ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ: ಆ. 6ರಂದು 31ನೇ ಪದವಿ ಪ್ರದಾನ, ಸ್ಪೆಷಾಲಿಟಿ ಕ್ಲಿನಿಕ್ ಉದ್ಘಾಟನೆ

ಫಾ. ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ 31ನೇ ಪದವಿ ಪ್ರದಾನ ಹಾಗೂ ಸ್ಪೆಷಾಲಿಟಿ ಕ್ಲಿನಿಕ್ ಉದ್ಘಾಟನೆ ಸಮಾರಂಭ ಆ. 6ರಂದು ನಡೆಯಲಿದೆ ಎಂದು ಫಾ. ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ. ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಹೇಳಿದರು.


ದೇರಳಕಟ್ಟೆಯ ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಪತ್ರಿಕೋಷ್ಠಿಯಲ್ಲಿ ಮಾತನಾಡಿದ ಅವರು ಫಾ. ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ 1985ರಿಂದ ಹೋಮಿಯೋಪಥಿ ವೈದ್ಯಕೀಯ ಪದ್ಧತಿಯಲ್ಲಿ ಅತ್ಯುನ್ನತ ಸೇವೆಯನ್ನು ಸಲ್ಲಿಸುತ್ತಾ ಹೋಮಿಯೋಪಥಿ ಚಿಕಿತ್ಸೆ ಎಲ್ಲ ವಿಭಾಗದ ಜನರಿಗೂ ತಲುಪುವಂತೆ ಪ್ರಧಾನ ಪಾತ್ರ ವಹಿಸಿದೆ. ಸಂಸ್ಥೆಯು ಹೋಮಿಯೋಪಥಿ ವೈದ್ಯಕೀಯ ಪದವಿ ಹಾಗೂ 7 ವಿಶೇಷತೆಗಳಲ್ಲಿ ಹೋಮಿಯೋಪಥಿ ಸ್ನಾತಕೋತ್ತರ ಪದವಿ ಕೋರ್ಸ್ಗಳನ್ನು ನಡೆಸುತ್ತಿದೆ ಎಂದರು.
ಪದವಿ ಪ್ರದಾನ ಸಮಾರಂಭದಲ್ಲಿ 100 ಹೋಮಿಯೋಪಥಿ ಪದವಿ ಹಾಗೂ 27ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಅತ್ಯುತ್ತಮ ಸಾಧನೆಗೈದ ಮತ್ತು ರ?ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದ್ದು ಮಂಗಳೂರಿನ ಬಿಷಪ್ ಹಾಗೂ ಫಾ. ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷ ರೆ.ಫಾ. ಡಾ. ಪೀಟರ್ ಪೌಲ್ ಸಲ್ದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯ ನಿರ್ದೇಶಕ ಡಾ.ಎಚ್.ಜಿ. ಮಂಜುನಾಥ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ರೆ. ಫಾ. ರೋಶನ್ ಕ್ರಾಸ್ತಾ, ಸಹ ಆಡಳಿತಾಧಿಕಾರಿ ರೆ. ಫಾ. ರೋಹನ್ ಡಯಾಸ್, ಸಂಸ್ಥೆಯ ಪ್ರಿನ್ಸಿಪಾಲ್ ಡಾ.ಇ.ಎಸ್.ಜೆ. ಪ್ರಭು ಕಿರಣ್, ವೈಸ್ ಪ್ರಿನ್ಸಿಪಾಲ್ ಡಾ. ವಿಲ್ಮಾ ಮೀರಾ ಡಿಸೋಜ, ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ, ಪದವಿ ಪ್ರದಾನ ಕಾರ್ಯಕ್ರಮ ಸಂಯೋಜಕ ಡಾ. ರಂಜನ್ ಬ್ರಿಟ್ಟೋ ಹಾಗೂ ಮಾಧ್ಯಮ ಸಮಿತಿ ಸಂಯೋಜಕಿ ಡಾ. ಶರ್ಲಿನ್ ಪೌಲ್ ಉಪಸ್ಥಿತರಿದ್ದರು.

ಹೋಮಿಯೋಪಥಿ ಸ್ಪೆಷಾಲಿಟಿ ಕ್ಲಿನಿಕ್ ಉದ್ಘಾಟನೆ:
ಆ. 6ರಂದು ಉದ್ಘಾಟನೆಗೊಳ್ಳಲಿರುವ ಹೋಮಿಯೋಪಥಿ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಡಯಾಬಿಟಿಸ್, ಕ್ಯಾನ್ಸರ್, ಗಂಟು ಸವೆತ, ಆಸ್ಟಿಯೋ ಆರ್ಥರೈಟಿಸ್ ಕ್ಲಿನಿಕ್, ಮೂಳೆ ಸವೆತ, ಮುಟ್ಟು, ಬಂಜೆತನ, ಅಲರ್ಜಿ, ಸಂಧಿವಾತ, ಮೂತ್ರಪಿಂಡದಲ್ಲಿ ಕಲ್ಲು, ಬೆನ್ನುನೋವು, ತಲೆನೋವು, ಮೈಗ್ರೇನ್, ಥೈರಾಯ್ಡ್, ಸೋರಿಯಾಸಿಸ್, ಚರ್ಮ ರೋಗ ಸೇರಿದಂತೆ ಎಲ್ಲ ಬಗೆಯ ರೋಗಕ್ಕೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳು ಲಭ್ಯವಾಗಲಿವೆ

Related Posts

Leave a Reply

Your email address will not be published.