Home Posts tagged padubidri

ಪಲಿಮಾರು : ಮೇ 18ರಂದು ಯುವ ವಿಪ್ರ ಸಮಾವೇಶ

ಶ್ರೀ ಪಲಿಮಾರು ಮೂಲ ಮಠದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯ 18 – 40ರ ವಯೋಮಿತಿಯ ತ್ರಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ ವಿಹಿತಮ್ ಮೇ 18 ಶನಿವಾರದಂದು ನಡೆಯಲಿದೆ ಎಂದು ಪಲಿಮಾರು ಮಠಾಧೀಶ ಶ್ರೀವಿದ್ಯಾದೀಶ ತೀರ್ಥರು ಹೇಳಿದ್ದಾರೆ. ಪಲಿಮಾರು ಮಠದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾತಃ ಸ್ಮರಣೀಯರಾದ ಶ್ರೀ

ಎರ್ಮಾಳಿನ ಅಕ್ರಮ ಕೋಳಿಯಂಕಕ್ಕೆ ದಾಳಿ : ಒಂಭತ್ತು ಮಂದಿ ವಶಕ್ಕೆ

ಎರ್ಮಾಳಿನ ಬಾರೊಂದರ ಹಿಂಬದಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕೋಳಿಯಂಕಕ್ಕೆ ದಾಳಿ ಮಾಡಿದ ಪೊಲೀಸರು ಒಂಭತ್ತು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.ಪೊಲೀಸ್ ವಶದಲ್ಲಿರುವವರು ಸುರೇಂದ್ರ ಬೆಳಪು, ಮಹೇಶ್ ಕುರ್ಕಾಲು, ಗಣೇಶ್ ಶೆಟ್ಟಿ ಎಲ್ಲೂರು, ಉಮೇಶ್ ಪೂಜಾರಿ ಕಾಪು, ಶ್ರೀಕಾಂತ್ ಉಚ್ಚಿಲ, ಸಂತೋಷ್ ಉಚ್ಚಿಲ, ರಾಜೇಂದ್ರ ಎಲ್ಲೂರು, ರಾಮ ತೆಂಕ ಎರ್ಮಾಳು, ಯೋಗೀಶ್ ಶೆಟ್ಟಿ ಕುಂಜೂರು.ಎರ್ಮಾಳಿನ ಬಾರ್ ಹಿಂಭಾಗದಲ್ಲಿ ಅಕ್ರಮ ಕೋಳಿಯಂಕ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ

ಪಡುಬಿದ್ರಿಯಲ್ಲಿ ಆತಂಕ ಸೃಷ್ಟಿಸಿದ ಬೆಂಕಿ ಅನಾಹುತ

ದೇವಳದ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರ ಇಕ್ಕೆಲಲ್ಲಿ ಬೃಹತ್ತಾಗಿ ಕಾಣಿಸಿಕೊಂಡ ಬೆಂಕಿ ಕೆಲ ಹೊತ್ತು ಆತಂಕ ಸೃಷ್ಟಿಸಿದೆ. ಜಿಯೋ ನೆಟ್‌ವರ್ಕ್ ಕಂಪನಿಯು ಬಳಕೆ ಮಾಡಿ ಹೆಚ್ಚುವರಿಯಾದ ಕೇಬಲ್ ಬಂಡಲನ್ನು ರಸ್ತೆಯಂಚಿನಲ್ಲಿ ಉಳಿಸಿ ಹೋಗಿದ್ದು, ಆ ಕೇಬಲ್ ರಾಶಿಗೆ ಬೆಂಕಿ ತಗುಲಿ ಪರಿಸವೆಲ್ಲಾ ಪಸರಿಸಿದೆ. ತೀರ ಸಮೀಪದಲ್ಲೇ ವಾಸದ ಮನೆಗಳಿದ್ದು ಆತಂಕ ಸೃಷ್ಟಿಯಾಗಿದ್ದು, ಪಡುಬಿದ್ರಿ ಪೊಲೀಸರು, ಗ್ರಾ.ಪಂ. ಪ್ರತಿನಿಧಿಗಳು, ಹೆಜಮಾಡಿ ಟೋಲ್ ಸಿಬ್ಬಂದಿಗಳು ಹಾಗೂ

