ಉಡುಪಿ: ಉಚ್ಚಿಲ ದಸರಾ 2024- ಸೆ.22ರಂದು ಯುವ ನೃತ್ಯೋತ್ಸವದ ಆಡಿಷನ್ ರೌಂಡ್
ಉಡುಪಿ ಉಚ್ಚಿಲ ದಸರಾ 2024ರ ಪ್ರಯುಕ್ತ ನಡೆಯಲಿರುವ ಯುವ ನೃತ್ಯೋತ್ಸವದ ಆಡಿಷನ್ ರೌಂಡ್ ಸೆ.22ರಂದು ಮಧ್ಯಾಹ್ನ 3ರಿಂದ 6 ಗಂಟೆಯವರೆಗೆ ಉಚ್ಚಿಲದ ಮೊಗವೀರ ಭವನದಲ್ಲಿ ನಡೆಯಲಿದೆ.
ಆಡಿಷನ್ ಸುತ್ತಿನ ಸ್ಪರ್ಧಾ ನಿಯಮಗಳು :
1. ಒಂದು ನೃತ್ಯ ತಂಡದಲ್ಲಿ ಕನಿಷ್ಠ 5 ಜನ ಇರತಕ್ಕದ್ದು.
2. ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ.
3. ಒಂದು ತಂಡಕ್ಕೆ 5 ನಿಮಿಷ (4+1)ದ ಸಮಯಾವಕಾಶ ಮಾತ್ರ ನೀಡಲಾಗುವುದು.
4. ಆಡಿಷನ್ ಸುತ್ತಿನಲ್ಲಿ ಯಾವುದೇ ಕಾಸ್ಟ್ಯೂಮ್‌ನ (ವೇಷಭೂಷನ) ಅಗತ್ಯವಿರುವುದಿಲ್ಲ.
5. ಆಡಿಷನ್ ಸುತ್ತಿನಲ್ಲಿ ಆಯ್ಕೆಯಾದ ತಂಡಗಳು ದಿನಾಂಕ: 03-10-2024ರಂದು ಸಂಜೆ 6.30ರಿಂದ ನಡೆಯುವ ಯುವ ದಸರಾ ಉತ್ಸವದ ನೃತ್ಯ ಸ್ಪರ್ಧೆಗೆ ಅರ್ಹರಾಗುತ್ತಾರೆ.
6. ಆಡಿಷನ್ ರೌಂಡ್‌ನಲ್ಲಿ ಒಬ್ಬ ಸ್ಪರ್ಧಿ ಬೇರೆ ಬೇರೆ ತಂಡಗಳಲ್ಲಿ ನೃತ್ಯ ಸ್ಪರ್ಧೇಯಲ್ಲಿ ಭಾಘವಹಿಸಬಹುದು.
7. ಯಾವುದೇ ಭಾಷೆ ಅಥವಾ ನೃತ್ಯ ಪ್ರಾಕಾರದ (Format) ನಿರ್ಬಂಧವಿರುವುದಿಲ್ಲ.
8. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
9. ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಯಾವುದೇ ರೀತಿಯ ಚರ್ಚೆಗೆ ಅವಕಾಶವಿರುವುದಿಲ್ಲ.
10. ಫೈನಲ್ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥಕ ನಗದು ಬಹುಮಾನದೊಂದಿಗೆ ಪಾರಿತೋಷಕ ನೀಡಲಾಗುವುದು.
ಯುವ ನೃತ್ಯೋತ್ಸವದ ವಿಜೇತರಿಗೆ ನಗದು ಬಹುಮಾನವನ್ನು ನೀಡಿ ಗೌರವಿಸಲಾಗುವುದು.
1. ಪ್ರಥಮ ಬಹುಮಾನ – ರೂ.30,000/-
2. ದ್ವಿತೀಯ ಬಹುಮಾನ – ರೂ.20,000/-
3. ತೃತೀಯ ಬಹುಮಾನ – ರೂ.15,000/-
4. ಚತುರ್ಥ ಬಹುಮಾನ – ರೂ.10,000/-
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9449035570, 7022981615