ದೇಶಪ್ರೇಮದ ಹೆಸರಿನಲ್ಲಿ ದೇಶವನ್ನೇ ಮಾರಲು ಹೊರಟ ನರೇಂದ್ರ ಮೋದಿ ಸರಕಾರ – ಬಿ.ಕೆ.ಇಮ್ತಿಯಾಜ್

ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು,ಜನರಲ್ಲಿ ದೇಶಪ್ರೇಮದ ಉನ್ಮಾದವನ್ನು ಸ್ರಷ್ಠಿಸಿ, ದೇಶದ ಅಮೂಲ್ಯ ಸಂಪತ್ತುಗಳನ್ನು ಕಾರ್ಪೋರೇಟ್ ಕಂಪೆನಿಗಳ ಕೈಗೊಪ್ಪಿಸಿದ ನರೇಂದ್ರ ಮೋದಿ ಸರಕಾರ ನಿಜಕ್ಕೂ ದೇಶದ್ರೋಹಿಯಾಗಿದೆ.ಇಂತಹ ಸರಕಾರ ಮುಂದುವರಿದಲ್ಲಿ ಭವ್ಯಭಾರತದ ಮೂಲಗುಣಗಳಾದ ಜಾತ್ಯಾತೀತತೆ,ಸೌಹಾರ್ದತೆ ಸಂಪೂರ್ಣ ನಾಶವಾಗಲಿದೆ. ಆದ್ದರಿಂದ ದೇಶವನ್ನು ರಕ್ಷಿಸುವ ಹೊಣೆ ದುಡಿಯುವ ವರ್ಗದ ಮೇಲಿದೆ.ಅವರಿಗೆ ಬೆಂಗಾವಲಾಗಿ ದೇಶದ ಯುವಜನತೆ ನಿಲ್ಲಬೇಕಾಗಿದೆ* ಎಂದು DYFI ಜಿಲ್ಲಾಧ್ಯಕ್ಷರೂ, CPIM ಯುವ ನಾಯಕರಾದ ಬಿ.ಕೆ.ಇಮ್ತಿಯಾಜ್ ರವರು ಸೇರಿದ್ದ ಜನತೆಗೆ ಕರೆ ನೀಡಿದರು. ಬೆಲೆಯೇರಿಕೆಯ ವಿರುದ್ಧ CPIM ನೇತ್ರತ್ವದಲ್ಲಿ ಮಂಗಳೂರು ನಗರದಾದ್ಯಂತ ಜರುಗಿದ ವಾರಾಚರಣೆಯ ಸಮಾರೋಪವು ಕಸಬಾ ಬೆಂಗರೆಯಲ್ಲಿ ಜರುಗಿದ್ದು,ಅಲ್ಲಿ ಅವರು ಸಮಾರೋಪ ಭಾಷಣ ಮಾಡುತ್ತಾ ಈ ಮಾತುಗಳನ್ನು ಹೇಳಿದರು. CPIM ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಹಿಂದುತ್ವದ ಹೆಸರಿನಲ್ಲಿ ಮತ ನೀಡಿದ, ನರೇಂದ್ರ ಮೋದಿಯ ಮುಖ ನೋಡಿ ಮತ ಚಲಾಯಿಸಿದ ಮಂಗಳೂರು ನಗರದ ಜನತೆ ಇಂದು ಮರುಕ ಪಡುತ್ತಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ದೋಚುವ ಬಿಜೆಪಿ ಆಡಳಿತವು ಮಂಗಳೂರು ನಗರವನ್ನೇ ಹಾಳುಗೆಡಹುತ್ತಿದೆ. ಇವೆಲ್ಲದರ ಪರಿಣಾಮವಾಗಿ ಬೆಲೆಯೇರಿಕೆಯ ವಿರುದ್ದದ ವಾರಾಚರಣೆ ನಗರದ 52 ಕಡೆಗಳಲ್ಲಿ ಯಶಸ್ವಿ ಹೋರಾಟಗಳನ್ನು ನಡೆಸಿ ನಿರೀಕ್ಷೆಗೂ ಮೀರಿ ಜನರ ಸ್ಪಂದನ ದೊರೆತಿದೆ.ಇದು ಮುಂದಿನ ಹೊಸ ಬದಲಾವಣೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದರು. ಹೋರಾಟದ ನೇತ್ರತ್ವದಲ್ಲಿ ಸ್ಥಳೀಯ CPIM ನಾಯಕರಾದ ನೌಷಾದ್,ಹನೀಫ್,ರಿಜ್ವಾನ್, ರಫೀಕ್,ಬಿಲಾಲ್,ನಾಸಿರ್, ಮಯ್ಯದ್ದಿ, ಯಾಹ್ಯಾ ಮುಂತಾದವರು ವಹಿಸಿದ್ದರು.

Related Posts

Leave a Reply

Your email address will not be published.