ಪಡುಬಿದ್ರಿ: ಅಕ್ರಮ ಮರಳು ಸಾಗಾಟ ಮರಳು ಸಹಿತ ಟಿಪ್ಪರ್ ವಶಕ್ಕೆ

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರನ್ನು ಪಡುಬಿದ್ರಿ ಪೊಲೀಸರು ಪಲಿಮಾರಿನ ನಡಿಯೂರು ಕೊಪ್ಪಲ ರಸ್ತೆಯಲ್ಲಿ ವಶಕ್ಕೆ ಪಡೆದಿದ್ದಾರೆ.ಅಕ್ರಮ ಮರಳುಗಾರಿಕೆಯ ಬಗ್ಗೆ ಮಾಹಿತಿ ಪಡೆದ ಪಡುಬಿದ್ರಿ ಎಸ್ಸೈ ಪ್ರಸನ್ನ ಎಂ.ಎಸ್. ಸಿಬ್ಬಂದಿಗಳೊಂದಿಗೆ ನಂದಿಕೂರು ಪಲಿಮಾರು ರಸ್ತೆಯಾಗಿ ಪೊಲೀಸ್ ವಾಹನದಲ್ಲಿ ಸಂಚರಿಸುತ್ತಿದ್ದಾಗ ಅವರಾಲು ಮಟ್ಟು ಕಡೆಯಿಂದ ಕುಂಜ್ಞಾಲಿ ತೋಟ ಸಣ್ಣ ಸೇತುವೆ ಬಳಿ ಕೆ.ಎಲ್. 60-ಎ.9937ನೋಂದಾನಿ ಸಂಖ್ಯೆಯ ಟಿಪ್ಪರೊಂದು ಪೊಲೀಸ್ ವಾಹನ ನೋಡಿ ಪಕ್ಕದ

ಪಡುಬಿದ್ರಿ: ಮರಳು ಕದ್ದು ಸಾಗಾಟ: ಚಾಲಕ, ಮರಳು ಸಹಿತ ಟಿಪ್ಪರ್ ವಶಕ್ಕೆ

ಪಡುಬಿದ್ರಿ: “ಶ್ರೀ ಕಟೀಲು” ಹೆಸರಿನ ಟಿಪ್ಪರ್ ನಲ್ಲಿ ಕದ್ದು ಮರಳು ಸಾಗಿಸುತ್ತಿದ್ದ ಈಚರ್ ಲಾರಿ ಮರಳು ಸಹಿತ ಅದರ ಚಾಲಕನನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕೆ.ಎ.20-ಎ.ಬಿ. 3474 ನೋದಾನಿ ಸಂಖ್ಯೆಯ ಶ್ರೀ ಕಟೀಲ್ ಹೆಸರಿನ ಈಚರ್ ನಲ್ಲಿ ಚಾಲಕ ಪ್ರಮೋದ್ ಎಂಬಾತ ಅಕ್ರಮವಾಗಿ ಮರಳು ಸಾಗಿಸುವಾಗ ವಾಹನ ತಪಾಸಣೆ ನಡೆಸುತ್ತಿದ್ದ ಪಡುಬಿದ್ರಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. ಮರಳುಗಾರಿಕೆ ಬಗ್ಗೆ ಪರ್ಮಿಟ್ ಆಗಲಿ, ಪರವಾನಿಗೆ ಯಾಗಲಿ,

*ಪಡುಬಿದ್ರಿ: ಪ್ರೀತಿ, ವಿಶ್ವಾಸದಿಂದ ವಿಶೇಷ ಮಕ್ಕಳ ಮನಸ್ಸು ಗೆಲ್ಲಬಹುದು: ಮಾಜಿ ಸಚಿವ ವಿನಯಕುಮಾರ್ ಸೊರಕೆ

ಸಮಾಜದಲ್ಲಿ ಸಾಮಾನ್ಯರಂತೆ ಬದುಕು ಸಾಗಿಸಲು ಅಸಾಧ್ಯವಾದ ವಿಶೇಷ ಮಕ್ಕಳ ಮನಸ್ಸನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲಲು ಸಾಧ್ಯ ಎಂಬುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.ಅವರು ಶಿರ್ವ ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆಯಲ್ಲಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ ಸೊರಕೆಯವರ 69ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಪುಟಾಣಿಗಳಿಗೆ ತಿನ್ನಿಸಿ ಮಾತನಾಡಿದರು.ಇದೇ ಸಂದರ್ಭ ವಿಶೇಷ ಮಕ್ಕಳಿಗಾಗಿ

ಪಡುಬಿದ್ರಿ: ಡಿ.23ರಂದು ಸುಜ್ಲಾನ್ ಮುಂಭಾಗ ಭೂ ಅವ್ಯವಹಾರದ ವಿರುದ್ಧ ಪ್ರತಿಭಟನೆ: ಮಾಜಿ ಸಚಿವ ವಿನಯಕುಮಾರ್ ಸೊರಕೆ

