ಪಡುಬಿದ್ರಿ ದೀನ್ ಸ್ಟ್ರೀಟ್ ಮನೆಯೊಂದಕ್ಕೆ ನುಗ್ಗಿದ ಕಳ್ಳರು :ರೂ.48 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಾಚ್ ಕಳವು
ಪಡುಬಿದ್ರಿ:ಪಡುಬಿದ್ರಿಯ ದೀನ್ ಸ್ಟ್ರೀಟ್ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 48 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 50 ಸಾವಿರ ಮೌಲ್ಯದ ರಾಡೋ ವಾಚನ್ನು ಕದ್ದೊಯ್ದ ಘಟನೆ ದಿನಾಂಕ 27/01/2026 ಮಂಗಳವಾರದಂದು ತಡರಾತ್ರಿ ನಡೆದಿದೆ.

ಪಡುಬಿದ್ರಿಯ ದೀನ್ ಸ್ಟ್ರೀಟ್ ನಲ್ಲಿರುವ ಅಪ್ತಾಬ್ ಮಂಜಿಲ್ ಹೆಸರಿನ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಹೊಂಚು ಹಾಕಿ ಬಾಗಿಲಿನ ಬೀಗ ಮುರಿದು ಒಳಗೆ ಹೊಕ್ಕ ಕಳ್ಳರು ಕಬ್ಬಿಣದ ಕಪಾಟಿನಲ್ಲಿದ್ದ 3.5 ಪವನ್ ಚಿನ್ನದ 6 ನೆಕ್ಲೆಸ್, 15 ಪವನ್ ತೂಕದ 7 ಬಂಗಾರದ ಬಳೆ, 3 ಪವನ್ ತೂಕದ 3 ಬ್ರಾಸ್ಲೆಟ್, 4 ಪವನ್ ತೂಕದ 15 ಚಿನ್ನದ ಉಂಗುರ ಒಟ್ಟು 70 ಪವನ್ ಚಿನ್ನ ಹಾಗೂ ರೂ.50 ಸಾವಿರ ಮೌಲ್ಯದ ರಾಡೋ ವಾಚ್ ಕಳವಾದ ಬಗ್ಗೆ ಜುವೀನಾ ಅರಾ ಖುದೂಸ್ ಅವರು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು,ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಅಜ್ಜತ್ ಆಲಿ, ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಆಗಮಿಸಿದ್ದು, ತನಿಖೆ ಮುಂದುವರೆಸಿದ್ದಾರೆ


















