ಪ್ಯಾರಾಲಿಂಪಿಕ್ಸ್‌ ನಲ್ಲಿ ಭಾರತಕ್ಕೆ ಐದನೇ ಚಿನ್ನ: ಬ್ಯಾಡ್ಮಿಂಟನ್ ನಲ್ಲಿ ಬಂಗಾರ ಗೆದ್ದ ಕೃಷ್ಣ ನಾಗರ್

ಟೋಕಿಯೊ: ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನ ಕೊನೆಯ ದಿನವಾದ ರವಿವಾರ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ (ಎಸ್‌ಎಚ್-6)ನಲ್ಲಿ ಭಾರತದ ಕೃಷ್ಣ ನಾಗರ್ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದರು. ಕೂಟದಲ್ಲಿ ಇದು ಭಾರತಕ್ಕೆ ಐದನೇ ಚಿನ್ನದ ಪದಕವಾಗಿದೆ.

ಬ್ಯಾಡ್ಮಿಂಟನ್ ಸ್ಪರ್ಧೆಯ ಎಸ್ ಎಚ್ 6 ವಿಭಾಗದಲ್ಲಿ ಭಾರತದ ಕೃಷ್ಣ ನಾಗರ್ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಹಾಂಗ್ ಕಾಂಗ್ ನ ಚು ಮನ್ ಕೈ ಅವರನ್ನು ಸೋಲಿಸಿದ ಕೃಷ್ಣ ನಾಗರ್ ಭಾರತಕ್ಕೆ ಐದನೇ ಚಿನ್ನದ ಪದಕ ತಂದಿತ್ತರು. 43 ನಿಮಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಕೃಷ್ಣ ಅವರು ಎದುರಾಳಿಯ ವಿರುದ್ಧ 21-17, 16-21, 21-17 ಸೆಟ್ ಗಳ ಅಂತರದಿಂದ ಗೆಲುವು ಸಾಧಿಸಿದರು. ಇಂದು ಮುಂಜಾನೆ ನಡೆದ ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯ ಎಸ್ಎಲ್ 4 ವಿಭಾಗದ ಫೈನಲ್ ಪಂದ್ಯದಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಸೋತರೂ ಬೆಳ್ಳಿ ಪದಕ ಗೆದ್ದರು. ಹಾಸನದ ಸುಹಾಸ್ ಅವರು ನೋಯ್ಡಾದಲ್ಲಿ ಜಿಲ್ಲಾಧಿಕಾರಿಯಾಗಿದ್ದು, ಪ್ಯಾರಾಲಂಪಿಕ್ಸ್ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎಂಬ ದಾಖಲೆ ಬರೆದರು.

Related Posts

Leave a Reply

Your email address will not be published.