ಕಾಂತು ಅಜಿಲರ ಕುಟುಂಬಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಆರ್ಥಿಕ ನೆರವು
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸಭೆಯಲ್ಲಿ ದೈವ ನರ್ತನ ಸೇವೆಯಲ್ಲಿ ತೊಡಗಿರುವಾಗಲೇ ಇಹಲೋಕ ತ್ಯಜಿಸಿದ ಕಾಂತು ಅಜಿಲರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ದೈವಾರಾಧನೆ ಕುರಿತು ಅಪಾರ ಜ್ಞಾನ ಹೊಂದಿದ್ದ ಕಾಂತು ಅಜಿಲರು ಹಲವರಿಗೆ ಸಂಶೋಧನೆ ಕುರಿತು ಮಾಹಿತಿ ನೀಡುತ್ತಿದ್ದರು.
ಎಡಮಂಗಲದ ಪ್ರಮುಖ ದೈವಸ್ಥಾನದಲ್ಲಿ ದೈವನರ್ತಕರಾಗಿ ಸೇವೆ ಮಾಡುತ್ತಿದ್ದರು. ಅವರು 45 ವರ್ಷಗಳಿಂದ ದೈವ ನರ್ತಕರಾಗಿ ಕೂಡುಕಟ್ಟಿಗೆ ಸಂಬಂಧಿಸಿದಂತೆ ದೈವಾರಾಧಕರಾಗಿ ಗ್ರಾಮದೈವಗಳ ಪರಿಚಾರಕಾಗಿ ಸೇವೆ ಸಲ್ಲಿಸುತ್ತಿದ್ದರು.
ಮಾ. 30ರಂದು ಕಡಬದ ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ನೇಮ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂತು ಅಜಿಲ ಅವರು ಮೃತಪಟ್ಟಿದ್ದರು.