ಬಿ.ಸಿ ರೋಡ್ : ತುಳು ನಾಟಕೋತ್ಸವ
ಬಂಟ್ವಾಳದ ಬಿ.ಸಿ.ರೋಡ್‌ನ ಸ್ಪರ್ಶಾ ಕಲಾಮಂದಿರಲ್ಲಿ ತುಳು ನಾಟಕೋತ್ಸವ-2022 ಏಳು ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಾಲ್ಕನೇ ದಿನವಾದ ಇಂದು ಓಂ ಶ್ರೀ ಕಲಾವಿದೆರ್ ಬಿ.ಸಿ. ರೋಡ್ ಇವರಿಂದ ಅಂದ್oಡ ಅಂದ್ ಪನ್ಲೆ ನಾಟಕವು ಪ್ರದರ್ಶನಗೊಂಡಿತು.
ತುಳು ನಾಟಕ ಕಲಾವಿದರ ಒಕ್ಕೂಟ ಮಂಗಳೂರು ಇದರ ಬಂಟ್ವಾಳ ಘಟಕದ ಆಯೋಜನೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಹಾಗೂ ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಯೋಗದೊಂದಿಗೆ ತುಳು ನಾಟಕೋತ್ಸವ 2022ನ್ನು ಬಂಟ್ವಾಳ ಘಟಕದ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷರು ಮೆಕ್ಸಿಂ ಸಿಕ್ವೆರಾ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾಟಕಗಳನ್ನು ದೇಶ ವಿದೇಶಗಳಲ್ಲಿ ಅಭಿನಯಿಸುವ ಮೂಲಕ ಮಂಗಳೂರಿನ ನಾಟಕ ಸಂಘಗಳು ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ನಾಟಕದ ಗರಿಮೆಯನ್ನು ಇನ್ನಷ್ಟು ಪಸರಿಸಲಿ ಎಂದರು.
ನAತರ ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷರು ಬಾಬು.ಕೆ ವಿಟ್ಲ ಅವರು ಮಾತನಾಡಿ, ಈ ಕಾರ್ಯಕ್ರಮದಿಂದ ಬಹಳಷ್ಟು ಕಲಾವಿದರಿಗೆ ಪ್ರೋತ್ಸಹ ಸಿಗಲಿದೆ ಎಂದು ಶುಭ ಹಾರೈಸಿದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷರು ರೋಶನ್ ಡಿ’ಸೋಜ, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಪದ್ಮನಾಭ ರೈ, ಅಮ್ಟಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಮಲ್ಲಿಕಾ ಶೆಟ್ಟಿ, ಬಂಟ್ವಾಳ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಎಂ.ಸಿದ್ಧಕಟ್ಟೆ, ಧ್ವನಿಬೆಳಕುಸಂಯೋಜಕರ ಸಂಘ ಬಂಟ್ವಾಳ ಅಧ್ಯಕ್ಷರು ಧನ್‌ರಾಜ್ ಶೆಟ್ಟಿ, ಬಂಟ್ವಾಳ ವರ್ತಕರ ಸಹಕಾರಿ ಸಂಘದ ನಿರ್ದೇಶಕರು ಮೈಕಲ್ ಡಿ’ಕೋಸ್ತಾ, ಹಿರಿಯ ರಂಗ ಕಲಾವಿದೆ ಮಂಗಳೂರು ಶೋಭಾ ಶೆಟ್ಟಿ, ಉಳ್ಳಾಲ ತುಳುನಾಡ ಕಲಾವಿದರ ಒಕ್ಕೂಟದ ಕಿಶೋರ್ ಕುಂಪಲ, ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಮಂಗಳೂರು ಕಾರ್ಯದರ್ಶಿ ನಿಶಿತ್ ಪೂಜಾರಿ, ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಮಂಗಳೂರು ಉಪಾಧ್ಯಕ್ಷರು ಗಣೇಶ್ ಕಾಮತ್, ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಮಂಗಳೂರು ಉಪಾಧ್ಯಕ್ಷರು ಕ್ಲೆವರ್ ಡಿಸೋಜ, ಶಾಮಿಯಾನ ಮಾಲಕರ ಸಂಘ ಮಂಗಳೂರು ಘಟಕದ ಅಧ್ಯಕ್ಷರು ಯುವರಾಜ್ ಮೂಡುಶೆಡ್ಡೆ, ಶಾಮಿಯಾನ ಮಾಲಕರ ಸಂಘ ಮೂಡುಬಿದಿರೆ ಘಟಕದ ಅಧ್ಯಕ್ಷರು ಗಣಪತಿ ಪೈ, ಶಾಮಿಯಾನ ಮಾಲಕರ ಸಂಘ ಬೆಳ್ತಂಗಡಿ ಘಟಕದ ಅಧ್ಯಕ್ಷರು ಪ್ರಭಾಕರ ಶೆಟ್ಟಿ, ಶಾಮಿಯಾನ ಮಾಲಕರ ಸಂಘ ಬಂಟ್ವಾಳ ಘಟಕದ ಕಾರ್ಯದರ್ಶಿ ಚಂದ್ರಶೇಖರ ಸಾಲ್ಯಾನ್, ಕ್ಯಾಟರಿಂಗ್ ಮಾಲಕರ ಸಂಘ ಬಂಟ್ವಾಳ ಸಂಚಾಲಕರು ನಾರಾಯಣ ಪೂಜಾರಿ ಉದ್ಯಮಿಗಳು ಕೇಶವ ಶೆಟ್ಟಿ ಬೋಳಿಯಾರ್, ಶ್ರೀ ಶರಬೇಶ್ವರ ಶಾಮಿಯಾನ ಮಾವಿನಕಟ್ಟೆ ಪ್ರದೀಪ್ ರೈ, ಪ್ರಬುದ್ಧ ಚಲನಚಿತ್ರ ನಟ ಸನಿಲ್ ಗುರು ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಓಂ ಶ್ರೀ ಕಲಾವಿದೆರ್ ಬಿ.ಸಿ. ರೋಡ್ ಇವರಿಂದ ಅಂದ್Aಡ ಅಂದ್ ಪನ್ಲೆ ನಾಟಕವು ಪ್ರದರ್ಶನಗೊಂಡಿತು.
ವರದಿ: ಶರತ್ ಬಿ.ಸಿ. ರೋಡ್