ಪ್ರಕಾಶ್ ಕೆ ತೂಮಿನಾಡು ಅವರಿಗೆ ಮಾತೃ ವಿಯೋಗ
ಮಂಜೇಶ್ವರ: ಕನ್ನಡ ಮತ್ತು ತುಳು ಚಿತ್ರರಂಗದ ಪ್ರಖ್ಯಾತ ಪೋಷಕ ಮತ್ತು ಹಾಸ್ಯ ನಟರಾದ ಪ್ರಕಾಶ್ ಕೆ. ತೂಮಿನಾಡು ಅವರ ಮಾತೃಶ್ರೀಯವರಾದ ಗಿರಿಜಾ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರ ಅಂತಿಮ ವಿಧಿ ವಿಧಾನಗಳು ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ತೂಮಿನಾಡು ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.