ಉಳ್ಳಾಲ ವಿಧಾನಸಭಾ ಕ್ಷೇತ್ರದ NSUI ಅಧ್ಯಕ್ಷರಾಗಿ ಅಹ್ನಾಫ್ ಅಹ್ಮದ್ ನೇಮಕ

ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಅಧ್ಯಕ್ಷರಾಗಿ ಅಹ್ನಾಫ್ ಅಹ್ಮದ್(ಡೀಲ್ಸ್) ಇವರು ನೇಮಕವಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿದ್ದು ಮಂಗಳೂರಿನ SDM ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ.


ಪ್ರೌಢಶಾಲೆಯಿಂದಲೇ ತನ್ನ ಸಹಪಾಠಿಗಳೊಂದಿಗೆ ತಂಡವನ್ನು ಕಟ್ಟಿ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರು ಯಾವುದೇ ಸಮಯದಲ್ಲೂ ಬಡವರ ಬಗ್ಗೆ ಅತೀವ ಕಾಳಜಿ ಹೊಂದಿದವರಾಗಿದ್ದಾರೆ. ಅತ್ಯಂತ ಮೃದು ಸ್ವಭಾವದ ಇವರು ಉತ್ತಮ ಕ್ರಿಕೆಟ್ ಹಾಗೂ ಫುಟ್ಬಾಲ್ ಆಟಗಾರ ಕೂಡ ಹೌದು.
ಇವರು ಪ್ರಸ್ತುತ ಬಿ-ಹ್ಯುಮನ್ ಸಮಾಜಸೇವಾ ಸಂಸ್ಥೆಯ ಸಕ್ರಿಯ ಕಾರ್ಯಕರ್ತರಾಗಿದ್ದು ಕೋರೋನ ಸಂಕಷ್ಟದ ಸಂದರ್ಭದಲ್ಲಿ ಅತಂತ್ರರಾದವರಿಗೆ ಉಚಿತ ಊಟದ ವ್ಯವಸ್ಥೆ, ಉಚಿತ ರೇಷನ್ ಕಿಟ್ ವಿತರಣೆ, ವೆನ್ಲಾಕ್ ಆಸ್ಪತ್ರೆಯ ರೋಗಿಗಳಿಗೆ ಉಚಿತ ಹಣ್ಣು-ಹಂಪಲು ವಿತರಣೆ, ಧಾರ್ಮಿಕ ಸ್ಥಳಗಳ ಸ್ಯಾನಿಟೈಸೇಶನ್, ಕೊರೋನದಿಂದ ಬಳಲುವ ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆ ಮುಂತಾದ ಸಾಮಾಜಿಕ ಸೇವೆಗಳ ಮೂಲಕ ಜನ-ಮನವನ್ನು ಗೆದ್ದಿದ್ದರು. ಪ್ರಸಕ್ತ ಮಂಗಳೂರು ವಿಧಾನಸಬಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ U. T ಖಾದರ್ ರವರ ಶಿಫಾರಸ್ಸಿನ ಮೇರೆಗೆ ರಾಜ್ಯ NSUI ಪದಾಧಿಕಾರಿಗಳು ಇವರನ್ನು ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಸದಾ ಸಾಮಾಜಿಕ ಕಾಳಜಿ ಇರುವ ಇವರ ಮುಂದಾಳತ್ವದಲ್ಲಿ ವಿದ್ಯಾರ್ಥಿ ಶಕ್ತಿ ಇನ್ನಷ್ಟು ಬಲಿಷ್ಠಗೊಳ್ಳಲಿ ಹಾಗೂ ಸರ್ವ ವಿದ್ಯಾರ್ಥಿಗಳಿಗೆ ಇವರೊಬ್ಬ ಮಾದರಿ ನಾಯಕನೆನಿಸಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸೋಣ.

Related Posts

Leave a Reply

Your email address will not be published.