ಕ್ಷೇತ್ರದ ಜನರಿಗೆ ಭರವಸೆ ನೀಡಿದ ಕೆಲಸ ಮಾಡುತ್ತೇನೆ : ಶಾಸಕ ಶ್ರೀಮಂತ ಪಾಟೀಲ್ ಹೇಳಿಕೆ
ಕ್ಷೇತ್ರದ ಜನರಿಗೆ ಭರವಸೆ ನೀಡಿದ ನಂತರ ಆ ಕೆಲಸ ಮಾಡಿ ಗ್ರಾಮಗಳಿಗೆ ತೆರಳುತ್ತೇನೆ. ಇಲ್ಲವಾದರೇ ಆ ಗ್ರಾಮಕ್ಕೆ ನಾನು ಮರಳುವುದಿಲ್ಲ. ಆಶ್ವಾಸನೆ ನೀಡುವ ಬೇರೆ ರಾಜಕೀಯ ಮುಖಂಡರ ಹಾಗೆ ಗೊಡ್ಡು ಮಾತುಗಳನ್ನು ಹೇಳುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕರಾದ ಶ್ರೀಮಂತ ಪಾಟೀಲ ವಿನಾಕಾರಣ ಆಡಿಕೊಳ್ಳುವವರಿಗೆ ಟಾಂಗ್ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು ಸಂಬರಗಿ ಗ್ರಾಮದಲ್ಲಿ ವಿವಿಧ ಅಭೀವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡಿರುವ ಕಾಮಗಾರಿ ಹಾಗೂ ಕೆಎಂಎಫ್ ವತಿಯಿಂದ 5000 ಲಿಟರ್ ಸಾಮರ್ಥ್ಯವುಳ್ಳ ಬಿಎಂಸಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ವಿಧಾನ ಪರಿಷತ್ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಮಾತನಾಡಿ, ಶಾಸಕ ಶ್ರೀಮಂತ್ ಪಾಟೀಲ್ ಅವರು ಹೆಸರಿಗಷ್ಟೆ ಶ್ರೀಮಂತ ಅಲ್ಲಾ, ಅವರು ಹೃದಯ ಶ್ರೀಮಂತಿಕೆ ಉಳ್ಳ ಒಬ್ಬ ಧೀಮಂತ ನಾಯಕ, ಕಾಗವಾಡ ಮತಕ್ಷೇತ್ರ ವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತಿದ್ದಾರೆ. ಸಿದ್ದರಾಮಯ್ಯನ ಸರ್ಕಾರದಲ್ಲಿ ಸರಕಾರದ ಜಲಸಂಪನ್ಮೂಲ ಸಚಿವರಾದ ಎಮ್.ಬಿ. ಪಾಟೀಲ ರವರು ವಿಜಯಪುರ ಜಿಲ್ಲೆಯಲ್ಲಿ ನೀರಾವರಿಗೆ ಹೆಚ್ಚಿನ ಅನುದಾನಕ್ಕೆ ಆದ್ಯತೆ ನೀಡಿದರು ಎಂದು ಹೇಳಿದರು.
ಈ ವೇಳೆ ಕೆ.ಎಮ್.ಎಫ್. ನಿರ್ದೆಶಕರಾದ ಅಪ್ಪಾಸಾಹೇಬ ಅವತಾಡೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸರಿತಾ ಶಿವಾಜಿ ಸಾತಪುತೆ, ಜಿ ಬಿ ಫೌಂಡೆಶನ್ ಅಧ್ಯಕ್ಷ ಪ್ರತಾಪ ಸಾತಪುತೆ,ಸುಭಾಷ ಕಟಾರೆ, ವಿನಾಯಕ ಬಾಗಡಿ,ಆರ್.ಎಮ್ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.