ರಸ್ತೆ ಅಪಘಾತದಿಂದ ಪ್ರಾಣ ಕಳೆದುಕೊಂಡ ಗೆಳೆಯನ ಸಾವಿಗೆ ನ್ಯಾಯ ಸಿಗುವಂತೆ ಪ್ರತಿಭಟನೆ
ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಅಪಘಾತದಿಂದ ಪ್ರಾಣ ಕಳೆದುಕೊಂಡ ಆತ್ಮೀಯ ಗೆಳೆಯನ ಸಾವಿಗೆ ನ್ಯಾಯ ಕೊಡುವಂತೆ ಆಗ್ರಹಿಸಿ ಆತನ ಗೆಳೆಯನೊಬ್ಬ ನಗರದ ಲಾಲ್ ಬಾಗ್ ನಲ್ಲಿರುವ ಮಂಗಳೂರು ಮಹಾನಗರಪಾಲಿಕೆ ಕಚೇರಿ ಎದುರು ಒಂಟಿಯಾಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ನಂತೂರಿನಿಂದ ಬಿಕರ್ಣಕಟ್ಟೆ ಕಡೆಗೆ ಕೈನೆಟಿಕ್ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ, ದೇರೆಬೈಲ್ ಕೊಂಚಾಡಿಯ ಆತೀಶ್ ಶೆಟ್ಟಿ ಅವರು ರಸ್ತೆ ಹೊಂಡಾ ತಿಳಿಯದೆ ಹೊಂಡಾಕ್ಕೆ ಬಿದ್ದು ಸ್ಕೂಟರ್ ಪಲ್ಟಿಯಾಗಿ ಪಕ್ಕದ ಡಿವೈಡರ್ ಮೇಲೆ ಬಿದ್ದಿದ್ದರು. ಬಿದ್ದ ಏಟಿಗೆ ತಲೆಯಲ್ಲಿ ತೀವ್ರ ರಕ್ತಸ್ರಾವವಾಗಿ ಅವರು ಸಾವನ್ನಪ್ಪಿದ್ದರು.
ತನ್ನ ಗೆಳೆಯನ ಸಾವಿನಿಂದ ತೀವ್ರವಾಗಿ ನೊಂದ ಲಿಖಿತ್ ರೈ ಅವರು ರಸ್ತೆಯ ಗುಂಡಿಗಳಿಂದ ಸ್ವಾತಂತ್ರ್ಯ ಸಿಗಬೇಕು ಹಾಗೂ ಆತಿಶ್‌ಗೆ ನ್ಯಾಯ ದೊರಕಬೇಕು ಎಂದು ಆಗ್ರಹಿಸಿ ಕೈಯಲ್ಲಿ ದೊಡ್ಡ ಪೋಸ್ಟರ್ ಹಿಡಿದುಮಂಗಳೂರು ಮಹಾನಗರ ಪಾಲಿಕೆ ಮುಂಭಾಗದಲ್ಲಿ ಏಕಾಂಗಿ ಪ್ರತಿಭಟನೆ ಮಾಡಿ ಸಾರ್ವಜನಿಕರ ಗಮನ ಸೆಳೆದರು ಇನ್ನಾದರೂ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ, ರಸ್ತೆ ಅಪಘಾತಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