ದುರ್ಗಾ ದೌಡ್ ಕಾರ್ಯಕ್ರಮಕ್ಕೆ ನಂದಿಕೂರಿನಲ್ಲಿ ಚಾಲನೆ

ಉಡುಪಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ನೆರಳಲ್ಲಿ ನಡೆಯುವ “ದುರ್ಗಾ ದೌಡ್ ” ಧಾರ್ಮಿಕ ಕಾರ್ಯಕ್ರಮಕ್ಕೆ ನಂದಿಕೂರು ಹಾಗೂ ಪಲಿಮಾರು ಘಟಕದಿಂದ ನೂರಾರು ಕಾರ್ಯಕರ್ತರು ನಂದಿಕೂರಿನಿಂದ ಬೈಕ್, ಕಾರು ಹಾಗೂ ಬಸ್ ಮೂಲಕ ತೆರಳಿದ್ದು ಅವರ ಜಾಥಕ್ಕೆ ಸ್ಥಳೀಯ ಮುಖಂಡರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಚಾಲನೆ ನೀಡಿದ್ದಾರೆ.


ಬಳಿಕ ಮಾತನಾಡಿದ ಅವರು ಉಡುಪಿಯಲ್ಲಿ ದುರ್ಗಾ ದೌಡ್  ಎಂಬ ಬೃಹತ್ ಸಮಾವೇಶ ನಡೆಯಲಿದ್ದು, ಆ ಕಾರ್ಯಕ್ರಮಕ್ಕೆ ಹಿಂದೂ ಜಾಗರಣ ವೇದಿಕೆಯ ಪ್ರತೀ ಘಟಕದಿಂದಲೂ ಎಲ್ಲಾ ಸದಸ್ಯರು ಪಾಲ್ಗೊಳ್ಳಲ್ಲಿದ್ದು, ಈ ಕಾರ್ಯಕ್ರಮ ಮೂಲ ಉದ್ಧೇಶ ಹಿಂದೂ ಧರ್ಮದ ಉಳಿವಿಗಾಗಿ ಶ್ರಮಿಸುವುದು ಆಗಿದೆ. ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ವಿರುದ್ಧ ಬಹಳಷ್ಟು ವಿಧಗಳಲ್ಲಿ ದಾಳಿಗಳು ಆಗುತ್ತಿರುವುದು ನಾವು ಗಮನಿಸುತ್ತಿದ್ದೇವೆ. ಇಂಥಹ ಕಾಲಘಟ್ಟದಲ್ಲಿ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ದನಕರುಗಳನ್ನು ಯುವಕರನ್ನು ರಕ್ಷಿಸುವ ಮಹಾ ಕಾರ್ಯ ಸಂಘಟನೆಯ ಮೂಲಕ ಆಗಲಿದ್ದು ಈ ನಿಟ್ಟಿನಲ್ಲಿ ಈ ದುರ್ಗಾದೌಡ್ ಧಾರ್ಮಿಕ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು. 
ಈ ಸಂದರ್ಭ ಹಿಂದೂ ಜಾಗರಣ ವೇದಿಕೆ ಕಾಪು ತಾಲೂಕು ಅಧ್ಯಕ್ಷ ಶಶಿಧರ ಹೆಗ್ಡೆ, ಪಡುಬಿದ್ರಿ ವಲಯ ಅಧ್ಯಕ್ಷ ಪ್ರತೀಕ್ ಕೋಟ್ಯಾನ್ ನಂದಿಕೂರು, ನಂದಿಕೂರು ಘಟಕಾಧ್ಯಕ್ಷ ನಿತೀಶ್ ಶೆಟ್ಟಿ, ಪಲಿಮಾರು ಘಟಕಾಧ್ಯಕ್ಷ ರಾಘವೇಂದ್ರ ಸುವರ್ಣ, ರಿತೇಶ್ ದೇವಾಡಿಗ, ವಿನೋದ್ ಶೆಟ್ಟಿ ಅಡ್ವೆ, ಸೌಮ್ಯಾ ಲತಾ ಶೆಟ್ಟಿ, ನೀತಾ ಗುರುರಾಜ್ ಹಾಗೂ ಗಾಯತ್ರಿ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.