾಗಲಿಲ್ಲ. ಇದರಿಂದ ವೈಯಕ್ತಿಕ ದಾಖಲೆ ಕೈ ತಪ್ಪಿ ಹೋಯಿತು ಎಂದು ಫವರ್

ಕುಂದಾಪುರ ಬಾರ್ ಅಸೋಸಿಯೇಶನ್ ವತಿಯಿಂದ ನಟ ರಿಷಬ್ ಶೆಟ್ಟಿ ಅವರಿಗೆ ಸನ್ಮಾನ

ಕುಂದಾಪುರ : ಕಾಲೇಜು ದಿನಗಳಲ್ಲಿ ಇಲ್ಲಿನ ಭಂಡಾರ್‍ಕಾರ್ಸ್ ಕಾಲೇಜು, ನ್ಯಾಯಾಲಯದ ಪರಿಸರದಲ್ಲಿ ಓಡಾಡಿದ್ದ ನೆನಪುಗಳನ್ನು ಹೊಂದಿರುವ ನನಗೆ ಇದೇ ನ್ಯಾಯಾಲಯದ ಸಂಕೀರ್ಣದಲ್ಲಿ ಗೌರವಾನ್ವೀತ ನ್ಯಾಯಮೂರ್ತಿಗಳ ಉಪಸ್ಥಿತಿಯಲ್ಲಿ ಸನ್ಮಾನ ಪಡೆದುಕೊಳ್ಳಲು ತುಂಬಾ ಹೆಮ್ಮೆಯಾಗುತ್ತಿದೆ ಎಂದು ಕಾಂತಾರ ಚಲನಚಿತ್ರ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಅಭಿಮಾನ ವ್ಯಕ್ತಪಡಿಸಿದರು. ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಕುಂದಾಪುರ ಬಾರ್ ಅಸೋಸೀಯೇಶನ್ ಆಶ್ರಯದಲ್ಲಿ ನಡೆದ

ಮೂಡುಬಿದಿರೆ ಪುರಸಭೆಯ ಅಧಿವೇಶನ : ಹಸಿಕಸ ವಿಲೇವಾರಿಯಲ್ಲಿ ಅಡಚಣೆ

ಮೂಡುಬಿದರೆ : ವಸತಿ ಸಮುಚ್ಛಯಗಳಲ್ಲಿನ ಹಸಿಕಸವನ್ನು ಹಂದಿ ಸಾಕಾಣಿಕೆಗಾರರಿಗೆ ರವಾನಿಸಿ ವಿಲೇವಾರಿ ಮಾಡುವ ಪ್ರಕ್ರಿಯೆಯಲ್ಲಿ ಎರಡು ಮೂರು ಬಾರಿ ಅಡಚಣೆಯಾಗಿದ್ದು ಇದರಿಂದಾಗಿ ತ್ಯಾಜ್ಯ ದಲ್ಲಿ ಹುಳುಗಳಾಗಿರುವದರಿಂದ ತ್ಯಾಜ್ಯ ಸಂಗ್ರಹವಾಗಿಲ್ಲ, ವಿಲೇವಾರಿ ಮಾಡುವವರಿಗೆ ತಿಳಿಸಿದರೆ ಅವರು ಪುರಸಭೆಯ ಅಧಿಕಾರಿಗಳಿಗೆ ತಿಳಿಸಿ ಎಂದು ಹೇಳುತ್ತಾರೆ. ಹಾಗಾದರೆ ಪುರಸಭೆಯ ಸದಸ್ಯರಾಗಿರುವ ನಮಗೆ ಗೌರವವಿಲ್ಲವೇ. ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ 23ಕೋಟಿಯಷ್ಟು ಹಣವನ್ನು

ಯುಪಿಸಿಎಲ್ ದೇಶೀಯ ಕಲ್ಲಿದ್ದಲು ಬಳಸುವ ಹುನ್ನಾರ : ಎಲ್ಲೂರು ಗ್ರಾಮ ಸಭೆಯಲ್ಲಿ ವಿರೋಧ

ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಜನವಿರೋಧಿ ಯುಪಿಸಿಎಲ್ ಕಂಪನಿ ವಿದೇಶಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದನೆ ನಡೆಸುವ ಒಡಂಬಡಿಕೆ ಇದ್ದರೂ ಇದೀಗ ಅದು ಜನರಿಗೆ ಸಮಸ್ಯೆಯೊಡ್ಡುವ ದೇಶೀ ಕಲ್ಲಿದ್ದಲು ಬಳಸುವ ಹುನ್ನಾರ ನಡೆಸುತ್ತಿದೆ ಎಂಬುದಾಗಿ ಎಲ್ಲೂರು ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಅದರ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಗ್ರಾಮಸಭೆಯಲ್ಲಿ ವಿಚಾರ ಮಂಡನೆ ಮಾಡಿದ ಗ್ರಾಮಸ್ಥ ನಾಗೇಶ್ ರಾವ್, ರಾಜ್ಯದಲ್ಲಿ ವಿದ್ಯುತ್ ಬರ

