ಕಿಟ್ ವಿತರಣೆಯಾಗದೆ ಕೆಟ್ಟು ಹೋಗುತ್ತಿರುವ ಆಹಾರ : ಕಾರ್ಕಳದಲ್ಲಿ ಸುಭೋದ್ ರಾವ್ ಆರೋಪ
ಕರ್ನಾಟಕದ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಊರಿನಲ್ಲಿ ಅಹಾರ ಕಿಟ್ಟ್ ವಿತರಣೆಯಾಗದೆ ಆಹಾರ ಪದಾರ್ಥಗಳು ಕೆಟ್ಟುಹೋಗುತ್ತಿವೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ಸಹಾಯವಾಗಲೆಂದು ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ಟ್ ಬಿಡುಗಡೆಯಾಗಿದೆ.
ಆದರೆ ಸಮರ್ಪಕವಾಗಿ ಕಿಟ್ಟ್ ವಿತರಣೆಯಾಗದೆ ಸಾವಿರಾರು ಕಿಟ್ಟ್ ಗಳ ಗೋಡಾನ್‍ನಲ್ಲಿ ರಾಶಿ ಬಿದ್ದು ಅದರ ಆಹಾರ ಪದಾರ್ಥಗಳು ಕೆಟ್ಟುಹೋಗುತ್ತಿವೆ. ಆಗೊಮ್ಮೆ ಈಗೊಮ್ಮೆ ಬಂದ ಕೆಲವು ಕಾರ್ಮಿಕರಿಗೆ ಗಂಟೆಕಟ್ಟಲೆ ಕಾಯಿಸಿ ಸತಾಯಿಸಿ ಕಿಟ್ಟ್ ಕೊಡಲಾಗಿತ್ತದೆ. ನಮ್ಮ ಸಚಿವರು ಸನ್ಮಾನ, ಅಭಿನಂದನೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಸರಕಾರ ತಕ್ಷಣ ಈ ಬಗ್ಗೆ ಗಮನಹರಿಸಿ ಆಹಾರ ಕಿಟ್ಟ್ ವಿತರಿಸಬೇಕು ಎಂದು ಶುಭದ ರಾವ್ ಪುರಸಭಾ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೇಸ್ ವಕ್ತಾರರು ಕಾರ್ಕಳ ಆಗ್ರಹಿಸಿದ್ದಾರೆ