ಉಡುಪಿಯಲ್ಲಿ ಗೋವಿಗಾಗಿ ಮೇವು ಅಭಿಯಾನ

ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಗೋವಿಗಾಗಿ ಮೇವು ಅಭಿಯಾನದ ಭಾಗವಾಗಿ ಇಂದು ಕೋಟತಟ್ಟು ಗ್ರಾಮಪಂಚಾಯತ್ ನ 5ನೇ ವಾರ್ಡ್ ನ ಸದಸ್ಯರಾದ ವಿದ್ಯಾ ಸಾಲ್ಯಾನ್, ರಾಬರ್ಟ್ ರೋಡ್ರಿಗಸ್ ,ಸಹೀರಾ ಬಾನು ಇವರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತದ ಪರಿಕಲ್ಪನೆಯಡಿ ರಸ್ತೆಯ ಇಕ್ಕೆಡೆಗಳಲ್ಲಿ ಇರುವ ಹಸಿ ಹುಲ್ಲನ್ನು ಕಟಾವು ಮಾಡಿ ನೀಲಾವರ ಗೋಶಾಲೆಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗೋವಿಗಾಗಿ ಮೇವು ಸ್ಥಾಪಕ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಇಂದು 3 ಧರ್ಮಿಯರು ಸೇರಿ ಕಾರ್ಯಕ್ರಮ ಸಂಘಟಿಸಿರುವುದು ಮಾದರಿ, ಕರಾವಳಿ ಜನರ ಹಿಂದುತ್ವ,ಗೋಪ್ರೇಮದ ಬಗ್ಗೆ ಕೇಳಿದ್ದೆ ಆದರೆ ಗೋವಿಗಾಗಿ ಮೇವು ಅಭಿಯಾನ ಆರಂಭವಾದ ನಂತರ ನೀವು ಮಾಡಿರುವ ಸೇವೆ ಮಾತಿನಲ್ಲಿ ಬಣ್ಣಿಸಲಸಾದ್ಯ ಎಂದರು ಹಿರಿಯ ಪ್ರಗತಿಪರ ಕ್ರಷಿಕ ರವೀಂದ್ರ ಐತಾಳ್ ಇವರನ್ನು ಗೋವಿಗಾಗಿ ಮೇವು ಸಂಘಟನೆ ಯಿಂದ ಗೌರವಿಸಲಾಯಿತು,ಗೋವಿಗಾಗಿ ಮೇವು ಚಿಕಮಗಳೂರು ಉಸ್ತುವಾರಿ ನಾಗೇಂದ್ರ ಪುತ್ರನ್ ,ಗ್ರಾಮಪಂಚಾಯತ್ ಸದಸ್ಯ ರವೀಂದ್ರ ತಿಂಗಳಾಯ, ಗೋವಿಗಾಗಿ ಮೇವು ಕೋಟ ವಲಯಾದ್ಯಕ್ಷ ಪ್ರದೀಪ್ ಪೂಜಾರಿ,ಗ್ರಾ.ಪಂ ಸದಸ್ಯೆ ಪೂಜಾ ಹಂದಟ್ಟು, ಅರಮವಿಜಯ ಸ್ಪೋರ್ಟ್ಸ್ ಕ್ಲಬ್ ಪಡುಕೆರೆ ಅದ್ಯಕ್ಷ ರವೀಂದ್ರ ಕಾಂಚನ್ ,ಪಾಂಚಜನ್ಯ ಯುವಕ ಮಂಡಲ ಕೋಟ ಅದ್ಯಕ್ಷ ಕ್ರಷ್ಣ ಮೂರ್ತಿ,ಗೌರವ ಅದ್ಯಕ್ಷ ಕ್ರಷ್ಣಯ್ಯ ಆಚಾರ್ಯ,ಅರಮವಿಜಯ ಸ್ಪೋರ್ಟ್ಸ್ ಕ್ಲಬ್ ಸದಸ್ಯರು,ಕೋಟತಟ್ಟು,ಪಡುಕೆರೆ ಯ ಮಹಿಳೆಯರು, ಉಪಸ್ಥಿತರಿದ್ದರು

Related Posts

Leave a Reply

Your email address will not be published.