ಕಾರು ಢಿಕ್ಕಿ ಅಡ್ಯಾರ್ ಸೆಲೂನ್ ಮಾಲೀಕ ಮೃತ್ಯು

ಮಂಗಳೂರು : ಕಾರು ಅಪಘಾತಕ್ಕೀಡಾಗಿ ಅಡ್ಯಾರ್ ಬಾಳಿಕೆ ಮನೆ ನಿವಾಸಿ ಕೊರಗಪ್ಪ ಸಾಲ್ಯಾನ್ (65) ಎಂಬವರು ಮೃತಪಟ್ಟಿರುವ ಘಟನೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮುಂಭಾಗ ಸಂಭವಿಸಿದೆ. ಅಡ್ಯಾರ್ ಗಾರ್ಡನ್ ಎದುರುಗಡೆಯ ಸಂತೋಷ್ ಹೇರ್ ಡ್ರೆಸ್ಸಸ್೯ ಎಂಬ ಸೆಲೂನಿನ ಮಾಲಕರಾಗಿದ್ದ ಇವರು ಸೈಕಲ್ ಮೂಲಕ ರಸ್ತೆ ದಾಟುವಾಗ ಬಿ.ಸಿ.ರೋಡ್ ಕಡೆಯಿಂದ ಅಮಿತ ವೇಗದಲ್ಲಿ ಬಂದ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ದೂರಕ್ಕೆ ಎಸೆಯಲ್ಪಟ್ಟು, ತಲೆಗೆ ಗಂಭೀರ ರೀತಿಯಲ್ಲಿ

ಸಿಂಗಿಂಗ್ ಟಿವಿ ರಿಯಾಲಿಟಿ ಶೋ “ಹಾಡು ನೀ ಹಾಡು” ಸೀಸನ್ 1 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ

ಕರಾವಳಿ ಕರ್ನಾಟಕದ ಪುಟಾಣಿ ಹಾಡುಗಾರರಿಗಾಗಿ ಸಜ್ಜಾಗಿರುವ ಹೊಚ್ಚ ಹೊಸ ಸಿಂಗಿಂಗ್ ಟಿವಿ ರಿಯಾಲಿಟಿ ಶೋ “ಹಾಡು ನೀ ಹಾಡು” ಸೀಸನ್ 1 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ಉಡುಪಿ ಇಂದ್ರಾಳಿಯ ರಿದ್ಧಿ ಕ್ರಿಯೇಷನ್ಸ್ ಸಿನಿ ಸ್ಟುಡಿಯೋದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಸಂಪಾದಕಿ, ಪತ್ರಕರ್ತೆ, ಖ್ಯಾತ ಚಿಂತಕಿ ಡಾ. ಸಂಧ್ಯಾ ಪೈ ಅವರು ಪೋಸ್ಟರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಿರಿಯ ವಯಸ್ಸಿನಲ್ಲಿ ಮಕ್ಕಳ

“ಹರೇಕಳ ಗ್ರಾಮ ಸೌಧ” ಉದ್ಘಾಟನೆ

ಉಳ್ಳಾಲದ ಹರೇಕಳ ಗ್ರಾಮ ಪಂಚಾಯಿತಿ ನೂತನ ಕಚೇರಿ ಕಟ್ಟಡ “ಹರೇಕಳ ಗ್ರಾಮ ಸೌಧ ಉದ್ಘಾಟನೆ ನಡೆಯಿತು. ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪ ನಾಯಕ, ಶಾಸಕ ಯು.ಟಿ. ಖಾದರ್ ಹರೇಕಳ ಗ್ರಾಮ ಪಂಚಾಯಿತಿ ನೂತನ ಕಚೇರಿ ಕಟ್ಟಡ “ಹರೇಕಳ ಗ್ರಾಮ ಸೌಧ ಉದ್ಘಾಟಿಸಿದರು. ನಂತರ ಮಾತನಡಿದ ಅವರು ಗ್ರಾಮ ಪಂಚಾಯಿತಿ ಕಚೇರಿ ಎಂಬುವುದು ಗ್ರಾಮದ ಆತ್ಮ.ಹರೇಕಳ ಗ್ರಾಮ ವಿವಿಧ ಅಭಿವೃದ್ಧಿ ಕಾಮಗಾರಿ ಮೂಲಕ ಮಾದರಿಯಾಗಿ ರೂಪುಗೊಳ್ಳುತ್ತಿದ್ದು ಇನ್ನೂ ಅಭಿವೃದ್ಧಿ ಆಗಬೇಕೆನ್ನುವ

