ಉಳ್ಳಾಲ ಕ್ಷೇತ್ರದಲ್ಲಿ ಬಿಜೆಪಿ ಶಾಸಕರನ್ನು ಗೆಲ್ಲಿಸಿ ಅಬ್ಬಕ್ಕನ ಭವನ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಮಾಜಿ ಸಚಿವ ಈಶ್ವರಪ್ಪ ಅಭಿಪ್ರಾಯಪಟ್ಡರು. ಮಂಗಳೂರು ವಿಧಾನ ಸಭಾ ಕ್ಷೇತ್ರದ ಕುತ್ತಾರು ರಾಜರಾಜೇಶ್ವರೀ ಸಿದ್ದಿವಿನಾಯಕ ದೇವಸ್ಥಾನದಿಂದ ತೊಕ್ಕುಟ್ಟು ಜಂಕ್ಷನ್‍ವರೆಗೆ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ತೊಕ್ಕೊಟ್ಟಿನ
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಕಲ್ಲಿಮಾರ್ ವಿನಲ್ಲಿ ಪುರಾತನ ಕಾಲದ ನಾಗಕಲ್ಲು ಪತ್ತೆಯಾಗಿದೆ. ನಾಗ ಬನದ ಸಮೀಪ ಅಗೆಯುವಾಗ ಈ ಕಲ್ಲು ಪತ್ತೆಯಾಗಿದೆ. ನಾಗಕಲ್ಲು ತುಂಡಾಗಿದ್ದು ಬಹಳ ಪುರಾತನವಾದ ಅಪರೂಪದ ಶಿಲ್ಪ ಕಲೆ ಇದರಲ್ಲಿ ಗೋಚರಿಸುತ್ತಿದೆ. ರವಿಪ್ರಸಾದ್ ಭಟ್ ಸಹಕಾರದಲ್ಲಿ ಈ ಅಪರೂಪದ ಶಿಲ್ಪರೂಪದ ನಾಗಕಲ್ಲು ಪತ್ತೆಯಾಗಿದೆ. ಸುಮಾರು 500 ವರ್ಷಗಳ ಹಿಂದಿನ ಪುರಾತನ ಶಿಲ್ಪ ಕಲೆಯ ಹಾಗೆ ಕಂಡುಬರುತ್ತಿದೆ.
ಕನ್ನಡ ಮಿತ್ರರು ಯು ಎ ಯಿ ದುಬೈನಲ್ಲಿ ನಡಸುತ್ತಿರುವ ಕನ್ನಡ ಪಾಠ ಶಾಲೆ ದುಬೈನ ಮಹಾ ಪೋಷಕರಾದ ಶ್ರೀಯುತ ಪ್ರವೀಣ್ ಕುಮಾರ್ ಶೆಟ್ಟಿ, ಅಧ್ಯಕ್ಷರಾದ ಶ್ರೀಯುತ ಶಶಿಧರ್ ನಾಗರಾಜಪ್ಪ, ಉಪಾದ್ಯಕ್ಷ ಶ್ರೀಯುತ ಸಿದ್ದಲಿಂಗೇಶ್, ಕಾರ್ಯದರ್ಶಿ ಶ್ರೀಯುತ ಗವಸ್ಕರ್, ಖಜಾಂಚಿ ನಾಗರಾಜ್ ರಾವ್ ಸಂಸ್ಥಾಪಕ ಸದಸ್ಯ, ಚಂದ್ರಶೇಖರ್ ಸಂಕೋಲೆ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಮಹೇಶ್ ಜೋಷಿ ಅವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಪತ್ರ
ಮಸ್ಕತ್: ವಿಜಯ ಕುಮಾರ್ ಕೊಡಿಯಾಲಬೈಲ್ ರವರ ನಿರ್ದೇಶನದ ವಿಭಿನ್ನ ಶೈಲಿಯ ತುಳು ಮತ್ತು ಕನ್ನಡ ನಾಟಕ ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರು ನೋಡಿ ಆನಂದಿಸಿದ “ಶಿವದೂತೆ ಗುಳಿಗೆ” ನಾಟಕವು ಮೇ 12 ರಂದು ಮಸ್ಕತ್ ನ ರೂವಿಯ ಅಲ್ ಫಲಾಜ್ ಹೋಟೆಲ್ ನ ಗ್ರಾಂಡ್ ಹಾಲ್ ಅಡಿಟೋರಿಯಂನಲ್ಲಿ ಪ್ರದರ್ಶನಗೊಳ್ಳಲಿದೆ ವಿಶ್ವ ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ ಪೂಜ್ಯ ಪುತ್ತಿಗೆ ಮಠಾದೀಶರಾದ ಶ್ರೀ ಶ್ರೀ ಸುಗುನೇಂದ್ರ ತೀರ್ಥ ಸ್ವಾಮೀಜಿಯವರು ಮಸ್ಕತ್ ಗೆ ಆಗಮಿಸಿದ್ದ
ಕುಂದಾಪುರ:ಬೈಂದೂರು ತಾಲೂಕಿನ ನಾಗೂರು ರಾಷ್ಟ್ರೀಯ ಹೆದ್ದಾರಿ 66 ರ ಮಸೀದಿ ಎದುರು ಉರ್ದು ಶಾಲೆ ಸಮೀಪವಿರುವ ರವಿರಾಜ್ ಶೆಟ್ಟಿ ಚೇರ್ಕಾಡಿ ಅವರ ಒಡೆತನದ ದುರ್ಗಾರಶ್ಮಿ ಹಾರ್ಡವೇರ್ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಸಂಭವಿಸಿದೆ. ದುರ್ಗಾರಶ್ಮಿ ಹಾರ್ಡವೇರ್ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಕಸ್ಮಾತ್ ಬೆಂಕಿ ತಗುಲಿದೆ ಬೆಂಕಿ ಕೆನ್ನಾಲಿಗೆ
ಸೇವಾಭಾರತಿ(ರಿ),ಮಂಗಳೂರು ಇದರ ಸೇವಾ ಪ್ರಕಲ್ಪವಾದ `ಅನಂತಸೌಖ್ಯ” ಹಾಗೂ ಕೆ.ಎಂ.ಸಿ,ಆಸ್ಪತ್ರೆ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮತ್ತು ಮಂಗಳೂರು ಹಿರಿಯ ನಾಗರಿಕರ ಸಂಘ ಇವರ ಸಹಯೋಗದೊಂದಿಗೆ, ಹಿರಿಯ ನಾಗರಿಕರಿಗಾಗಿ ಉಚಿತ“ಹೃದಯತಪಾಸಣಾ ಶಿಬಿರ”ವು, ವಿ.ಟಿ.ರಸ್ತೆಯಲ್ಲಿರುವ ಚೇತನಾ ಬಾಲವಿಕಾಸ ಕೇಂದ್ರದ ವಠಾರದಲ್ಲಿ ನಡೆಯಿತು ಶಿಬಿರವನ್ನು, ಡಾ.ಪದ್ಮನಾಭಕಾಮತ್, ಪ್ರೊಫೆಸರ್ ಮತ್ತು ಮುಖ್ಯಸ್ಥರು, ಹೃದಯಚಿಕಿತ್ಸಾ ವಿಭಾಗ,
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ 95ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮಿಳಿನ ‘ದಿ ಎಲಿಫೆಂಟ್ ವಿಸ್ಪರರ್ಸ್’ಗೆ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಈ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಡಾಕ್ಯುಮೆಂಟರಿ ಎಂಬ ಖ್ಯಾತಿಗೂ ‘ದಿ ಎಲಿಫೆಂಟ್ ವಿಸ್ಪರರ್ಸ್’ ಪಾತ್ರವಾಗಿದೆ. ಮತ್ತೊಂದು, ಎಸ್.ಎಸ್.ರಾಜಮೌಳಿ ಅವರ RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭ್ಯವಾಗಿದೆ. ‘ದಿ
