ಉಡುಪಿ: ಜಿಲ್ಲೆಯ ಜನತೆಯ ಪ್ರೀತಿಗೆ ಪಾತ್ರರಾಗಿದ್ದ ಎಸ್.ಪಿ. ಅಕ್ಷಯ್ ಮಚ್ಚಿಂದ್ರ ವರ್ಗಾವಣೆ
ಜಿಲ್ಲೆಯ ಜನತೆಯ ಪ್ರೀತಿಗೆ ಪಾತ್ರರಾಗಿದ್ದ ಉಡುಪಿ ಎಸ್.ಪಿ. ಅಕ್ಷಯ್ ಮಚ್ಚಿಂದ್ರರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿದೆ. ಅ ಸ್ಥಾನಕ್ಕೆ ಗುಲ್ಭರ್ಗ ಪೆÇಲೀಸ್ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಡಾ.ಅರುಣ್ ಕೆ ಅವರನ್ನು ನೇಮಕಗೊಳಿಸಲಾಗಿದೆ. ಸದ್ಯ ಅಕ್ಷಯ್ ಹಾಕೆಗೆ ಯಾವುದೇ ಹುದ್ದೆಯನ್ನು ಸೂಚಿಸಲಾಗಿಲ್ಲ.
ಉಡುಪಿಯಲ್ಲಿ ಜನಸ್ನೇಹಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅಕ್ಷಯ್ ಮಚ್ಚಿಂದ್ರ
ಉಡುಪಿಯಲ್ಲಿ ನಡೆಯುತ್ತಿದ್ದ ಅಕ್ರಮ ಇಸ್ಪೀಟ್ ಕ್ಲಬ್‍ಗಳು, ಗಾಂಜಾ ಮಾಫಿಯಾ, ಡ್ರಗ್ಸ್ ಪೆಡ್ಲರ್‍ಗಳು, ಪಬ್‍ಗಳ ವಿರುದ್ಧ ಸಮರ ಸಾರಿದ್ದರು. ಉಡುಪಿಯ ಶೌಚಾಲಯದಲ್ಲಿ ವೀಡಿಯೋ ಚಿತ್ರಿಕರಣ ಪ್ರಕರಣದಲ್ಲಿ ಇವರು ಕೈಗೊಂಡ ಕ್ರಮಗಳ ಬಗ್ಗೆ ಉನ್ನತ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.