ಕೊರೆಯುವ ಚಳಿಯಲ್ಲಿ ದೇಶದ ವೀರ ಯೋಧರ ನಿತ್ಯದ ಬದುಕು

ಬಂಟ್ವಾಳ: ಚಳಿಗಾಲದಲ್ಲಿ ತಣ್ಣೀರ ಸ್ನಾನ ಮಾಡಲು ನಾವು ಹಿಂದೆಟ್ಟು ಹಾಕುತ್ತೇವೆ. ಅಂತಹುದರಲ್ಲಿ ಮೈ ಕೊರೆಯುವ ಚಳಿ, ಮೈನಸ್ 18 ಡಿಗ್ರೆ ಸೆಲ್ಸಿಯಸ್ ವಾತವರಣವಿರುವ ಅರುಣಾಚಲ ಪ್ರದೇಶದ ಕೊರೆಯುವ ಚಳಿಯಲ್ಲಿ ಗಡಿ ಕಾಯುವ ನಮ್ಮ ದೇಶದ ವೀರಯೋಧರ ನಿತ್ಯದ ಬದುಕು ಹೇಗಿರಬಹುದು? ಇದಕ್ಕೊಂದು ತಾಜಾ ಉದಾಹರಣೆ ಈ ವಿಡಿಯೋವೊಂದು ಇಲ್ಲಿದೆ. ಭಾರತ ಚೀನಾ ಗಡಿಭಾಗವಾಗಿರುವ ಅರುಣಚಲಪ್ರದೇಶದ ಎತ್ತರದ ಪರ್ವತ ಭಾಗದಲ್ಲಿ ನಮ್ಮ ವೀರ ಯೋಧರು ಗಡಿಕಾಯುತ್ತಿದ್ದಾರೆ. ಕೊರೆಯುವ ಚಳಿಗೆ

ಸುರತ್ಕಲ್ ಟೋಲ್ ಗೇಟ್ ರದ್ದು: ಬಸ್ಸು ಪ್ರಯಾಣ ದರ ಇಳಿಕೆಗೆ ಹೋರಾಟ ಸಮಿತಿ ಆಗ್ರಹ

ಸುರತ್ಕಲ್ ಟೋಲ್ ಗೇಟ್ ದಾಟಿ ಮುಲ್ಕಿ, ಕಿನ್ನಿಗೋಳಿ, ಮುಕ್ಕ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಸುಗಳು ಪ್ರಯಾಣಿಕರ ಟಿಕೆಟ್ ಮೇಲೆ ಹಾಕಿದ್ದ ಟೋಲ್ ತೆರಿಗೆಯನ್ನು ತಕ್ಷಣವೇ ಕೈಬಿಟ್ಟು ಪ್ರಯಾಣ ದರವನ್ನು ಇಳಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ. ಏಳು ವರ್ಷಗಳ ಹಿಂದೆ ಸುರತ್ಕಲ್ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಆರಂಭಗೊಂಡಾಗ ಮುಲ್ಕಿ, ಹಳೆಯಂಗಡಿ, ಕಿನ್ನಿಗೋಳಿ ಮುಂತಾದ ಮಂಗಳೂರು ಗ್ರಾಮೀಣ ಭಾಗಗಳಿಗೆ ಸಂಚರಿಸುತ್ತಿದ್ದ ಖಾಸಗಿ

ಮಂಜೇಶ್ವರದಲ್ಲಿ ಸಂಭ್ರಮದ ಬೀಚ್ ಪೆಸ್ಟ್ ಗೆ ಚಾಲನೆ

ಮಂಜೇಶ್ವರ: ಉದ್ಯಾವರ ಎಎಚ್‍ಎಸ್ ತಂಡದ ಪ್ರಾಯೋಜಕತ್ವದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿನ ಸಹಕಾರದೊಂದಿಗೆ ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದ ಕುಂಡು ಕೊಳಕೆ ಬೀಚ್ ನಲ್ಲಿ ಸಂಭ್ರಮದ ಬೀಚ್ ಫೆಸ್ಟ್ ಗೆ ಚಾಲನೆ ದೊರಕಿತು. ಇನ್ನು ಮುಂದಿನ ಒಂದು ತಿಂಗಳಿನಲ್ಲಿ ನಡೆಯಲಿರುವ ಬೀಚ್ ಫೆಸ್ಟ್ ಮಂಜೇಶ್ವರದ ಬೀಚ್‍ನಲ್ಲಿ ಉತ್ಸವದ ಸಂಭ್ರಮವಾಗಲಿದೆ. ಈ ಸಲದ ಮಂಜೇಶ್ವರ ಕಂಡು ಕೊಳಕೆ ಬೀಚ್ ಫೆಸ್ಟ್ ವಿವಿಧ ವಿನ್ಯಾಸಗಳನ್ನು ಹೊಂದಿದ್ದು, ಮಕ್ಕಳಿಗೆ ಹಾಗೂ