ಕಲಾವಿದರಿಗೆ ಸಹಾಯ ಧನ: ವಯೋಮಿತಿ ಇಳಿಕೆಗೆ ಸಂಸದರಿಗೆ ನಾಟಕ ಕಲಾವಿದರ ಒಕ್ಕೂಟದಿಂದ ಮನವಿ

ಮಂಗಳೂರು: ಸರಕಾರ ಕಲಾವಿದರಿಗೆ ಆರ್ಥಿಕ ಸಹಾಯ ನೀಡಲು 35 ವರ್ಷದ ವಯೋಮಿತಿಯಿಂದ ಕಡಿಮೆ ವಯಸ್ಸಿನ ಕಲಾವಿದರು ಅವಕಾಶ ವಂಚಿತರಾಗುತ್ತಿದ್ದಾರೆ. ಹೀಗಾಗಿ ವಯೋಮಿತಿಯನ್ನು ಕಡಿಮೆಗೊಳಿಸಬೇಕೆಂದು ತುಳು ನಾಟಕ ಕಲಾವಿದರ ಒಕ್ಕೂಟ ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದೆ. ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ ಶೆಟ್ಟಿ ನೇತೃತ್ವದಲ್ಲಿ ಮನವಿ ನೀಡಲಾಯಿತು.

ಲಾಕ್ಡೌನ್ ನಿಂದಾಗಿ ನಾಟಕ ಪ್ರದರ್ಶನಗಳಿಲ್ಲದೆ ತೊಂದರೆ ಅನುಭವಿಸಿದ ಕಲಾವಿದರಿಗಾಗಿ ಸರಕಾರ ಘೋಷಿಸಿರುವ ಧನಸಹಾಯ ಪಡೆಯಲು ಕನಿಷ್ಠ 35 ವರುಷಗಳ ವಯೋಮಿತಿ ಸೂಚಿಸಿತ್ತು , 35 ವರುಷ ಪೂರೈಸಿದ ಕಲಾವಿದರು ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ 35 ವರುಷಕ್ಕಿಂತ ಕಡಿಮೆ ವಯಸ್ಸಿನ ಕಲಾವಿದರಿಗೂ ಸರಕಾರ ಸಹಾಯಹಸ್ತ ನೀಡಬೇಕು.. ಕೇರಳ ಮತ್ತು ಕರ್ನಾಟಕದ ಗಡಿ ಪ್ರದೇಶದಲ್ಲಿರುವ ಮುನ್ನೂರಕ್ಕೂ ಅಧಿಕ ತುಳು ನಾಟಕ ಕಲಾವಿದರಿಗೆ ಸರಕಾರ ಯಾವುದೇ ಪರಿಹಾರ. ಘೋಷಣೆ ಮಾಡಿಲ್ಲ.. ಅವರಿಗೂ ಸರಕಾರದ ಧನಸಹಾಯ ಸೌಲಭ್ಯ ದೊರೆಯುವಂತಾಗಬೇಕೆಂದು ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇವರಿಗೆ ಮನವಿ ಸಲ್ಲಿಸಲಾಯಿತು.. ಸದ್ಯವೇ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ..
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಕಿಶೋರ್ ಡಿ.ಶೆಟ್ಟಿ , ಕಾರ್ಯದರ್ಶಿ ಲಕ್ಷ್ಮಣ ಕುಮಾರ್ ಮಲ್ಲೂರು, ಕೋಶಾಧಿಕಾರಿ ಮೋಹನ್ ಕೊಪ್ಪಲ, ಕ್ಷೇಮ ನಿಧಿ ಸಂಚಾಲಕ ಪ್ರದೀಪ್ ಆಳ್ವ ಕದ್ರಿ, ಸಲಹೆಗಾರರಾದ ತಾರನಾಥ ಶೆಟ್ಟಿ ಬೋಳಾರ, ಕದ್ರಿ ನವನೀತ್ ಶೆಟ್ಟಿ, ಪ್ರಶಾಂತ್ ಸಿ.ಕೆ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.