ಪುಟ್ಟ ಕಂದಮ್ಮನ ಚಿಕಿತ್ಸೆಗೆ ನೆರವಾಗುವಿರಾ…… ?

ಸಾನ್ವಿ ನಾಯ್ಕ್ ಎನ್ನುವ ಹತ್ತು ವರುಷದ ಪುಟ್ಟ ಹುಡುಗಿ.ಈಗಷ್ಟೇ ಮೊಗ್ಗು ಹೂ ವಾಗಿ ಅರಳಿ ಎಲ್ಲಾ ಮಕ್ಕಳಂತೆ ಆಟವಾಡುತ್ತಾ ತನ್ನದೇ ಲೋಕದಲ್ಲಿ  ಸಂಭ್ರಮಿಸಬೇಕಾದ  ಪುಟ್ಟ  ಹುಡುಗಿ . ನಮ್ಮ ನಿಮ್ಮಂತೆ  ಭವಿಷ್ಯದ ಕನಸುಗಳನ್ನು  ಕಾಣುತ್ತಾ ನಲಿದಾಡುತ್ತಿದ್ದ ಸಾನ್ವಿ   ಮೇಲೆ  ವಿಧಿಯ ಕ್ರೂರ ದೃಷ್ಟಿ  ಬಿದ್ದಿದೆ . ಮಗಳ‌ ಭವಿಷ್ಯದ ಬಗ್ಗೆ  ನೂರಾರು  ಕನಸುಗಳನ್ನು ಹೊಂದಿದ್ದ   ಹೆತ್ತವರು ದುಖಃದಿಂದ ಕಣ್ಣೀರಿಡುವಂತಾಗಿದೆ. ಇಷ್ಟು ಸಣ್ಣ ವಯಸ್ಸಲ್ಲಿ ಈ ಮಗುವಿಗೆ  ತಲೇಸೆಮಿಯಾ ಮೇಜರ್  ಎನ್ನುವ ವಿಚಿತ್ರ ಖಾಯಿಲೆ ಕಾಣಿಸಿಕೊಂಡಿದೆ.ಈಗಾಗಲೇ ಉಡುಪಿಯ ವಿವಿಧ ಅಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅಲೆದಾಟ ನಡೆಸಿದ್ದಾರೆ.ಸದ್ಯ ಬೆಂಗಳೂರಿನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ.ಪುಟ್ಟ ಕಂದಮ್ಮನಿಗೆ ಬೋನ್ ಮ್ಯಾರೊವ್  ಟ್ರಾನ್ಸ್ ಪ್ಲಾಂಟ್ ಎನ್ನುವ ಚಿಕಿತ್ಸೆ ಮಾಡಬೇಕಾಗಿದೆ ಎಂದು ವೈದರು ತಿಳಿಸಿರುತ್ತಾರೆ.ಇದಕ್ಕೆ ಸುಮಾರು ನಲ್ವತ್ತು ಲಕ್ಷ  ವೆಚ್ಚ ವಾಗುವ ಬಗ್ಗೆ ವೈದರು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯ ಹೆಬ್ರಿಯ ಕುಚ್ಚೂರು ಎನ್ನುವ ಗ್ರಾಮದಲ್ಲಿ ನೆಲೆಸಿರುವ ಚಂದ್ತ  ನಾಯ್ಕ್ ಹಾಗೂ ಮಾಲತಿ ದಂಪತಿಗಳ ಮಗು ಸಾನ್ವಿ .ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬ ,ತಂದೆ ಚಂದ್ರ ನಾಯ್ಕ್ ಮಣಿಪಾಲ ಸಮೀಪ ಪುಟ್ಟ ಅಂಗಡಿಯನ್ನಿಟ್ಟು ಜೀವನ ಸಾಗಿಸುತ್ತಿದ್ದರು. ಒಬ್ಬಳೇ  ಮಗಳಾಗಿದ್ದರಿಂದ  ಮುದ್ದಾಗಿ ಸಾಕಿದ್ದರು. ಮಗಳ ಮೇಲೆ‌ ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದರು.ಅದ್ರೆ ಸಂತೋಷದಿಂದ ಕುಟುಂಬ ಈಗ ಕಂಗೆಟ್ಟು ಹೋಗಿದ್ದಾರೆ.

ತನಗೆ ಬರುವ ಅಲ್ಪ ಸ್ವಲ್ಪ  ಅದಾಯ ಸದ್ಯ ಅಸ್ಪತ್ರೆ ಖರ್ಚಿಗೂ ಸಾಕಾಗುತ್ತಿಲ್ಲ.ಪ್ರತಿ ತಿಂಗಳು ಸಾವಿರಾರು ರೂಪಾಯಿ ಸಾಲ ಮಾಡಿ ಮಗುವಿನ ಚಿಕಿತ್ಸೆ ಮಾಡಲಾಗುತ್ತಿದೆ. ಮಗು ಸಂಪೂರ್ಣವಾಗಿ ಗುಣಮುಖವಾಗಬೇಕಾದರೆ ನಲ್ವತ್ತು‌ ಲಕ್ಷ ಹಣ ಹೊಂದಿಸುವುದು ಕನಸಿನಲ್ಲೂ ಸಾಧ್ಯವಾಗದ ಮಾತು.ಪುಟ್ಟ ಬಾಲಕಿಯ ಚಿಕಿತ್ಸೆಗಾಗಿ ಸಹೃದಯಿಗಳು ಸಹಾಯ ಮಾಡುವಂತೆ ಹೆತ್ತವರು ಸಹಾಯ ಯಾಚಿಸಿದ್ದಾರೆ.  ಬಾಲಕಿಯ ಚಿಕಿತ್ಸೆಗೆ ತಮ್ನ‌ ಕೈಲಾದಷ್ಟು  ಸಹಾಯ ಮಾಡಿ ,ಮತ್ತೆ ಅ ಪುಟಾಣಿ ಹಾಸಿಗೆಯಿಂದ ಎದ್ದು ಎಲ್ಲರಂತೆ ಕುಣಿದು‌ ನಲಿದಾಡುವಂತೆ ಮಾಡೋಣಾ..ದಾನಿಗಳು ದಯವಿಟ್ಟು ಕೈ ಜೋಡಿಸಿ.

ಈ ಮಾಹಿತಿಯನ್ನು ದಯವಿಟ್ಟು ಇನ್ನೊಬ್ಬರಿಗೆ ಶೇರ್ ಮಾಡಿ ,ನಿಮ್ಮ ಸಹಾಯ ಪುಟ್ಟ ಬಾಲಕಿಯ ಪ್ರಾಣ ಉಳಿಸಬಹುದು.

Name : Sanvi Naik

Acount number: 41145139680

IFSC CODE: SBINOO13350

Bank: SBI ,hebri

Acount type: Saving acount

Google pay number: 9945601769

Address :
2-2A Huthrubettu.kucchur village,hebri taluk ,Udupi district ,karnataka state ,

Related Posts

Leave a Reply

Your email address will not be published.