ಸುಜ್ಲಾನ್ ಕಂಪನಿ ನಿರ್ಮಾಣ ಪೂರ್ವದಲ್ಲಿ ಪಡುಬಿದ್ರಿ, ನಂದಿಕೂರು, ಪಲಿಮಾರು ಪರಿಸರದಲ್ಲಿ ಕೆಐಡಿಬಿ ವತಿಯಿಂದ 1200 ಎಕ್ರೆ ಪ್ರದೇಶವನ್ನು ಭೂಸ್ವಾದೀನ ಮಾಡಿದ ಕಂಪನಿ ಇದೀಗ ನಷ್ಟ ಅನುಭವಿಸಿದ ಕಾರಣ ಆ ಜಾಗವನ್ನು ಕೆಐಡಿಗೆ ಮರಳಿಸಬೇಕಾಗಿದ್ದರೂ ಮರಳಿಸದೆ ಖಾಸಗಿ ವ್ಯಕ್ತಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುವ ಮೂಲಕ ಅಕ್ರಮ ಎಸಗಲಾಗಿದ್ದು ಇದರ ವಿರುದ್ಧ ಸಾರ್ಜನಿಕವಾಗಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಸುದ್ದಿಗೋಷ್ಠಿಯಲ್ಲಿ

ಪಡುಬಿದ್ರಿ: ಶಾಲಾ ಸೆಕ್ಯೂರಿಟಿ ಗಾರ್ಡ್ ಬಾವಿಗೆ ಹಾರಿ ಆತ್ಮಹತ್ಯೆ

ಎರ್ಮಾಳು ಬಡಾ ದೇವಸ್ಥಾನ ಬಳಿಯ ನಿವಾಸಿ ಅದಮಾರು ವಿದ್ಯಾಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಾಹಿಸುತ್ತಿದ್ದ ವ್ಯಕ್ತಿ ಇಂದು ಮುಂಜಾನೆ ಕುಂಜೂರಿನ ಮನೆಯೊಂದರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   ಆತ್ಮಹತ್ಯೆ ಮಾಡಿಕೊಂಡವರು ನವೀನ್ ಬಂಗೇರ (53), ಅವಿವಾಹಿತರಾಗಿದ್ದ ಇವರು ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದು ಕಳೆದ ಸುಮಾರು ಮೂರು ವರ್ಷಗಳಿಂದ ಅದಮಾರು ವಿದ್ಯಾಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಾಹಿಸುತ್ತಿದ್ದು,

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಜಲ್ ಜೀವನ್ ಯೋಜನೆಯ ಪೈಪ್ ಲೈನ್ ಕಾಮಗಾರಿ

ಜನರ ನೀರಿನ ಬವಣೆ ತೀರಿಸಲೆಂದು ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ನಡೆಯುತ್ತಿರುವ “ಜಲ್ ಜೀವನ್” ಯೋಜನೆಯ ಪೈಪ್ ಲೈನ್ ಕಾಮಗಾರಿ ಜನರ ಜೀವ ತೆಗೆಯುತ್ತಾ ಎಂಬ ಮಾತು ಕೇಳಿ ಬರುತ್ತಿದೆ. ಬಹುತೇಕ ಕಡೆಗಳಲ್ಲಿ ಈ ಯೋಜನೆಯ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರನ ನಿರ್ಲಕ್ಷ್ಯ ದಿಂದಾಗಿ ಅಲ್ಲಲ್ಲಿ ಪೈಪ್ ಲೈನ್‌ಗಾಗಿ ರಸ್ತೆಗಳನ್ನು ಅಗೆದು ಹಾಕಿ ಅಪಾಯಕಾರಿ ಸ್ಥಿತಿಯಲ್ಲಿ ಬಿಟ್ಟು ಹೋಗುತ್ತಿರುವುದರಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಬಗ್ಗೆ

ಅಪಾಯಕಾರಿ ಬಂಡೆ ಕಲ್ಲು ಸಾಗಾಟ ನಿಯಂತ್ರಿಸಿ: ಸಾಮಾಜಿಕ ಕಾರ್ಯಕರ್ತ ಮೊಯ್ದಿನಬ್ಬ

ಬೃಹತ್ ಬಂಡೆಕಲ್ಲುಗಳನ್ನು ಟಿಪ್ಪರ್ ಗಳಲ್ಲಿ ಕಾನೂನು ಬಾಹಿರವಾಗಿ ಅಪಾಯಕಾರಿ ಸ್ಥಿತಿಯಲ್ಲಿ ಸಾಗಿಸುತ್ತಿದ್ದು, ಜನರ ಪ್ರಾಣಕ್ಕೆ ಕುತ್ತುತರುವ ಇಂಥಹ ಪ್ರಕ್ರಿಯೆಗೆ ಸಾರಿಗೆ ಇಲಾಖೆ ಕಡಿವಾಣ ಹಾಕ ಬೇಕಾಗಿದೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಎಂ.ಪಿ. ಮೊಹಿದ್ಧಿನಬ್ಬ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಡಪಾಯಿಗಳಿಂದ ಸಂಚಾರದಲ್ಲಿ ಸಣ್ಣಪುಟ್ಟ ತೊಡಕುಗಳಾದರೂ ಸಾರಿಗೆ ಇಲಾಖೆ ಸಹಿತ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳುತ್ತಿದ್ದು, ಇಂಥಹ ಅಮಾಯಕರ ಪ್ರಾಣದ ಜೊತೆ