ಮೂಡುಬಿದಿರೆ: ಕ್ಷೇತ್ರದ ಜನತೆಯ ಮನದಲ್ಲಿರುವ ಆಶೆಯೇ ನನ್ನ ಆಶೆಯೂ ಆಗಿದೆ. ನಿಮ್ಮ ತಲೆಯಲ್ಲಿ ಏನೆಲ್ಲ ಯೋಚನೆಗಳಿವೆಯೋ ಅವೆಲ್ಲವೂ ನನ್ನ ಯೋಚನೆಯೂ ಆಗಿದೆ. ಸರ್ವಾಂಗೀಣ ರೀತಿಯಲ್ಲಿ ಮೂಡಬಿದರೆ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವುದಷ್ಟೇ ನನ್ನ ಗುರಿಯಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಮೂಡುಬಿದರೆ ಕನ್ನಡ ಭವನದಲ್ಲಿ ನಡೆದ ಮುಲ್ಕಿ ಮೂಡುಬಿದಿರೆ ಮಂಡಲದ ಪ್ರಣಾಳಿಕೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈಗಾಗಲೇ
ಕಾರ್ಕಳ, ಶ್ರೀ ಮಾರಿಯಮ್ಮ ದೇವಿಯ ಪುನರ್ ಪ್ರತಿಷ್ಠಾ ಮಹೋತ್ಸವ ನಡೆಯುತ್ತಿದ್ದು, ಶ್ರೀ ಮುಖ್ಯ ಪ್ರಾಣ ದೇವರ ಅಷ್ಟಬಂಧ ಸಹಿತ ಪ್ರತಿಷ್ಠೆ ,ಪ್ರತಿಷ್ಠಾ ಕಲಶಾಭಿಷೇಕ , ಪ್ರಸನ್ನ ಪೂಜೆ,108 ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ , ಪ್ರಸನ್ನ ಪೂಜೆ, ನ್ಯಾಸ ಪೂಜೆ,ಚಂಡಿಕಾ ಯಾಗ, ಮಾರಿಯಮ್ಮ ಮತ್ತು ಉಚ್ಚಂಗಿ ಮಾರಿಯಮ್ಮ ನ ಬಿಂಬ ಶುದ್ದಿ ಪ್ರಕ್ರಿಯೆ, ಬಿಂಬ ಶುದ್ದಿ ಹೋಮ ಗಳು ಮನ್ಯುಸುಕ್ತ ಯಾಗ, ಕಾಳಿ ಗಾಯತ್ರಿ ಮಂತ್ರ ಹೋಮ, ಮದ್ಯಾಹ್ನ ಅನ್ನ ಸಂತರ್ಪಣೆ ಶ್ರೀ ಮಾರಿಯಮ್ಮ
ಉಡುಪಿ ಶಾಸಕ ರಘುಪತಿ ಭಟ್ ವಿರುದ್ದ ಅಟೋ ಚಾಲಕರು ತಿರುಗಿ ಬಿದ್ದಿದ್ದಾರೆ. ನಗರದ ಒಳಗಡೆ ಓಡಾಡುವ ಅಟೋಚಾಲಕರ ಮಧ್ಯೆ ಬಿರುಕು ಮೂಡಿಸಿ, ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎನ್ನುವ ಅರೋಪಗಳನ್ನು ಅಟೋ ಚಾಲಕರು ಮಾಡಿದ್ದಾರೆ.ಅಷ್ಟೇ ಅಲ್ಲ ನಗರದೊಳಗಡೆ ಸಂಚರಿಸುವ ಅಟೋ ಚಾಲಕರ ಸಮಸ್ಯೆಗಳನ್ನು ಬಗೆ ಹರಿಸದಿದ್ದಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆಯನ್ನು ಕೂಡ ಅಟೊ ಚಾಲಕರು ನೀಡಿದ್ದಾರೆ. ನಿಯಮದಂತೆ ನಗರದಲ್ಲಿ ಸಂಚರಿಸುವ ಅಟೋಗಳು ರೋಟೆಶನ್ ಮಾದರಿಯಲ್ಲಿ



























