ಉಡುಪಿ : ಕೃತಿಗಳ ಅನಾವರಣ ಕಾರ್ಯಕ್ರಮ
ಉಡುಪಿ: ಅ.1ರಂದು ಕೃತಿಗಳ ಅನಾವರಣ ಕಾರ್ಯಕ್ರಮ ಸುಹಾಸಂ ಉಡುಪಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ ಇವರ ಜಂಟಿ ಆಶ್ರಯದಲ್ಲಿ ದಿ. ಪಂಡಿತ ಯಜ್ಞನಾರಾಯಣ ಉಡುಪರ ಪುರಾಣ ಭಾರತ ಕೋಶದ ಪರಿಷ್ಕೃತ ಆವೃತ್ತಿ, ಕೃತಿಗಳ ಅನಾವರಣ ಸಮಾರಂಭವು ಅಕ್ಟೋಬರ್ 1, 2022 ರ ಶನಿವಾರದಂದು ಸಂಜೆ ೪ ಗಂಟೆಗೆ ಉಡುಪಿಯ ಕಿದಿಯೂರು ಹೋಟೆಲ್ನ ಅನಂತಶಯನ ಸಭಾಂಗಣದಲ್ಲಿ ಜರುಗಲಿದೆ.ಈ ಕೃತಿಯ ಬಿಡುಗಡೆಯನ್ನು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಅಜಕ್ಕಳ ಗಿರೀಶ್ ಭಟ್ ಮಾಡಲಿದ್ದಾರೆ. ಚಿಂತಕರಾದ ಬೆಂಗಳೂರಿನ ಶ್ರೀ ರೋಹಿತ್ ಚಕ್ರತೀರ್ಥ ಪುಸ್ತಕದ ಪರಿಚಯವನ್ನು ನೀಡಲಿದ್ದಾರೆ. ಸುಹಾಸಂ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಶಾಂತರಾಜ ಐತಾಳ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಶ್ರೀಮತಿ ನಾರಾಯಣೀ ದಾಮೋದರ್ ಮತ್ತು ಡಾ. ರೋಹಿತ್ ಎನ್.ಡಿ. ಉಪಸ್ಥಿತರಿರುವರು. ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ ಎಂದು ಕ.ಸಾ.ಪ. ಉಡುಪಿ ತಾಲೂಕು ಇದರ ಗೌರವ ಕಾರ್ಯದರ್ಶಿಯಾದ ಜನಾರ್ಧನ ಕೊಡವೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.